ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-10-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸುಖ-ಸಂಪದ ನೀ ಗೈದ ಕರ್ಮದ ಫಲವಾದರೆ ದುಃಖ-ದುಮ್ಮಾನವೂ ನಿನ್ನ ಕರ್ಮದ ಫಲವಲ್ಲವೇ? ನಲಿವಿನಲಿ ಭಗವಂತನ ನೆನೆಯದೇ ಬೀಗುವ ಮನುಜನೇ ನೋವಿನಲಿ ಭಗವಂತನ ನೀನಳಿಯುವುದೇಕೆ?

# ಪಂಚಾಂಗ : ಮಂಗಳವಾರ , 26-10-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಆಶ್ವಯುಜ ಮಾಸ / ಕೃಷ್ಣ ಪಕ್ಷ
ತಿಥಿ: ಪಂಚಮಿ/ ನಕ್ಷತ್ರ: ಆದ್ರ್ರಾ/ ಮಳೆ ನಕ್ಷತ್ರ: ಸ್ವಾತಿ

# ಸೂರ್ಯೋದಯ ಬೆ.06.12 / ಸೂರ್ಯಾಸ್ತ05.56
# ರಾಹುಕಾಲ 03.00-9.00 / ಯಮಗಂಡ ಕಾಲ 09.00-1.30 / ಗುಳಿಕ ಕಾಲ 12.00-01.30

# ಇಂದಿನ ಭವಿಷ್ಯ
ಮೇಷ: ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಮನೆಯೊಂದಿಗೆ ಚಿಂತನೆ ನಡೆಸುವುದು ಅಗತ್ಯ.
ವೃಷಭ: ಅಜಾಗರೂಕತೆಯಿಂದ ವ್ಯವಹಾರ ನಡೆಸುವುದರಿಂದ ತೊಂದರೆ ಉಂಟಾಗುತ್ತದೆ.
ಮಿಥುನ: ಪ್ರಯತ್ನಗಳು ಯಶಸ್ವಿಯಾಗಲಿವೆ. ದಿನದ ಕೊನೆಯಲ್ಲಿ ಆರ್ಥಿಕ ಲಾಭವಾಗುವ ಸಾಧ್ಯತೆಗಳಿವೆ.

ಕಟಕ: ಕಚೇರಿಯಲ್ಲಿ ಸಹೋದ್ಯೋಗಿ ಮಾಡುವ ತಪ್ಪಿನಿಂದ ಸ್ವಲ್ಪ ಗೊಂದಲ ಉಂಟಾಗುತ್ತದೆ.
ಸಿಂಹ: ಯಾವುದಾದರೂ ವಿಷಯದ ಬಗ್ಗೆ ಮಾನಸಿಕವಾಗಿ ಉದ್ವೇಗಕ್ಕೆ ಒಳಗಾಗುವಿರಿ.
ಕನ್ಯಾ: ವಾಹನಕ್ಕಾಗಿ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುವಿರಿ. ಬೆನ್ನು ನೋವು ಬರುವ ಸಾಧ್ಯತೆ ಇದೆ.
ತುಲಾ: ಬೌದ್ಧಿಕ ಸಾಮಥ್ರ್ಯ ಮತ್ತು ಅನುಭವದಿಂದ ಪ್ರಯೋಜನ ಪಡೆಯುತ್ತೀರಿ.

ವೃಶ್ಚಿಕ: ನೆರೆಹೊರೆಯವರೊಂದಿಗಿನ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳಿ. ಹಠಾತ್ ಧನಲಾಭವಾಗುವ ಸಾಧ್ಯತೆ ಇದೆ. ಸ್ನೇಹಿತರ ಬೆಂಬಲ ಸಿಗಲಿದೆ.
ಧನುಸ್ಸು: ರಿಸ್ಕ್ ತೆಗೆದುಕೊಂಡು ಹಣ ಹೂಡಿಕೆ ಮಾಡಲು ಹೋಗಬೇಡಿ. ವಿಶ್ರಾಂತಿ ಸಿಗುತ್ತದೆ.

ಮಕರ: ಬೇರೊಬ್ಬರ ತಪ್ಪು ನಿಮ್ಮ ಮೇಲೆ ಬರಬಹುದು. ನಿಮ್ಮ ನಡವಳಿಕೆ ಉತ್ತಮವಾಗಿರುತ್ತದೆ.
ಕುಂಭ: ಅನಗತ್ಯ ಚರ್ಚೆ ಮತ್ತು ಜಗಳವನ್ನು ತಪ್ಪಿಸ ಬೇಕು. ಒತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಮೀನ: ದೂರದ ಊರಲ್ಲಿ ವಾಸಿಸುವ ಸ್ನೇಹಿತರು ಮತ್ತು ಸಂಬಂಕರನ್ನು ಭೇಟಿಯಾಗಬಹುದು.

Facebook Comments