ಇಂದಿನ ಪಂಚಾಗ ಮತ್ತು ರಾಶಿಫಲ (21-09-2019-ಶನಿವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದುಷ್ಟನು ಮಣ್ಣಿನ ಗಡಿಗೆಯಿದ್ದಂತೆ. ಅವನನ್ನು ಭೇದಿಸುವುದು ಸುಲಭ. ಸ್ನೇಹದ ಬೆಸುಗೆಯೂ ಅಸಾಧ್ಯ. ಸತ್ಪುರುಷನು ಚಿನ್ನದ ಕಲಶವಿದ್ದಂತೆ. ಭೇದಿಸುವುದು ಕಷ್ಟ, ಒಂದು ವೇಳೆ ಹಾಗಾದರೂ ಸ್ನೇಹದ ಬೆಸುಗೆ ಸುಲಭ.-ತ್ರಿಶತೀವ್ಯಾಖ್ಯಾ

# ಪಂಚಾಂಗ : ಶನಿವಾರ, 21.09.2019
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.17
ಚಂದ್ರ ಉದಯ ರಾ.11.33 / ಚಂದ್ರ ಅಸ್ತ ಬೆ.11.47
ವಿಕಾರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಸಪ್ತಮಿ
(ರಾ.08.21) / ನಕ್ಷತ್ರ: ರೋಹಿಣಿ (ಬೆ.11.22) / ಯೋಗ: ಸಿದ್ಧಿ (ರಾ.09.56) /ಕರಣ: ಭದ್ರೆ-ಭವ (ಬೆ.08.21-ರಾ.08.21) / ಮಳೆ ನಕ್ಷತ್ರ: ಉತ್ತರ ಫಲ್ಗುಣಿ / ಮಾಸ: ಕನ್ಯಾ / ತೇದಿ: 05

# ರಾಶಿ ಭವಿಷ್ಯ
ಮೇಷ: ನಿರುದ್ಯೋಗಿಗಳಿಗೆ ತಾತ್ಕಾಲಿಕ ವ್ಯವಸ್ಥೆಯಾದರೂ ಸಮಾಧಾನ ಸಿಗುವುದಿಲ್ಲ
ವೃಷಭ: ಮುಂದಿನ ಅಭ್ಯಾಸಕ್ಕಾಗಿ ಅವಕಾಶಗಳು ಒದಗಿ ಬಂದರೂ ನಿಮ್ಮ ಪ್ರಯತ್ನ ಅಗತ್ಯ
ಮಿಥುನ: ಆರ್ಥಿಕ ಸ್ಥಿತಿ ಏರುಪೇರಾಗುತ್ತಲೇ ಇರುತ್ತದೆ
ಕಟಕ: ಉದ್ಯೋಗ ಕ್ಷೇತ್ರದಲ್ಲಿ ಆಕಸ್ಮಿಕ ಘಟನೆಗಳು ನಡೆಯಲಿವೆ
ಸಿಂಹ: ಸಮಸ್ಯೆಗಳು ಕಂಡು ಬಂದರೂ ಕ್ಷಣಮಾತ್ರದಲ್ಲಿ ಪರಿಹಾರವಾಗಲಿದೆ
ಕನ್ಯಾ: ಮನೆ ವೈದ್ಯರ ಸಲಹೆ ಸ್ವೀಕರಿಸುವುದು ಒಳಿತು
ತುಲಾ: ಸತ್ಕಾರ್ಯ ಮಾಡುವು ದರಿಂದ ಮನಸ್ಸಿಗೆ ಶಾಂತಿ-ನೆಮ್ಮದಿ ದೊರೆಯಲಿದೆ
ವೃಶ್ಚಿಕ: ದಾಂಪತ್ಯದಲ್ಲಿ ಹೊಂದಾಣಿಕೆಯಿರಲಿ
ಧನುಸ್ಸು: ಆತ್ಮೀಯರಿಂದ ವಂಚನೆಯಾಗಲಿದೆ
ಮಕರ: ವಾಹನ ಖರೀದಿಗೆ ಸಕಾಲ
ಕುಂಭ: ವಿದ್ಯಾರ್ಥಿಗಳಿಗೆ ಅಭ್ಯಾಸಬಲ ಅಗತ್ಯವಿದೆ
ಮೀನ: ಸ್ಪರ್ಧೆಯಲ್ಲಿ ತೇರ್ಗಡೆ ಆಗುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments

Sri Raghav

Admin