ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-10-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯನಾಗಿ ಹುಟ್ಟಿದ ಮೇಲೆ ನಿಸ್ವಾರ್ಥ ಸೇವೆಯಿಂದ ಇಡೀ ಸಮಾಜಕ್ಕೆ ಮಾದರಿಯಾಗಿರಬೇಕು. ತಮ್ಮ ಬದುಕಿನ ಹೋರಾಟದ ಜೊತೆ ಜೊತೆಯಲ್ಲಿ ಇತರರ ಬದುಕಿಗೂ ದಾರಿದೀಪ ಆಗಬೇಕು.

# ಪಂಚಾಂಗ : ಬುಧವಾರ , 27-10-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಆಶ್ವಯುಜ ಮಾಸ / ಕೃಷ್ಣ ಪಕ್ಷ
ತಿಥಿ: ಪಂಚಮಿ/ ನಕ್ಷತ್ರ: ಆದ್ರ್ರಾ/ ಮಳೆ ನಕ್ಷತ್ರ: ಸ್ವಾತಿ

# ಸೂರ್ಯೋದಯ ಬೆ.06.12 / ಸೂರ್ಯಾಸ್ತ05.55
# ರಾಹುಕಾಲ 12.00-01.30 / ಯಮಗಂಡ ಕಾಲ 07.30-09.00 / ಗುಳಿಕ ಕಾಲ 10.30-12.00

# ಇಂದಿನ ಭವಿಷ್ಯ
ಮೇಷ: ಉನ್ನತ ಮಟ್ಟದ ಸ್ನೇಹಿತರು ಪ್ರಯೋಜನ ಪಡೆಯುತ್ತಾರೆ. ಆದರೆ ಉತ್ತಮ ಆದಾಯ ಬರುವುದರಿಂದ ಯಾವುದೇ ವ್ಯತ್ಯಾಸವಿರುವುದಿಲ್ಲ.
ವೃಷಭ: ದಾನ, ಸೇವೆ ಮತ್ತು ಲೋಕೋಪಕಾರದ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ. ದುರಾಸೆ ತಪ್ಪಿಸಿ.
ಮಿಥುನ: ಕೆಟ್ಟ ಕನಸುಗಳು ಮನಸ್ಸನ್ನು ಅಸಮಾ ಧಾನಗೊಳಿಸುತ್ತವೆ. ಹೊಟ್ಟೆ ನೋವು ಬರಬಹುದು.

ಕಟಕ: ಆಧ್ಯಾತ್ಮಿಕ ವಿಷಯಗಳತ್ತ ಒಲವು ಹೆಚ್ಚಾಗು ತ್ತದೆ.ಅನೇಕ ಕೆಲಸಗಳು ನಯವಾಗಿ ನಡೆಯಲಿವೆ.
ಸಿಂಹ: ವಿರೋಧಿಗಳ ಮೋಸದ ಜಾಲದಲ್ಲಿ ಸಿಲುಕುತ್ತೀರಿ. ಕ್ರೋಧವು ಖ್ಯಾತಿಯನ್ನು ಹಾಳು ಮಾಡುತ್ತದೆ.
ಕನ್ಯಾ: ಕೆಲಸ-ಕಾರ್ಯಗಳಲ್ಲಿ ಹೆಚ್ಚು ಮಗ್ನರಾಗಿರಬೇಕು. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ.

ತುಲಾ: ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಕುಟುಂಬದೊಂದಿಗೆ ಚರ್ಚಿಸಿ ವಿವಾದ ಸೃಷ್ಟಿಯಾಗುವುದನ್ನು ತಪ್ಪಿಸಿ.
ವೃಶ್ಚಿಕ: ವ್ಯವಹಾರದಲ್ಲಿ ಹೆಚ್ಚು ಲಾಭ ಬರುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ.
ಧನುಸ್ಸು: ವೃತ್ತಿ ಜೀವನದಲ್ಲಿ ಮಾನಸಿಕ ಗೊಂದಲವನ್ನು ಅನುಭವಿಸುವಿರಿ.

ಮಕರ: ದುರಾಸೆಯು ಗೊಂದಲಕ್ಕೆ ಕಾರಣ ವಾಗುತ್ತದೆ. ಆಂತರಿಕ ಸಾಮಥ್ರ್ಯವು ಹೆಚ್ಚುತ್ತದೆ.
ಕುಂಭ: ತಾಯಿಯ ಚಿಕ್ಕಪ್ಪನ ಸಹಾಯದಿಂದ ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ.
ಮೀನ: ನೆರೆಹೊರೆಯವರೊಂದಿಗೆ ಮಾತನಾಡುವಲ್ಲಿಯೇ ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳುಮಾಡಿಕೊಳ್ಳುವಿರಿ.

Facebook Comments