ಇಂದಿನ ಪಂಚಾಂಗ ಮತ್ತು ರಾಶಿಫಲ (16-12-2019- ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದೊಡ್ಡವರಲ್ಲಿ ಅಪರಾಧವೆಸಗಿದವನು `ನಾನು ದೂರದಲ್ಲಿದ್ದೇನೆ’ ಎಂದು ಸಮಾಧಾನ ಮಾಡಿಕೊಳ್ಳಕೂಡದು. ಬುದ್ಧಿವಂತರ ತೋಳುಗಳು ಬಹಳ ಉದ್ದವಾಗಿವೆ! ಅವುಗಳಿಂದ ಅವನು ಹಿಂಸೆ ಮಾಡಿದವನನ್ನು ಹಿಂಸಿಸುತ್ತಾನೆ.-ಪಂಚತಂತ್ರ

# ಪಂಚಾಂಗ : ಸೋಮವಾರ, 16.12.2019
ಸೂರ್ಯ ಉದಯ ಬೆ.06.34 / ಸೂರ್ಯ ಅಸ್ತ ಸಂ.05.56
ಚಂದ್ರ ಉದಯ ಬೆ.10.03 / ಚಂದ್ರ ಅಸ್ತ ಬೆ.10.11
ವಿಕಾರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು, / ಮಾರ್ಗಶಿರ ಮಾಸ / ಕೃಷ್ಣ ಪಕ್ಷ
ತಿಥಿ: ಪಂಚಮಿ (ರಾ.03.40) / ನಕ್ಷತ್ರ: ಆಶ್ಲೇಷ, (ರಾ.02.47) / ಯೋಗ: ವೈಧೃತಿ
(ರಾ.02.01) / ಕರಣ: ಕೌಲವ-ತೈತಿಲ (ಸಾ.04.38-ರಾ.03.40) / ಮಳೆ ನಕ್ಷತ್ರ: ಮೂಲಾ
(ಪ್ರ.ಮ.03.28) / ಮಾಸ: ಧನುರ್ಮಾಸ / ತೇದಿ: 01

# ರಾಶಿ ಭವಿಷ್ಯ
ಮೇಷ: ಸರ್ಕಾರಿ ಕೆಲಸದಲ್ಲಿ ರುವ ನೌಕರರಿಗೆ ರಾಜೀನಾಮೆ ನೀಡುವ ಪರಿಸ್ಥಿತಿ ತಲೆದೋರಬಹುದು
ವೃಷಭ: ಕೆಲವು ಕಾರ್ಯಗಳಲ್ಲಿ ಜಯ ಸಿಗಲಿದೆ
ಮಿಥುನ: ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ನಡೆಸಿದರೆ ಉತ್ತಮ
ಕಟಕ: ಆದಾಯ ಹೆಚ್ಚುವುದು. ಆದರೆ ಖರ್ಚು ಕೂಡ ಬರಬಹುದು
ಸಿಂಹ: ಅಧಿಕಾರಿಗಳಿಂದ ತೊಂದರೆಗಳಾಗಬಹುದು
ಕನ್ಯಾ:ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನವಿರಲಿ
ತುಲಾ: ಪ್ರೇಮಿಗಳಿಗೆ ಉತ್ತಮವಾದ ಅವಕಾಶಗಳಿವೆ
ವೃಶ್ಚಿಕ: ಬಂಧು-ಮಿತ್ರರಲ್ಲಿ ಮನಸ್ತಾಪ ಉಂಟಾಗಲಿದೆ
ಧನುಸ್ಸು: ಸಾಮಾನ್ಯ ನಿಶ್ಯಕ್ತಿ ಕಾಡಲಿದೆ
ಮಕರ: ದಾಂಪತ್ಯ ಜೀವನ ಸುಖಮಯವಾಗಿರುವುದು
ಕುಂಭ: ಅಪನಿಂದೆಗೆ ಗುರಿಯಾಗಲೂಬಹುದು.
ಮೀನ: ನಿಷ್ಠೂರದ ಮಾತುಗಳನ್ನು ಕೇಳಬೇಕಾಗಬಹುದು. ಶತೃಗಳಿಂದ ದೂರವಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments

Sri Raghav

Admin