ಇಂದಿನ ಪಂಚಾಂಗ ಮತ್ತು ರಾಶಿಫಲ (13-12-2019- ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನೆಯ ಮೇಲೆ ಹದ್ದು ಕುಳಿತರೆ ಕಾಲಾಂತರದಲ್ಲಿ ಕೆಡಕು ಸಂಭವಿಸಬಹುದು. ದುಷ್ಟನು ಮನೆಯ ಹತ್ತಿರವಿದ್ದರೆ ಸಾಕು, ಕೂಡಲೇ ಕೆಡಕು ಸಂಭವಿಸುತ್ತದೆ.
-ಕಲಿವಿಡಂಬನ 

# ಪಂಚಾಂಗ : ಶುಕ್ರವಾರ, 13.12.2019
ಸೂರ್ಯ ಉದಯ : ಬೆ.06.32 , ಸೂರ್ಯ ಅಸ್ತ ಸಂ.05.55
ಚಂದ್ರ ಉದಯ ರಾ.7.05 / ಚಂದ್ರ ಅಸ್ತ ಬೆ.7.22
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು, / ಕಾರ್ತಿಕ ಮಾಸ / ಕೃಷ್ಣ ಪಕ್ಷ
ತಿಥಿ: ಪ್ರತಿಪತ್ (ಬೆ.9.57), ನಕ್ಷತ್ರ: ಆರಿದ್ರ (ರಾ.5.51), ಯೋಗ: ಶುಭ (ರಾ.11.59)
ಕರಣ: ಕೌಲವ-ತೈತಿಲ (ಬೆ.9.57-ರಾ.9.25), ಮಳೆ ನಕ್ಷತ್ರ: ಜ್ಯೇಷ್ಠಾ, ಮಾಸ: ವೃಶ್ಚಿಕ, ತೇದಿ: 27

# ರಾಶಿ ಭವಿಷ್ಯ
ಮೇಷ :ಹಣಕಾಸಿನ ವ್ಯವಹಾರಗಳನ್ನು ಎಚ್ಚರಿಕೆ ಯಿಂದ ನಿರ್ವಹಿಸಿರಿ
ವೃಷಭ : ಅನೇಕ ವಿಷಯಗಳಲ್ಲಿ ಮಾತನಾಡದೆ ಮೌನ ವಹಿಸುವುದು ಲೇಸು
ಮಿಥುನ: ನಿಮ್ಮ ಕಾಮನೆಗಳು ಈಡೇರುವುದು, ಬಂಧುಮಿತ್ರರ ನೆರವು ಸಿಗಲಿದೆ
ಕಟಕ : ನ್ಯಾಯಾಲಯದ ಅಲೆದಾಟ ತಪ್ಪಲಿದೆ
ಸಿಂಹ:ಪ್ರೀತಿ ಪಾತ್ರರೊಂದಿಗೆ ಭಿನ್ನಾಭಿಪ್ರಾಯ
ಕನ್ಯಾ: ಯಾಂತ್ರಿಕ ಜೀವನದಿಂದ ಜಿಗುಪ್ಸೆ
ತುಲಾ: ಬಂಧುಗಳ ಆಗಮನದಿಂದ ಮನೋಲ್ಲಾಸ
ವೃಶ್ಚಿಕ : ನೂತನ ಕಾರ್ಯ ಭಾರಕ್ಕೆ ಕೈ ಹಾಕದಿರಿ
ಧನುಸ್ಸು: ಮಿತ್ರರ ಬಳಗ ಹೆಚ್ಚುವ ಸಾಧ್ಯತೆ
ಮಕರ: ಸಹೋದ್ಯೋಗಿಗಳೊಂದಿಗೆ ಸೌಹಾರ್ದ ಯುತವಾಗಿ ವರ್ತಿಸಿ
ಕುಂಭ: ಭೋಜನ ಸುಖ, ದೇಹಾರೋಗ್ಯ
ಮೀನ: ಮಿತ್ರರಿಂದಲೇ ಅಪವಾದ, ಮನೆಯಲ್ಲಿ ಅಶಾಂತಿ ವಾತಾವರಣ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments