ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-11-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಾವು ಮಾತನಾಡುವ ಪರಿ ಬೇರೊಬ್ಬರು ಪ್ರೀತಿಯಿಂದ ಕೇಳಿಸಿಕೊಳ್ಳುವಂತಿರಬೇಕು. ನಾವು ಕೇಳಿಸಿಕೊಳ್ಳುವ ಪರಿಯೂ ಕೂಡ ಬೇರೊಬ್ಬರು ಪ್ರೀತಿಯಿಂದ ನಮ್ಮೊಂದಿಗೆ ಮಾತನಾಡುವಂತಿರಬೇಕು.

# ಪಂಚಾಂಗ : ಗುರುವಾರ, 18-11-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಭರಣಿ / ಮಳೆ ನಕ್ಷತ್ರ: ವಿಶಾಖ

ಸೂರ್ಯೋದಯ : ಬೆ.06.20
ಸೂರ್ಯಾಸ್ತ : 05.50

ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

#ಇಂದಿನ ರಾಶಿಭವಿಷ್ಯ
ಮೇಷ: ಹಣ ಬರುತ್ತಿದೆ ಅಥವಾ ಬರಲಿದೆ ಎಂಬ ಕಾರಣಕ್ಕೆ ವಿಪರೀತ ಖರ್ಚು ಮಾಡದೆ ಉಳಿತಾಯದ ಕಡೆಗೂ ಗಮನ ನೀಡಿ.
ವೃಷಭ: ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್ ಮೆಂಟ್‍ನಲ್ಲಿ ಉದ್ಯೋಗ ದೊರೆಯುವ ಯೋಗವಿದೆ.
ಮಿಥುನ: ನಿಮ್ಮ ಹಾಗೂ ಸಂಗಾತಿಯ ಮಧ್ಯೆ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳುವುದು. ಆದರೆ ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.

ಕಟಕ: ಇಷ್ಟಪಟ್ಟವರೊಂದಿಗೆ ನಿಮ್ಮ ಪ್ರೀತಿಯನ್ನು ಪ್ರಸ್ತಾಪಿಸಲು ಬಯಸಿದರೆ ಸಕಾರಾತ್ಮಕ ಪ್ರತಿಕ್ರಿಯೆ ನಿರೀಕ್ಷಿಸಬಹುದು.
ಸಿಂಹ: ವೈಯಕ್ತಿಕ ಅಥವಾ ವೃತ್ತಿಪರ ಕಾರಣ ಗಳಿಂದಾಗಿ ಪ್ರಯಾಣ ಮಾಡಬೇಕಾಗಬಹುದು.
ಕನ್ಯಾ: ನಿರುದ್ಯೋಗಿಗಳಿಗೆ ಅಪೇಕ್ಷಿತ ಅವಕಾಶಗಳು ಲಭಿಸಲಿವೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ.

ತುಲಾ: ಆದಾಯ ಉತ್ತಮವಾಗಿದ್ದರೂ ಖರ್ಚೂ ಸಹ ಇರುತ್ತದೆ. ಆಪ್ತರು, ಪ್ರೀತಿಪಾತ್ರರನ್ನು ಭೇಟಿ ಮಾಡುವ ಅವಕಾಶ ನಿಮಗೆ ಸಿಗುತ್ತದೆ.
ವೃಶ್ಚಿಕ: ಯಾವುದೇ ಕಾರ್ಯದಲ್ಲೂ ಉತ್ತಮ ಸಾಧನೆ ಮಾಡಿ, ಯಶಸ್ಸು ಸಾಸುವಿರಿ.
ಧನುಸ್ಸು: ವಿಶ್ರಾಂತಿಯಿರದ ಕೆಲಸ-ಕಾರ್ಯಗಳು ಆರೋಗ್ಯದಲ್ಲಿ ಸಮಸ್ಯೆಯನ್ನುಂಟು ಮಾಡಬಹುದು.

ಮಕರ: ಹಿರಿಯ ಆಶೀರ್ವಾದ ಪಡೆದು ಕೆಲಸ-ಕಾರ್ಯಗಳನ್ನು ಪ್ರಾರಂಭಿಸುವುದು ಒಳಿತು.
ಕುಂಭ: ವ್ಯವಹಾರದಲ್ಲಿ ಎಂದೂ ನಿರೀಕ್ಷಿಸಿರದ ರೀತಿಯಲ್ಲಿ ಅದ್ಭುತ ಯಶಸ್ಸನ್ನು ಪಡೆಯುವಿರಿ.
ಮೀನ: ಕೆಲಸದ ಮಧ್ಯೆ ವಿಶ್ರಾಂತಿ ತೆಗೆದು ಕೊಳ್ಳುವುದು ಅವಶ್ಯಕ. ಇಲ್ಲದಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

Facebook Comments

Sri Raghav

Admin