ಸಂತ್ರಸ್ತರ ಭೇಟಿಗೆ ಟಿಎಂಸಿ ನೀಯೋಗಕ್ಕೆ ತಡೆ

ಈ ಸುದ್ದಿಯನ್ನು ಶೇರ್ ಮಾಡಿ

ವಾರಣಾಸಿ,ಜು.19- ಗುಂಪು -ಘರ್ಷಣೆ ಮತ್ತು ಶೂಟೌಟ್‍ನಲ್ಲಿ ಹತರಾದ 10 ಮಂದಿಯ ಕುಟುಂಬಸ್ಥರನ್ನು ಭೇಟಿ ಮಾಡಲು ತೆರಳಿದ್ದ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್(ಟಿಎಂಸಿ) ನೀಯೋಗಕ್ಕೆ ಪೊಲೀಸರು ಇಲ್ಲಿನ ವಿಮಾನ ನಿಲ್ದಾಣದಲ್ಲಿ ತಡೆಯೊಡ್ಡಿದರು.

ಟಿಎಂಸಿ ಮುಖಂಡ ಸುನೀಲ್‍ಮಂಡಲ್ ನೇತೃತ್ವದ ಸಂಸದರಾದ ಡೆರಿಕ್ ಒಬ್ರಿಯಾನ್ ಮತ್ತು ಅಬೀರ್ ರಂಜನ್ ಬಿಸ್ವಾಸ್ ಅವರನ್ನೊಳಗೊಂಡ ನಿಯೋಗ ಇಂದು ಬೆಳಗ್ಗೆ ವಾರಣಾಸಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಏರ್‍ಫೋರ್ಟ್‍ನಲ್ಲಿದ್ದ ಪೊಲೀಸರು ನಿಯೋಗವನ್ನು ತಡೆದರು.

ಸಂತ್ರಸ್ತರನ್ನು ಭೇಟಿ ಮಾಡಲು ಮತ್ತು ಅವರಿಗೆ ಸಾಂತ್ವಾನ ಹೇಳುವ ಉದ್ದೇಶದಿಂದ ನಾವು ಬಂದಿದ್ದೇವೆ ಹೊರತು ಯಾವುದೇ ರಾಜಕೀಯ ದುರದ್ದೇಶದಿಂದಲ್ಲ ಎಂದು ನಿಯೋಗ ಪೊಲೀಸರಿಗೆ ಮನವಿ ಮಾಡಿಕೊಟ್ಟರೂ ಪ್ರಯೋಜನವಾಗಲಿಲ್ಲ.  ಉತ್ತರಪ್ರದೇಶ ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಧೋರಣೆಗೆ ಟೆಹ್ರಾನ್ ಒಬ್ರಿಯಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Facebook Comments