ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-11-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬದುಕು ಪುಸ್ತಕದ ಹಾಗೆ. ಸುಡುವುದಕ್ಕೆ ಒಂದು ಕ್ಷಣ ಸಾಕು, ಆದರೆ ಬರೆಯುವುದಕ್ಕೆ ವರ್ಷಗಳೇ ಬೇಕು.

# ಪಂಚಾಂಗ : ಭಾನುವಾರ , 28-11-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಕಾರ್ತೀಕ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ/ ನಕ್ಷತ್ರ: ಪೂರ್ವಾಭಾದ್ರ/ ಮಳೆ ನಕ್ಷತ್ರ: ಅನುರಾಧ

ಸೂರ್ಯೋದಯ : ಬೆ.06.25
ಸೂರ್ಯಾಸ್ತ : 05.51

ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 1.30-3.00

#ಇಂದಿನ ರಾಶಿಭವಿಷ್ಯ

ಮೇಷ: ಹೊಸದಾಗಿ ವ್ಯಾಪಾರ- ವ್ಯವಹಾರ ಶುರು ಮಾಡಲು ಹೊರಟು ನಿಲ್ಲದಿರಿ. ಕೆಲಸ- ಕಾರ್ಯಗಳಿಗೆ ಅಡೆತಡೆ ಎದುರಾಗುತ್ತದೆ.
ವೃಷಭ: ವೃತ್ತಿಪರರು ಇರುವ ಅವಕಾಶದಲ್ಲೇ  ಮುಂದುವರಿಯುವುದಕ್ಕೆ ಆಲೋಚಿಸಿ.
ಮಿಥುನ: ವಿದೇಶಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಕಾನೂನು ಅಡೆತಡೆಗಳು ಎದುರಾಗಬಹುದು.

ಕಟಕ: ಅದೃಷ್ಟ ಕೂಡ ಕೈಕೊಡುವುದರಿಂದ ಬಹಳ ಸಮಯ ತೊಂದರೆ ಎದುರಿಸಬೇಕಾಗುತ್ತದೆ.
ಸಿಂಹ: ನೀವೇ ಮಾಡಿಕೊಂಡ ಯಡವಟ್ಟುಗಳಿಂದ ತೊಂದರೆ ಎದುರಿಸಬೇಕಾಗುತ್ತದೆ.
ಕನ್ಯಾ: ವ್ಯಾಪಾರ ಆರಂಭಿಸಿ ದ್ದಲ್ಲಿ ವಿಸ್ತರಣೆಗೆ ಅವಕಾಶಗಳು ದೊರೆತು, ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಿರಿ.

ತುಲಾ: ಆದಾಯದಲ್ಲಿ ಗಣನೀಯವಾಗಿ ಇಳಿಕೆ ಆಗಲಿದೆ. ಹಲವು ಅಡೆತಡೆ ಹಾಗೂ ಸವಾಲುಗಳು ನಿವಾರಣೆಯಾಗುತ್ತವೆ.
ವೃಶ್ಚಿಕ: ಸಾಲ ತಂದು ದೊಡ್ಡ ವ್ಯಾಪಾರ- ವ್ಯವಹಾರಗಳಿಗೆ ಹಣ ತೊಡಗಿಸಬೇಡಿ.
ಧನುಸ್ಸು: ಮೂಲ ಸ್ವಭಾವದಲ್ಲಿ ಬದಲಾವಣೆ ಯಾಗಲಿದೆ. ಎಲ್ಲವೂ ಹೀಗೇ ಆಗಬೇಕು ಎಂಬ ಧೋರಣೆಯಲ್ಲಿ ರಾಜಿ ಮಾಡಿಕೊಳ್ಳಬೇಕಾದ ಸಂದರ್ಭ-ಸನ್ನಿವೇಶಗಳು ಎದುರಾಗಲಿವೆ.

ಮಕರ: ಈಗಾಗಲೇ ಹಣ ತೊಡಗಿಸಿದ ವ್ಯಾಪಾರದಲ್ಲಿ ದೊಡ್ಡ ನಷ್ಟ ಎದುರಾಗಬಹುದು.
ಕುಂಭ: ಸೈಟು- ಮನೆ, ಕಾರು ಖರೀದಿಗೆ ಅವಕಾಶ ಇದೆ. ಸಣ್ಣ ಪುಟ್ಟ ವಿಚಾರದಲ್ಲಿಯೂ ಕಾನೂನು ಮೀರದಿರಿ.
ಮೀನ: ಮನೆ ನಿರ್ಮಾಣ, ನಿವೇಶನ ಖರೀದಿ, ಶುಭ ಕಾರ್ಯಗಳನ್ನು ಆರಂಭಿಸಲು ಉತ್ತಮವಾದ ದಿನ.

Facebook Comments