ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-11-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸಂಕಷ್ಟ ಇಲ್ಲದಿದ್ದರೆ ನಮ್ಮ ತಪ್ಪುಗಳಿಂದ ನಾವು ಪಾಠ ಕಲಿಯುವುದಿಲ್ಲ.

# ಪಂಚಾಂಗ : ಶುಕ್ರವಾರ , 26-11-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಕಾರ್ತೀಕ ಮಾಸ / ಕೃಷ್ಣ ಪಕ್ಷ / ತಿಥಿ: ಸಪ್ತಮಿ/ ನಕ್ಷತ್ರ: ಆಶ್ಲೇಷಾ/ ಮಳೆ ನಕ್ಷತ್ರ: ಅನುರಾಧ

ಸೂರ್ಯೋದಯ : ಬೆ.06.24
ಸೂರ್ಯಾಸ್ತ : 05.51

ರಾಹುಕಾಲ : 1.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

#ಇಂದಿನ ರಾಶಿಭವಿಷ್ಯ

ಮೇಷ: ಉದ್ಯೋಗ ಸ್ಥಳದಲ್ಲಿ ವಿಪರೀತ ಒತ್ತಡಗಳಿರುತ್ತವೆ. ಹಣಕಾಸು ಸಮಸ್ಯೆಯಾಗಲಿದೆ, ಉದ್ಯೋಗ ಬದಲಾವಣೆ ಮಾಡಬೇಕು ಎಂದು ಕೊಂಡರೂ ಅದು ಸಾಧ್ಯವಾಗುವುದಿಲ್ಲ.
ವೃಷಭ: ಸಾಲ ತೀರಿಸಲು ಪ್ರಯತ್ನಿಸಿದರೂ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ.
ಮಿಥುನ: ಆದಾಯ ಮೂಲ ಹೆಚ್ಚಿಸಿಕೊಳ್ಳಲು ಮಾಡುವ ಪ್ರಯತ್ನಗಳು ಯಶಸ್ವಿಯಾಗಲಿವೆ.

ಕಟಕ: ವೃತ್ತಿನಿರತರಿಗೆ ದೊಡ್ಡ ಸಂಸ್ಥೆಗಳೊಂದಿಗೆ ವ್ಯಾವಹಾರಿಕ ಒಪ್ಪಂದಗಳು ನಡೆಯಲಿವೆ. ಉದ್ಯೋಗ ಬದಲಾವಣೆಗೆ ಅವಕಾಶ ದೊರೆಯಲಿದೆ.
ಸಿಂಹ: ಲಾಭದ ಪ್ರಮಾಣ ದಲ್ಲಿ ಕಡಿಮೆಯಾಗಲಿದ್ದು, ಮಾಮೂಲಿಗಿಂತ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ.
ಕನ್ಯಾ: ಇನ್ನೇನು ಕೆಲಸ ಸಿಕ್ಕೇಬಿಟ್ಟಿತು ಎಂದು ಖುಷಿ ಪಡುವಷ್ಟರಲ್ಲಿ ಕೆಲವು ಅಡೆ-ತಡೆಗಳು ಎದುರಾಗಲಿವೆ.

ತುಲಾ: ಹೊಸ ಸ್ನೇಹಿತರ ಪರಿಚಯದಿಂದ ಅನು ಕೂಲವಾಗಲಿದೆ. ಆದರೆ ಯಾವ ಕಾರಣಕ್ಕೂ ನಿಮ್ಮ ವ್ಯವಹಾರದ ಒಳಗುಟ್ಟನ್ನು ಬಿಟ್ಟುಕೊಡದಿರಿ.
ವೃಶ್ಚಿಕ: ಆಲಸ್ಯದ ಕಾರಣಕ್ಕೆ ಕೆಲವು ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ. ಒಂದೇ ಕೆಲಸವನ್ನು ನಾಲ್ಕಾರು ಬಾರಿ ಮಾಡಬೇಕಾದ ಸಂದರ್ಭ ಬರಲಿದೆ.
ಧನುಸ್ಸು: ತಂದೆ ಅಥವಾ ತಂದೆ ಕಡೆಯ ಸಂಬಂಕರ ವಿಷಯ ತಿಳಿದುಕೊಳ್ಳಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.

ಮಕರ: ನಿಮ್ಮ ಕೀರ್ತಿ-ಹಣ ಲಪಟಾಯಿಸುವ ಸಾಧ್ಯತೆ ಇದೆ. ಆದ್ದರಿಂದ ಯಾರನ್ನೂ ಕುರುಡಾಗಿ ನಂಬದಿರಿ.
ಕುಂಭ: ನೀವು ಈ ಹಿಂದೆ ಮಾಡಿದ್ದ ಹೂಡಿಕೆಯ ಲಾಭ ಬರಬಹುದು ಅಥವಾ ತಂದೆಯವರು ಹಣ ನೀಡಬಹುದು.
ಮೀನ: ಒತ್ತಡ ಮಾಡಿಕೊಳ್ಳದಂತೆ ಕೆಲಸದಲ್ಲಿ ಮುಂದು ವರಿಯಿರಿ. ಸಾಲ ತೀರಿಸಲು ಸಹಾಯವಾಗಲಿದೆ.

Facebook Comments