ಬ್ರೇಕಿಂಗ್ : ಕಿಲ್ಲರ್ ಕೊರೊನಾಗೆ ಟಿಎಂಸಿ ಶಾಸಕ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತಾ, ಜೂ.24- ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ತಾವೋನಾಶ್ ಘೋಷ್(60) ಕಿಲ್ಲರ್ ಕೊರೊನಾ ಸೋಂಕಿನಿಂದ ಇಂದು ಮುಂಜಾನೆ ಮೃತಪಟ್ಟಿದ್ದಾರೆ.

ಮೇ ತಿಂಗಳಿನಲ್ಲಿ ಕೋವಿಡ್-19 ಸೋಂಕು ದೃಢಪಟ್ಟ ನಂತರ ಚಿಕಿತ್ಸೆಯಲ್ಲಿದ್ದ ಘೋಷ್ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಸೌತ್ 24 ಪರಗಣ ಜಿಲ್ಲೆಯ ಫಲ್ಟಾ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಚುನಾಯಿತರಾಗಿದ್ದ ಘೋಷ್, ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಭಾವಿ ಶಾಸಕರಾಗಿದ್ದರು. ಅಲ್ಲದೆ, 1998ರಿಂದಲೂ ಪಕ್ಷದ ಕೋಶಾಧ್ಯಕ್ಷ (ಖಜÁಂಚಿ) ಆಗಿದ್ದರು. ಕಳೆದ 35 ವರ್ಷಗಳಿಂದ ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದ ಅವರು ಜನಾನುರಾಗಿಯಾಗಿದ್ದರು.

ಹೃದ್ರೋಗ ಮತ್ತು ಮೂತ್ರಪಿಂಡ ಸಮಸ್ಯೆಗಳಿಂದಲೂ ಬಳಲುತ್ತಿದ್ದ ಅವರಿಗೆ ಮೇ ತಿಂಗಳಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಶಾಸಕ ಘೋಷ್ ನಿಧನಕ್ಕೆ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಸಚಿವರು, ಸಂಸದರು ಮತ್ತು ಪಕ್ಷದ ಶಾಸಕರು, ಮುಖಂಡರೂ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಡಿಎಂಕೆ ಶಾಸಕ ಅನ್ಬಳಗನ್ ಅವರು ಇತ್ತೀಚೆಗೆ ಕೊರೊನಾ ಸೋಂಕಿಗೆ ಬಲಿಯಾಗಿದ್ದರು.

Facebook Comments

Sri Raghav

Admin