ಇಂದಿನ ಪಂಚಾಂಗ ಮತ್ತು ರಾಶಿಫಲ (12-12-2019- ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮಗುವಿನ ಆಟದ ಸಾಮಾನುಗಳಿಂದ ಮನೆಯೂ, ಅದರ ಮುದ್ದುಮಾತುಗಳಿಂದ ಕಿವಿಯೂ, ಮಗುವಿನ ಮೈಗೆ ಹತ್ತಿದ ಧೂಳಿನಿಂದ ದೇಹವೂ ವ್ಯಾಪ್ತವಾಗದಿದ್ದರೆ ಜಗತ್ತು ನೀರಸವಾಗಿ ವ್ಯಾಕುಲಗೊಳ್ಳುವುದು.  -ಹರಿಹರಸುಭಾಷಿತ

# ಪಂಚಾಂಗ : ಗುರುವಾರ, 12.12.2019
ಸೂರ್ಯ ಉದಯ : ಬೆ.06.32 , ಸೂರ್ಯ ಅಸ್ತ ಸಂ.05.55
ಚಂದ್ರ ಉದಯ ಬೆ.06.09 / ಚಂದ್ರ ಅಸ್ತ ಬೆ.06.24
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು, / ಕಾರ್ತಿಕ ಮಾಸ / ಕೃಷ್ಣ ಪಕ್ಷ
ತಿಥಿ: ಪೂರ್ಣಿಮಾ (ಬೆ.10.42), ನಕ್ಷತ್ರ: ಮೃಗಶಿರಾ (ನಾ.ಬೆ.08.18), ಯೋಗ: ಸಾಧ್ಯ (ಮ.01.50)
ಕರಣ: ಭವ-ಬಾಲವ (ಬೆ.10.42-ರಾ.10.23), ಮಳೆ ನಕ್ಷತ್ರ: ಜ್ಯೇಷ್ಠಾ, ಮಾಸ: ವೃಶ್ಚಿಕ, ತೇದಿ: 26

# ರಾಶಿ ಭವಿಷ್ಯ
ಮೇಷ: ನಿಮ್ಮ ಒರಟುತನದ ಮಾತುಗಳಿಂದ ಇತರರ ತಿರಸ್ಕಾರಕ್ಕೆ ಒಳಗಾಗುವ ಸಾಧ್ಯತೆಗಳಿವೆ
ವೃಷಭ: ಹೊಸ ವ್ಯವಹಾರಗಳಿಂದ ಲಾಭ ಸಿಗಲಿದೆ
ಮಿಥುನ: ಸಮಾಧಾನ ಚಿತ್ತದಿಂದ ಕೆಲಸ-ಕಾರ್ಯ ಗಳನ್ನು ಮುಂದುವರಿಯುವುದು ಸೂಕ್ತ
ಕಟಕ: ಹೆಚ್ಚು ಮಾತಿನಿಂದ ವೈಮನಸ್ಯ ಉಂಟಾಗಲಿದೆ
ಸಿಂಹ: ನೀವು ಯೋಜಿಸಿದ ಯೋಜನೆಗಳನ್ನು ನಿಮ್ಮವರೊಂದಿಗೆ ವಿವರಿಸಿ
ಕನ್ಯಾ: ಬಂಡವಾಳ ಹೂಡಿಕೆಗೆ ಅತ್ಯಂತ ಪ್ರಶಸ್ತ ಸಮಯ
ತುಲಾ: ಹಣಕಾಸಿನ ವ್ಯವಸ್ಥೆ ಸರಿಪಡಿಸಲು ಕೈ ಸಾಲ ಮಾಡಬೇಕಾಗುವುದು
ವೃಶ್ಚಿಕ: ದೇವಾಲಯದಲ್ಲಿ ತುಪ್ಪದ ದೀಪ ಹಚ್ಚಿ
ಧನುಸ್ಸು: ಅನುಕೂಲಗಳು ಒದಗಿ ಬರಲಿವೆ
ಮಕರ: ಸ್ನೇಹಿತರ ಸಹಾಯ ದೊರೆಯಲಿದೆ
ಕುಂಭ: ರಾಜಕಾರಣಿಗಳು ಶ್ರೇಯಸ್ಸು ನಿರೀಕ್ಷಿಸಬಹುದು
ಮೀನ: ಮನೆಯವರ ಸಲಹೆಗೆ ಮನ್ನಣೆ ನೀಡಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments