ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-11-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಮ್ಮನ್ನು ನಾವು ಸರಿಪಡಿಸಿಕೊಂಡರೆ ಇಡೀ ಜಗತ್ತನ್ನು ಸರಿಪಡಿಸಿದಂತೆ. ನಮ್ಮಲ್ಲಿ ನಾವು ಪರಿವರ್ತನೆ ತಂದುಕೊಂಡರೆ ಜಗತ್ತಿಗೇ ಬೆಳಕು ನೀಡಿದಂತೆ.

# ಪಂಚಾಂಗ : ಶನಿವಾರ , 27-11-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಕಾರ್ತೀಕ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ/ ನಕ್ಷತ್ರ: ಮಘಾ/ ಮಳೆ ನಕ್ಷತ್ರ: ಅನುರಾಧ

ಸೂರ್ಯೋದಯ : ಬೆ.06.24
ಸೂರ್ಯಾಸ್ತ : 05.51

ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

#ಇಂದಿನ ರಾಶಿಭವಿಷ್ಯ

ಮೇಷ: ಕೆಲಸ ಬದಲಾವಣೆ ಮಾಡುವುದಿದ್ದರೆ ಅದಕ್ಕೆ ಅವಕಾಶವಿದೆ, ಆದರೆ ಶ್ರಮ ಪಡಬೇಕು.
ವೃಷಭ: ಅವಮಾನ ಆಯಿತು ಅಂತಲೋ ಅಥವಾ ಕೆಲಸದ ಒತ್ತಡದ ಕಾರಣಕ್ಕೋ ಉದ್ಯೋಗ ಬಿಡದಿರಿ.
ಮಿಥುನ: ದಾಖಲೆ ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಕಾನೂನು ವಿರುದ್ಧವಾಗಿ ವರ್ತಿಸದಿರಿ.

ಕಟಕ: ನಿಮ್ಮ ಬಗ್ಗೆ ಇತರರು ಅನುಮಾನ ಪಡದಿರು ವಂತೆ ಪಾರದರ್ಶಕವಾಗಿರುವುದು ಉತ್ತಮ.
ಸಿಂಹ: ವಿದೇಶಗಳಲ್ಲಿ ಉದ್ಯೋಗ ಸೇರಬೇಕು ಎಂದಿದ್ದರೆ ನೀವು ಸೇರಲಿ ರುವ ಕಂಪೆನಿ ಬಗ್ಗೆ ಕೂಲಂಕಷವಾಗಿ ವಿಚಾರಿಸಿ, ಮುಂದುವರಿಯಿರಿ.
ಕನ್ಯಾ: ಉದ್ಯೋಗ ಸ್ಥಳದಲ್ಲಿ ಮೇಲಕಾರಿಗಳ ಮಾತನ್ನು ಆತ್ಮಾಭಿಮಾನಕ್ಕೆ ಬಿದ್ದ ಪೆಟ್ಟು ಎಂದು ಪರಿಗಣಿಸದಿರಿ.

ತುಲಾ: ಗಡುವಿನೊಳಗೆ ಕೆಲಸ ಮುಗಿಸಲು ಪ್ರಯತ್ನಿಸಿ. ಇಲ್ಲದಿದ್ದಲ್ಲಿ ನಿಮ್ಮ ವರ್ಚಸ್ಸು, ಹೆಸರಿಗೆ ಧಕ್ಕೆಯಾಗಬಹುದು.
ವೃಶ್ಚಿಕ: ಸುಲಭಕ್ಕೆ ದುಡ್ಡು ಮಾಡುವ ದಾರಿ ಗೋಚರಿ ಸಿತು ಅಂದುಕೊಂಡು, ಅದರ ಹಿಂದೆ ಹೋಗದಿರಿ.
ಧನುಸ್ಸು: ಸ್ನೇಹಿತರನ್ನು ಉಳಿಸಿಕೊಳ್ಳಿ. ಪ್ರತಿ ಯೊಂದಕ್ಕೂ ಅನುಮಾನ ಪಡುವ ಪ್ರವೃತ್ತಿ ಬಿಡಿ. ಒರಟು ಮಾತುಗಳಂತೂ ಬೇಡವೇ ಬೇಡ.

ಮಕರ: ನಿಮಗೆ ಯಾರು ಸರಿ, ಯಾರು ತಪ್ಪು ಎಂದು ಪರಿಗಣಿಸುವುದು ಕಷ್ಟ ಎಂಬಂತಾಗುತ್ತದೆ.
ಕುಂಭ: ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಹಾಯ ಮತ್ತು ಮಾರ್ಗದರ್ಶನ ದೊರೆಯಲಿದೆ.
ಮೀನ: ಕುಟುಂಬ ಸದಸ್ಯರು, ಸೋದರ- ಸೋದರಿ ಯರೊಂದಿಗೆ ಅಸಮಾಧಾನ ಉಂಟಾಗಲಿದೆ.

Facebook Comments