ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-11-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ತೀವ್ರ ಸಂಕಷ್ಟಗಳು ಒಬ್ಬ ಸಾಮಾನ್ಯ ಮನುಷ್ಯನನ್ನು ಅಸಾಮಾನ್ಯ ಗುರಿಮುಟ್ಟಲು ಸನ್ನದ್ಧಗೊಳಿಸಬಲ್ಲವು.

# ಪಂಚಾಂಗ : ಮಂಗಳವಾರ, 30-11-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಕಾರ್ತೀಕ ಮಾಸ / ಕೃಷ್ಣ ಪಕ್ಷ /ತಿಥಿ: ಏಕಾದಶಿ / ನಕ್ಷತ್ರ: ಹಸ್ತ / ಮಳೆ ನಕ್ಷತ್ರ: ಅನೂರಾಧ

* ಸೂರ್ಯೋದಯ : ಬೆ.06.26
* ಸೂರ್ಯಾಸ್ತ : 05.51
* ರಾಹುಕಾಲ : 3.00-4.30
* ಯಮಗಂಡ ಕಾಲ : 9.00-10.30
* ಗುಳಿಕ ಕಾಲ : 12.00-1.30

# ಇಂದಿನ ಭವಿಷ್ಯ
ಮೇಷ: ನಿಮ್ಮ ಸಂಪತ್ತನ್ನು ಹೆಚ್ಚಿಸಲು ಅತ್ಯುತ್ತಮ ಅವಕಾಶಗಳು ಸಿಗಲಿವೆ. ಆತ್ಮವಿಶ್ವಾಸ ಹೆಚ್ಚಾಗಲಿದೆ.
ವೃಷಭ: ನಿಮ್ಮ ನಿರ್ಧಾರಗಳಿಗೆ ಕುಟುಂಬದ ಸದಸ್ಯ ರೊಂದಿಗೆ ಸಹೋದ್ಯೋಗಿಗಳ ಬೆಂಬಲವೂ ಸಿಗಲಿದೆ.
ಮಿಥುನ: ವ್ಯಾಪಾರ ಮತ್ತು ಶೈಕ್ಷಣಿಕ ಲಾಭ ಪಡೆಯುವ ಸಾಧ್ಯತೆ ಇದೆ. ಅನುಭವಿ ವ್ಯಕ್ತಿಯ ಸಹಾಯ ಸಿಗಲಿದೆ. ಕುಟುಂಬ ಸದಸ್ತರೊಂದಿಗೆ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸಿ.

ಕಟಕ: ಪೋಷಕರ ಆಶೀರ್ವಾದ ಫಲಪ್ರದವಾಗಲಿದೆ. ಬಡ್ತಿ ದೊರೆಯುವ ಯೋಗವಿದೆ.
ಸಿಂಹ: ಕೆಲವು ಕಾನೂನು ತೊಡಕುಗಳು ನಿಮ್ಮ ಬೆನ್ನತ್ತಿ ಬರಬಹುದು. ಆದ್ದರಿಂದ ನೀವಾಗಿಯೇ ಯಾವ ಸಮಸ್ಯೆಯನ್ನೂ ಮೈಮೇಲೆ ಎಳೆದುಕೊಳ್ಳಬೇಡಿ.
ಕನ್ಯಾ: ಸಹೋದ್ಯೋಗಿ ಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕಾರ್ಯನಿರ್ವಹಿಸಿದರೆ ಒಳಿತಾಗಲಿದೆ.

ತುಲಾ: ಯಾರ ಮೇಲೂ ವೈಯಕ್ತಿಕ ದ್ವೇಷ ಸಾಸಲು ಹೋಗದಿರಿ. ಲಾಭದ ಪ್ರಮಾಣದಲ್ಲಿ ಕಡಿಮೆ ಆಗಬಹುದು. ಎಚ್ಚರಿಕೆಯಿಂದ ಇರಿ.
ವೃಶ್ಚಿಕ: ಚರ್ಮಕ್ಕೆ ಸಂಬಂಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಧನುಸ್ಸು: ಯಾವುದೇ ಕೆಲಸ ಮಾಡುವುದಾದರೂ ಅಗತ್ಯಕ್ಕಿಂತ ಹೆಚ್ಚು ಶ್ರಮ ಹಾಕಬೇಕು.

ಮಕರ: ಹಣ ಬರುತ್ತಿದೆ ಅಥವಾ ಬರಲಿದೆ ಎಂಬ ಕಾರಣಕ್ಕೆ ವಿಪರೀತ ಖರ್ಚು ಮಾಡದೆ ಉಳಿತಾಯದ ಕಡೆಗೂ ಹೆಚ್ಚು ಗಮನ ನೀಡಿ.
ಕುಂಭ: ವಿದೇಶಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದವರಿಗೆ ಯಶಸ್ಸು ದೊರೆಯಲಿದೆ.
ಮೀನ: ಪಿತ್ರಾರ್ಜಿತ ಆಸ್ತಿ ಬರಬೇಕಿದ್ದಲ್ಲಿ ಅದು ದೊರೆಯಲಿದೆ. ಹಣದ ಹರಿವು ಹೆಚ್ಚಾಗಲಿದೆ.

Facebook Comments

Sri Raghav

Admin