ಪಶ್ಛಿಮ ಬಂಗಾಳ ಚುನಾವಣೆ : ಬಿಜೆಪಿಗೆ ಸಮಾಧಾನ ನೀಡಿದೆ ಈ ವಿಷಯ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತ್ತಾ,ಮೇ-4. ಪಶ್ಛಿಮ ಬಂಗಾಳ ವಿಧಾನಸಭೆ ಚುನಾವಣೆ ಪಲಿತಾಂಶ ಸಂಪೂರ್ಣವಾಗಿದ್ದು ಚುನಾವಣಾ ಆಯೋಗ ಶೇಕಡವಾರು ಮತಗಳಿಕೆ ಅಂಕಿ ಅಂಶ ಬಿಡುಗಡೆ ಮಾಡಿದ್ದು ಭರ್ಜರಿ ಗೆಲುವು ದಾಖಲಿಸಿರುವ ತೃಣಮೂಲ ಕಾಂಗ್ರೇಸ್ (ಟಿಎಂಸಿ) ಹೆಚ್ಚು ಸ್ಥಾನ ಗಳಿಸಿದೆ ಆದರೆ ಮತದಾನದ ಶೇ. 50 ದಾಟಿಲ್ಲ..!

ಚು.ಆಯೋಗ ನೀಡಿರುವ ಮಾಹಿತಿಯಲ್ಲಿ ಟಿಎಂಸಿ ಶೇ. 48 (47.94) ರಷ್ಟು ಮತಪಡೆದರೆ ,ಭಾರಿ ಪೈಪೋಟಿ ನೀಡಿರುವ ಬಿಜೆಪಿ 77 ಸ್ಥಾನ ಗಳಿಸಿದೆ ಅದರೆ ಶೇ.39 (38.13) ಮತಪಡೆದಿದೆ. ಅನೇಕ ಕಡೆ 1000 ಮತಗಳ ಆಂತರದಲ್ಲಿ ಅಭ್ಯರ್ಥಿಗಳು ಸೋತಿದ್ದಾರೆ. ಕಳೆದ 5 ವರ್ಷದಲ್ಲಿ ಕೇಸರಿ ಪಡೆ ಭಲವರ್ಧನೆ ಮಾಡಿಕೊಂಡಿದೆ.

ಪಶ್ಛಿಮ ಬಂಗಾಳ ದಲ್ಲಿ 3 ದಶಕಗಳ ಆಡಳಿತ ನಡೆಸಿದ್ದ ಎಡರಂಗ ಸಿಪಿಐ- ಸಿಪಿಎಂ ಶೇ.6 ದಾಟಿಲ್ಲ ಕಾಂಗ್ರೇಸ್ ಕೂಡ ಶೇ. 4 .13. ಉಳಿದಂತೆ ಸ್ಪರ್ಧಿಸಿದ ಪಕ್ಷಗಳು ಟಿಎಂಸಿ -ಬಿಜೆಪಿ ಆರ್ಭಟಕ್ಕೆ ನಲುಗಿದೆ.

Facebook Comments

Sri Raghav

Admin