ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-12-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕಠಿಣವಾದ ಕೆಲಸಗಳು ಅಸಾಧ್ಯವೆಂದಲ್ಲ. ಕಠಿಣವಾದ ಕೆಲಸಗಳಿಗೆ ಹೆಚ್ಚಿಗೆ ಕಷ್ಟ ಪಡಬೇಕಾಗುತ್ತದೆ.

# ಪಂಚಾಂಗ : ಶುಕ್ರವಾರ , 03-12-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಕಾರ್ತೀಕ ಮಾಸ / ಕೃಷ್ಣ ಪಕ್ಷ /ತಿಥಿ: ಚತುರ್ದಶಿ/ ನಕ್ಷತ್ರ: ವಿಶಾಖಾ/ ಮಳೆ ನಕ್ಷತ್ರ: ಅನೂರಾಧ

* ಸೂರ್ಯೋದಯ : ಬೆ.06.27
* ಸೂರ್ಯಾಸ್ತ : 05.52
* ರಾಹುಕಾಲ : 9.00-10.30
* ಯಮಗಂಡ ಕಾಲ : 1.30-3.00
* ಗುಳಿಕ ಕಾಲ : 6.00-7.30

# ಇಂದಿನ ಭವಿಷ್ಯ
ಮೇಷ: ಹಣಕಾಸು ಸಮಸ್ಯೆಯಿಂದಾಗಿ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಕುಟುಂದಲ್ಲಿ ಸ್ವಲ್ಪಮಟ್ಟಿನ ಅಸಂತೋಷ ಕಾಣಿಸಿಕೊಳ್ಳಬಹುದು.
ವೃಷಭ: ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡುವ ಅವಕಾಶ ಸಿಗಬಹುದು.
ಮಿಥುನ: ವೈವಾಹಿಕ ಜೀವನದಲ್ಲಿ ಸಂಗಾತಿ ಯೊಂದಿಗೆ ಕೆಲ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡು ಸಮಸ್ಯೆಗಳು ಎದುರಾಗಬಹುದು.

ಕಟಕ: ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ.
ಸಿಂಹ: ವೃತ್ತಿಜೀವನದಲ್ಲಿ ಅನೇಕ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಹಣಕಾಸು ನಷ್ಟದಿಂದ ಸ್ವಲ್ಪ ನಿರಾಸೆ ಅನುಭವಿಸುವಿರಿ.
ಕನ್ಯಾ:ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆಗಳಿದ್ದು, ಇದಕ್ಕಾಗಿ ಕೆಲ ಸಮಯ ಕಾಯಬೇಕಾಗುತ್ತದೆ.

ತುಲಾ: ಆರೋಗ್ಯದ ಸಮಸ್ಯೆ ಕಾಣಿಸಿಕೊಂಡು ಚಿಂತೆ ಹೆಚ್ಚಾಗಬಹುದು. ಹೀಗಾಗಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಒಳಿತು.
ವೃಶ್ಚಿಕ: ಸಂಗಾತಿ ಸಹಕಾರದಿಂದ ಹೊರಗಿನ ಕೆಲಸದಲ್ಲಿ ಉತ್ತಮ ಸಾಧನೆ ಮಾಡುವಿರಿ.
ಧನುಸ್ಸು: ಹಣಕಾಸು ವಿಚಾರದಲ್ಲಿ ಸಮಸ್ಯೆ ಗಳಿದ್ದರೂ ಕಠಿಣ ಪರಿಶ್ರಮದಿಂದ ಪಾರಾಗುವಿರಿ.

ಮಕರ: ಪ್ರತಿಯೊಂದು ವಿಷಯವನ್ನೂ ಅರ್ಥ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ.
ಕುಂಭ: ವಿಶೇಷ ವ್ಯಕ್ತಿಯೊಬ್ಬರು ಆಗಮಿಸಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.
ಮೀನ: ಬಹಳಷ್ಟು ಶ್ರಮ ವಹಿಸಿದರೆ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಬಹುದು.

Facebook Comments