ಇಂದಿನ ಪಂಚಾಗ ಮತ್ತು ರಾಶಿಫಲ (02-12-2019- ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪುಣ್ಯಕಾರ್ಯಗಳಿಂದ ಶರೀರಕ್ಕೆ ಸುಖವುಂಟಾಗುತ್ತದೆ. ಪಾಂಡಿತ್ಯದಿಂದ ಮನಸ್ಸಿಗೆ ಸುಖವುಂಟಾಗುತ್ತದೆ. ಬೇರೆಯವರಿಗೋಸ್ಕರ ಜಗತ್ತಿನಲ್ಲಿ ಜೀವಿಸುವ ಕೃಪಾಳುವಿಗೆ ದುಃಖವಾಗಲು ಕಾರಣವೇ ಇಲ್ಲ.  –ಬೋಧಿಚರ್ಯಾವತಾರ

# ಪಂಚಾಂಗ : ಸೋಮವಾರ, 02.12.2019
ಸೂರ್ಯ ಉದಯ : ಬೆ.06.26, ಸೂರ್ಯ ಅಸ್ತ ಸಂ.05.52
ಚಂದ್ರ ಉದಯ ಬೆ.11.18 / ಚಂದ್ರ ಅಸ್ತ ರಾ.10.40
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು, / ಕಾರ್ತಿಕ ಮಾಸ / ಕೃಷ್ಣ ಪಕ್ಷ
ತಿಥಿ: ಷಷ್ಠೀ (ರಾ.09.00) / ನಕ್ಷತ್ರ: ಶ್ರವಣ (ಬೆ.11.43) / ಯೋಗ: ಧ್ರುವ (ಮ.01.37)
ಕರಣ: ಕೌಲವ-ತೈತಿಲ (ಬೆ.08.02-ರಾ.09.00) / ಮಳೆ ನಕ್ಷತ್ರ: ಅನೂರಾಧ / ಮಾಸ: ವೃಶ್ಚಿಕ / ತೇದಿ: 16

# ರಾಶಿ ಭವಿಷ್ಯ
ಮೇಷ: ಜಮೀನು ಖರೀದಿ ವಿಚಾರದಲ್ಲಿ ಸಹೋದರ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಿರಿ
ವೃಷಭ: ನಿಮ್ಮನ್ನು ನೀವು ಅರ್ಥೈಸಿಕೊಳ್ಳುವ ಪರಿ ಎಲ್ಲರಿಗೂ ಸೋಜಿಗವನ್ನುಂಟು ಮಾಡುವುದು
ಮಿಥುನ: ನೆರೆಯವರ ಮಧ್ಯಸ್ಥಿಕೆಯಿಂದ ಮಗಳ ಮದುವೆ ನಿಶ್ಚಯವಾಗಲಿದೆ
ಕಟಕ: ತಂದೆ-ತಾಯಿ, ಸಹೋದರಿಯರಿಂದ ಸಂತೋಷ ಸಿಗಲಿದೆ
ಸಿಂಹ: ದೂರ ಪ್ರಯಾಣದಿಂದ ಆರೋಗ್ಯದಲ್ಲಿ ವ್ಯತ್ಯಂ
ಕನ್ಯಾ: ಖರ್ಚು ಕಡಿಮೆ ಮಾಡುವುದು ಉತ್ತಮ
ತುಲಾ: ಮಗನ ಆಗಮನಕ್ಕಾಗಿ ಎದುರು ನೋಡುವಿರಿ
ವೃಶ್ಚಿಕ: ವಾಹನ ಮಾರಾಟಗಾರರಿಗೆ ಅಧಿಕ ಲಾಭ
ಧನುಸ್ಸು: ಷೇರು ವ್ಯವಹಾರದಲ್ಲಿ ಹೊಸ ಅನುಭವ
ಮಕರ: ರಾಜಿಯಾಗುವ ಮನೋಭಾವ ಬೆಳೆಸಿಕೊಳ್ಳಿ
ಕುಂಭ: ಮಿತ್ರರಿಂದ ವ್ಯಾಪಾರಕ್ಕೆ ಸಹಾಯ ಸಿಗಲಿದೆ
ಮೀನ: ಉನ್ನತ ಸ್ಥಾನ ಹೊಂದುವ ಸಾಧ್ಯತೆ ಇದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments