ಟಿಎಂಸಿಸಿಯ ಏಕ ವ್ಯಕ್ತಿ ಗ್ರಾಹಕ ಸೇವಾ ಕೇಂದ್ರ ಉದ್ಘಾಟನೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜೂ. 29- ಗುಬ್ಬಿ ಗೇಟ್‍ನಲ್ಲಿ ಆರಂಭವಾಗಿರುವ ಟಿಎಂಸಿಸಿಯ ಏಕ ವ್ಯಕ್ತಿ ಗ್ರಾಹಕ ಸೇವಾ ಕೇಂದ್ರ ಮತ್ತು ಎಟಿಎಂ ಕೇಂದ್ರವನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಉದ್ಘಾಟಿಸಿದರು.

ನಂತರ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸಹಕಾರಿ ಕ್ಷೇತ್ರದಲ್ಲಿ ಹೊಸ ದಾಖಲೆ ಮಾಡುತ್ತಿದೆ ಎಂದರು.

ಬ್ಯಾಂಕ್ ಅಧ್ಯಕ್ಷ ಎನ್.ಎಸ್. ಜಯಕುಮಾರ್ ಅವರು ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಅನೇಕ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದ್ದಾರೆ.

ಈ ಸಂಸ್ಥೆ ಮತ್ತಷ್ಟು ಬೃಹದಾಕಾರವಾಗಿ ಬೆಳೆಯಲಿ ಎಂದು ಆಶಿಸಿದರು. ಟಿಎಂಸಿಸಿ ಅಧ್ಯಕ್ಷ ಎನ್.ಆರ್. ಜಯಕುಮಾರ್ ಮಾತನಾಡಿ, ಗ್ರಾಹಕರಿಗೆ ಒಂದೇ ಕಡೆ ಎಲ್ಲ ರೀತಿಯ ಸೌಲಭ್ಯ ದೊರೆಯಲಿ ಎಂಬ ಉದ್ದೇಶದಿಂದ ಏಕ ವ್ಯಕ್ತಿ ಗ್ರಾಹಕ ಕೇಂದ್ರವನ್ನು ಸ್ಥಾಪಿಸಲಾಗಿದೆ. ಆರ್‍ಟಿಜಿಎಸ್, ನೆಫ್ಟ್, ಉಳಿತಾಯ ಖಾತೆ, ಕರಂಟ್ ಅಕೌಂಟ್ ಎಲ್ಲ ರೀತಿಯ ಸೌಲಭ್ಯಗಳು ಜನರಿಗೆ ಹತ್ತಿರದಲ್ಲೇ ದೊರೆಯಲಿ ಎಂಬ ಉದ್ದೇಶ ನಮ್ಮದಾಗಿದೆ ಎಂದರು.

ಸದ್ಯದಲ್ಲೇ ನಗರದ ಯಲ್ಲಾಪುರದಲ್ಲೂ ಇದೇ ರೀತಿಯ ಶಾಖೆಯನ್ನು ಸ್ಥಾಪನೆ ಮಾಡಲಾಗುವುದು. ಈ ಸೇವೆಯನ್ನು ನಗರದಾದ್ಯಂತ ವಿಸ್ತರಿಸುವ ಗುರಿ ಹೊಂದಲಾಗಿದೆ. ಹನುಮಂತಪುರ, ಜಯನಗರ, ಕ್ಯಾತ್ಸಂದ್ರ, ಸದಾಶಿವನಗರ. ತಾಲ್ಲೂಕು ಕೇಂದ್ರಗಳಲ್ಲೂ ಈ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದರು. ಸಂಸದ ಜಿ.ಎಸ್. ಬಸವರಾಜು, ಬ್ಯಾಂಕ್ ಉಪಾಧ್ಯಕ್ಷ ಶ್ರೀಕರ ಸೇರಿದಂತೆ ಬ್ಯಾಂಕ್‍ನ ನಿರ್ದೇಶಕರುಗಳು, ಬ್ಯಾಂಕ್ನ ಸಿಇಓ, ಸಿಬ್ಬಂದಿ ಉಪಸ್ಥಿತರಿದ್ದರು.

Facebook Comments