ಇಂದಿನ ಪಂಚಾಗ ಮತ್ತು ರಾಶಿಫಲ (08-12-2019- ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಭೂಮಿಯಲ್ಲಿ ಸರ್ವಶ್ರೇಷ್ಠವಾದ ವಸ್ತುಗಳು ಕೇವಲ ಮೂರೇ ಇವೆ. ಜಲ, ಆಹಾರ ಮತ್ತು ಒಳ್ಳೆಯ ಮಾತು. ಆದರೆ ಮೂರ್ಖರು ಕಲ್ಲಿನ ಚೂರುಗಳನ್ನು ರತ್ನ ಅಥವಾ ಶ್ರೇಷ್ಠ ವಸ್ತು ಎಂದು ಕರೆಯುವುದು ವಿಷಾದಕರ. –ಸುಭಾಷಿತರತ್ನ ಭಾಂಡಾಗಾರ

# ಪಂಚಾಂಗ : ಭಾನುವಾರ, 08.12.2019
ಸೂರ್ಯ ಉದಯ : ಬೆ.06.29, ಸೂರ್ಯ ಅಸ್ತ ಸಂ.05.53
ಚಂದ್ರ ಉದಯ ಮ.03.09 / ಚಂದ್ರ ಅಸ್ತ ರಾ.02.58
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು, / ಕಾರ್ತಿಕ ಮಾಸ / ಕೃಷ್ಣ ಪಕ್ಷ
ತಿಥಿ: ಏಕಾದಶಿ (ಬೆ.08.30) / ನಕ್ಷತ್ರ: ಅಶ್ವಿನಿ (ರಾ.03.30) / ಯೋಗ: ವರೀಯಾನ್ (ಸಾ.05.15)
ಕರಣ: ಭದ್ರೆ-ಭವ / (ಬೆ.08.30-ರಾ.09.16) / ಮಳೆ ನಕ್ಷತ್ರ: ಜ್ಯೇಷ್ಠಾ / ಮಾಸ: ವೃಶ್ಚಿಕ / ತೇದಿ: 22

# ರಾಶಿ ಭವಿಷ್ಯ
ಮೇಷ: ಸಹೋದ್ಯೋಗಿಗಳು, ಆತ್ಮೀಯರಿಂದ ಸೂಕ್ತ ಸಲಹೆ ದೊರಕಿ ಉತ್ತಮ ಲಾಭವಾಗಲಿದೆ
ವೃಷಭ: ವಿಪರೀತ ಕೆಲಸ-ಕಾರ್ಯಗಳಿಂದಾಗಿ ವಿಶ್ರಾಂತಿಯಿಲ್ಲದೆ ಬಳಲುವ ಸಾಧ್ಯತೆಗಳಿವೆ
ಮಿಥುನ: ಚುರುಕಿನ ಕಾರ್ಯ ಕ್ಷಮತೆಯಿಂದ ಕೆಲಸ ಪೂರೈಸಿ ನೆಮ್ಮದಿ ದೊರಕಲಿದೆ
ಕಟಕ: ಸಮಾಜದಲ್ಲಿ ನಿಮ್ಮ ಪರಿಶ್ರಮದ ಫಲವನ್ನು ಬೇರೆಯವರು ಸವಿಯುವರು
ಸಿಂಹ: ಮನಃಶಾಂತಿ ಹೊಂದಿ ಮಾನಸಿಕವಾಗಿ ದೃಢರಾಗುವಿರಿ
ಕನ್ಯಾ: ಎಲ್ಲ ಕಾರ್ಯಗಳಲ್ಲಿ ಸ್ನೇಹಿತರ ಸಹಭಾಗಿತ್ವ ಅವಶ್ಯಕ
ತುಲಾ: ಅಲಂಕಾರಿಕ ವಸ್ತು ಖರೀದಿಸುವ ಸಾಧ್ಯತೆ
ವೃಶ್ಚಿಕ: ಕೌಟುಂಬಿಕ ವಿಷಯದಲ್ಲಿ ಜಾಗರೂಕರಾಗಿರಿ
ಧನುಸ್ಸು: ಮಾತಿನ ಮೇಲೆ ಹಿಡಿತವಿರಲಿ
ಮಕರ: ಉತ್ತಮ ಹುದ್ದೆ ದೊರಕುವ ಸಾಧ್ಯತೆ
ಕುಂಭ: ದೃಢ ಸಂಕಲ್ಪದಿಂದ ಯಶಸ್ಸು ಸಾಧಿಸುವಿರಿ
ಮೀನ: ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments