ಇಂದಿನ ಪಂಚಾಂಗ ಮತ್ತು ರಾಶಿಫಲ (14-12-2019- ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬಡತನದಿಂದ ನಾಚಿಕೆ, ನಾಚಿಕೆಯಿಂದ ಎದೆಗೆಡುತ್ತಾನೆ. ಅದರಿಂದ ಅಪಮಾನ, ಅಪಮಾನದಿಂದ ಯಾವ ಕೆಲಸ ಮಾಡಲಾಗದೆ ಬೇಸರ, ಬೇಸರಿಕೆಯಿಂದ ದುಃಖ, ದುಃಖದಿಂದ ಯೋಚನೆ ಮಾಡುವ ಶಕ್ತಿ ಕುಂದುತ್ತದೆ. ಇದರಿಂದ ಹಾಳಾಗುತ್ತಾನೆ. ಆದುದರಿಂದ ಬಡತನವು ಎಲ್ಲ ಬಗೆಯ ಕಷ್ಟಗಳಿಗೂ ಮೂಲ.  –ಮೃಚ್ಛಕಟಿಕ

# ಪಂಚಾಂಗ : ಶನಿವಾರ, 14.12.2019
ಸೂರ್ಯ ಉದಯ : ಬೆ.06.33, ಸೂರ್ಯ ಅಸ್ತ ಸಂ.05.55
ಚಂದ್ರ ಉದಯ ಬೆ.08.03 / ಚಂದ್ರ ಅಸ್ತ ಬೆ.08.19
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು, / ಕಾರ್ತಿಕ ಮಾಸ / ಕೃಷ್ಣ ಪಕ್ಷ
ತಿಥಿ: ದ್ವಿತೀಯಾ (ಬೆ.08.47), ನಕ್ಷತ್ರ: ಪುನರ್ವಸು (ರಾ.05.03), ಯೋಗ: ಶುಕ್ಲ (ಬೆ.09.49)
ಕರಣ: ಗರಜೆ-ವಣಿಜ್ (ಬೆ.08.47-ರಾ.08.05), ಮಳೆ ನಕ್ಷತ್ರ: ಜ್ಯೇಷ್ಠಾ, ಮಾಸ: ವೃಶ್ಚಿಕ, ತೇದಿ: 28

# ರಾಶಿ ಭವಿಷ್ಯ
ಮೇಷ: ಉತ್ತಮ ಕಾರ್ಯ ಹಮ್ಮಿಕೊಂಡಿದ್ದಲ್ಲಿ ಹಿರಿಯರ ಆಶೀರ್ವಾದದಿಂದ ಯಶಸ್ವಿಯಾಗಲಿದೆ
ವೃಷಭ: ನಿಷ್ಕಲ್ಮಶ ಮನಸ್ಸಿನಿಂದ ವ್ಯವಹರಿಸಿದಲ್ಲಿ ಜನಮನ್ನಣೆ ಸಿಗುತ್ತದೆ. ಬಂಧುಗಳ ಆಗಮನ
ಮಿಥುನ: ಮೇಲಧಿಕಾರಿಗಳ ಅವಕೃಪೆಗೆ ಪಾತ್ರರಾಗುವ ಸಾಧ್ಯತೆಗಳು ಹೆಚ್ಚಾಗಿವೆ
ಕಟಕ: ಮಹತ್ತರ ಯೋಜನೆ ಗಳ ಬಗ್ಗೆ ಹಿತೈಷಿಗಳೆದುರು ಪ್ರಸ್ತಾಪಿಸುವುದು ಒಳಿತು
ಸಿಂಹ: ಗೃಹ ಬಳಕೆಯ ವಸ್ತುಗಳ ಖರೀದಿಗೆ ಸಕಾಲ
ಕನ್ಯಾ: ಕೆಲಸ-ಕಾರ್ಯಗಳ ಒತ್ತಡಗಳಿಗೆ ಹೆದರದಿರಿ
ತುಲಾ: ಎಲ್ಲರ ಪ್ರಶಂಸೆಗೆ ಪಾತ್ರರಾಗುವಿರಿ
ವೃಶ್ಚಿಕ: ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ
ಧನುಸ್ಸು: ಹೊಸ ವಿಚಾರಗಳ ಬಗ್ಗೆ ತಿಳಿವಳಿಕೆ
ಮಕರ: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಬರಲಿದೆ
ಕುಂಭ: ಮನಸ್ಸಿಗೆ ನೆಮ್ಮದಿ ದೊರೆತು ನಿರಾಳವಾಗುವಿರಿ
ಮೀನ: ದುಡುಕಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments