ಇಂದಿನ ಪಂಚಾಗ ಮತ್ತು ರಾಶಿಫಲ (06-12-2019- ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬಹಳ ಪುಣ್ಯಗಳಿಂದ ಮನುಷ್ಯ ಜನ್ಮ ಸಿಗುತ್ತದೆ ಅದನ್ನು ಪಡೆದೂ ಸಹ ನಾನು ಧರ್ಮಕಾರ್ಯ ಮಾಡಲಿಲ್ಲ, ನಾನು ಮಾಡಿದ್ದೇನೆ ಎಂದು ಜೀವಿಯು ಪಶ್ಚತ್ತಾಪಡುತ್ತಾನೆ
-ಗರುಡಪುರಾಣ

# ಪಂಚಾಂಗ : ಶುಕ್ರವಾರ, 06.12.2019
ಸೂರ್ಯ ಉದಯ : ಬೆ.06.28, ಸೂರ್ಯ ಅಸ್ತ ಸಂ.05.53
ಚಂದ್ರ ಉದಯ ಮ.01.54/ ಚಂದ್ರ ಅಸ್ತ ರಾ.1,.26
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು, / ಕಾರ್ತಿಕ ಮಾಸ / ಕೃಷ್ಣ ಪಕ್ಷ
ತಿಥಿ: ದಶಮಿ (ದಿನಪೂರ್ತಿ) / ನಕ್ಷತ್ರ: ಉತ್ತರಭಾದ್ರ (ರಾ.10.57) / ಯೋಗ: ಸಿದ್ದಿ (ಸಾ.4.30)
ಕರಣ: ತೈತಿಲ (ಸಾ.5.27) / ಮಳೆ ನಕ್ಷತ್ರ: ಜ್ಯೇಷ್ಠಾ / ಮಾಸ: ವೃಶ್ಚಿಕ / ತೇದಿ:20

# ರಾಶಿ ಭವಿಷ್ಯ
ಮೇಷ: ಚಾತುರ್ಯಪೂರ್ಣ ಕೆಲಸಗಳ ವಿಧಾನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ
ವೃಷಭ: ಮಕ್ಕಳು ನಿಮಗೆ ಕೀರ್ತಿ ತರುವ ಪ್ರಯತ್ನ ಮಾಡುವರು. ವ್ಯಾಪಾರಸ್ಥರಿಗೆ ಲಾಭ ಸಿಗಲಿದೆ
ಮಿಥುನ: ಸ್ನೇಹಿತರು, ಬಂಧುಗಳೊಂದಿಗೆ ವಿನಾಕಾರಣ ಜಗಳಕ್ಕೆ ಇಳಿಯದಿರುವುದು ಒಳಿತು
ಕಟಕ: ಸಮಾಧಾನ ಚಿತ್ತದಿಂದ ವ್ಯವಹರಿಸುವುದು ಉತ್ತಮ
ಸಿಂಹ: ಹಣಕಾಸಿನ ಸಮಸ್ಯೆ ದೂರವಾಗಿ ನೆಮ್ಮದಿ ಸಿಗಲಿದೆ
ಕನ್ಯಾ: ಸರ್ಕಾರಿ ಉದ್ಯೋಗಿ ಗಳಿಗೆ ಶಾಂತಿಯ ವಾತಾವರಣ
ತುಲಾ: ಕೌಟುಂಬಿಕವಾಗಿ ಎಲ್ಲಾ ವಿಧಗಳಲ್ಲೂ ನೆಮ್ಮದಿ ಸಿಗಲಿದೆ
ವೃಶ್ಚಿಕ: ಉದ್ಯೋಗದಲ್ಲಿ ಏರಿಳಿತಗಳು ಕಂಡುಬರುತ್ತವೆ
ಧನುಸ್ಸು: ಕೃಷಿ ರಂಗದವರಿಗೆ ಉತ್ತಮ ಫಲ
ಮಕರ: ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ
ಕುಂಭ: ಮನಸ್ಸು ಚಂಚಲತೆಯಿಂದ ಕೂಡಿರುವುದು
ಮೀನ: ಆರ್ಥಿಕವಾಗಿ ಉನ್ನತಿ ಕಾಣುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments