ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಷರತ್ತು ವಿಧಿಸಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.27- ತಂಬಾಕು ಉತ್ಪನ್ನಗಳ ಮಾರಾಟ ಮಾಡಲು ಎಲ್ಲ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳು ಪರವಾನಿಗೆ ಹೊಂದಿರಬೇಕು. ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಅಂಗಡಿಗಳಲ್ಲಿ ಪರವಾನಿಗೆ ಕಾಣುವಂತೆ ಹಾಗೂ ಪ್ರತಿವರ್ಷ ನವೀಕರಣಗೊಳಿಸುವಂತೆ ಭಾರತೀಯ ತಂಬಾಕು ಮಾರಾಟಗಾರರ ಪರವಾನಿಗೆ ಜಾರಿ ಚೌಕಟ್ಟು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ.

ಎನ್‍ಎಲ್‍ಎಸ್‍ಐಯು ಸಲ್ಲಿಸಿರುವ ವರದಿಯ ಪ್ರಕಾರ ಚಾಕಲೇಟ್, ಬಿಸ್ಕೆಟ್, ಚಿಪ್ಸ್ ಮುಂತಾದ ಉತ್ಪನ್ನಗಳು ತಂಬಾಕು ಮಾರಾಟ ಅಂಗಡಿಯಲ್ಲಿ ನಿಷೇಧಿಸಬೇಕು ಎಲ್ಲಾ ತಂಬಾಕು ಮಾರಾಟಗಾರರು ಚಿಲ್ಲರೆ ಅಥವಾ ಸಗಟು ವ್ಯಾಪಾರಿಗಳು ಪ್ರತಿವರ್ಷ ಪರವಾನಿಗೆ ನವೀಕರಿಸಬೇಕು ಎಂದು ತಿಳಿಸಿದೆ.

ಈ ನಿರ್ಬಂಧನೆಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದ ಅಂಗಡಿಗಳಿಗೆ ಹಂತಹಂತವಾಗಿ ದಂಡ ವಿಧಿಸುವುದು ಮತ್ತು ಅಂತಿಮವಾಗಿ ಪರವಾನಿಗೆ ರದ್ದುಗೊಳಿಸುವ ಮೂಲಕ ಕ್ರಮ ಕೈಗೊಳ್ಳಬೇಕು. ತಂಬಾಕು ಬಳಕೆದಾರರ ಜಾಗತಿಕ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು ಪ್ರತಿವರ್ಷ ಸುಮಾರು 12 ಲಕ್ಷ ಮಂದಿ ತಂಬಾಕು ಸಂಬಂಧಿತ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Facebook Comments