ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-12-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯನಿಗೆ ಹೊರಗಿನ ಜಗತ್ತು ಸಮಸ್ಯೆಯಲ್ಲ. ತನ್ನ ಸ್ವಾರ್ಥಕ್ಕಾಗಿ ಕಂಡದ್ದನ್ನೆಲ್ಲ ತನ್ನದಾಗಿಸಿಕೊಳ್ಳಬೇಕೆಂದು ಹವಣಿಸುವುದೇ ನಿಜವಾದ ಸಮಸ್ಯೆ.

# ಪಂಚಾಂಗ : ಭಾನುವಾರ , 05-12-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಕಾರ್ತೀಕ ಮಾಸ / ಕೃಷ್ಣ ಪಕ್ಷ /ತಿಥಿ: ಪ್ರತಿಪದ್, ದ್ವಿತೀಯಾ/ ನಕ್ಷತ್ರ: ಜ್ಯೇಷ್ಠಾ/ ಮಳೆ ನಕ್ಷತ್ರ: ಅನೂರಾಧ

* ಸೂರ್ಯೋದಯ : ಬೆ.06.28
* ಸೂರ್ಯಾಸ್ತ : 05.52
* ರಾಹುಕಾಲ : 4.30-6.00
* ಯಮಗಂಡ ಕಾಲ : 12.00-1.30
* ಗುಳಿಕ ಕಾಲ : 1.30-3.00

# ಇಂದಿನ ಭವಿಷ್ಯ
ಮೇಷ: ಉದ್ಯೋಗ, ವ್ಯಾಪಾರ-ವ್ಯವಹಾರಗಳಲ್ಲಿ ನಿಮ್ಮ ವರ್ಚಸ್ಸನ್ನು ಕಳೆದುಕೊಳ್ಳದಿರಿ. ಆದ್ದರಿಂದ ಎಲ್ಲಿ ಅಗತ್ಯವೋ ಅಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಿ.
ವೃಷಭ: ವಿದೇಶ ಪ್ರಯಾಣ ಮಾಡಬೇಕು ಎಂದಿದ್ದಲ್ಲಿ ಅಲ್ಪಾವಯ ಪ್ರಯಾಣ ಮಾಡಬಹುದು.
ಮಿಥುನ: ಅಡ್ಡದಾರಿ ಮೂಲಕ ಹಣ ಮಾಡುವ ಆಲೋಚನೆ ನಿಮಗೆ ಬಂದಲ್ಲಿ ಮನಸ್ಸನ್ನು ಹತೋಟಿಯಲ್ಲಿ ಇರಿಸಿಕೊಳ್ಳುವುದು ಒಳ್ಳೆಯದು.

ಕಟಕ: ದೂರ ಪ್ರಯಾಣ ಮಾಡುವಂಥವರು, ಉದ್ಯೋಗಸ್ಥರು ಹೆಚ್ಚು ಎಚ್ಚರಿಕೆ ವಹಿಸಬೇಕಾಗಿದೆ.
ಸಿಂಹ: ಸ್ನೇಹಿತರನ್ನು ಕಳೆದು ಕೊಳ್ಳಬೇಕಾದ ಸನ್ನಿವೇಶ ಎದುರಾಗಬಹುದಾದ್ದರಿಂದ ಆ ಸನ್ನಿವೇಶ ನಿಭಾಯಿಸಲು ಮುಂಚಿತವಾಗಿಯೇ ಸಿದ್ಧರಾಗಿ.
ಕನ್ಯಾ: ನಂಬಿಕೆ ಎಂಬ ಸಂಗತಿ ಬಂದಾಗ ಎಚ್ಚರಿಕೆ ಯಿಂದ ಹೆಜ್ಜೆ ಇಡಿ. ಹಣಕಾಸಿನ ಹರಿವು ಉತ್ತಮವಾಗಿರುತ್ತದೆ.

ತುಲಾ: ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಕಾಡಬಹುದು. ಯಶಸ್ಸನ್ನು ಸಂಭಾಳಿಸುವುದು ಕಷ್ಟಸಾಧ್ಯವಾಗಲಿದೆ.
ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ವ್ಯಾಜ್ಯ ತಲೆದೋರಬಹುದು. ಯಾರ ಬಗ್ಗೆಯೂ ಹಗುರವಾದ ಮಾತನಾಡದಿರಿ.
ಧನುಸ್ಸು: ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಆದರೆ, ನೀವು ಯಾವುದಕ್ಕೆ ಪ್ರಯತ್ನ ಪಡುತ್ತೀರಿ ಎಂಬುದರ ಮೇಲೆ ಫಲ ನಿಶ್ಚಯವಾಗಲಿದೆ.

ಮಕರ: ನಿಮಗೆ ಬರಬೇಕಾದ ಹಳೇ ಬಾಕಿ ಇದ್ದಲ್ಲಿ ಬರಬಹುದು. ಅದನ್ನು ಆಪತ್ಕಾಲಕ್ಕೆಂದು ಎತ್ತಿಟ್ಟುಕೊಳ್ಳಿ.
ಕುಂಭ: ವಿದ್ಯಾರ್ಥಿಗಳು ಮೊಬೈಲ್, ಟಿವಿ ನೋಡುವುದರಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳದಿರಿ.
ಮೀನ: ದುಡ್ಡಿನ ವಿಚಾರದಲ್ಲಿ ಪಾರದರ್ಶಕವಾಗಿರಿ. ಧಾರ್ಮಿಕ ಕಾರ್ಯಗಳಿಗೆ ಹಣ ಖರ್ಚಾಗಲಿದೆ.

Facebook Comments