ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-10-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಿಮ್ಮ ನೋಯಿಸಿದವರ ಲೆಕ್ಕ ಇಡಬೇಡಿ. ಆ ಭಗವಂತನೇ ಲೆಕ್ಕವಿಟ್ಟು, ಅವರವರ ಲೆಕ್ಕವನ್ನು ಸಮಯಕ್ಕೆ ಸರಿಯಾಗಿ ಚುಕ್ತ ಮಾಡುತ್ತಾನೆ.

# ಪಂಚಾಂಗ : ಗುರುವಾರ , 28-10-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಆಶ್ವಯುಜ ಮಾಸ / ಕೃಷ್ಣ ಪಕ್ಷ
ತಿಥಿ: ಸಪ್ತಮಿ/ ನಕ್ಷತ್ರ: ಆದ್ರ್ರಾ/ ಮಳೆ ನಕ್ಷತ್ರ: ಸ್ವಾತಿ

# ಸೂರ್ಯೋದಯ ಬೆ.06.13 / ಸೂರ್ಯಾಸ್ತ 05.55
# ರಾಹುಕಾಲ 01.30-03.00 / ಯಮಗಂಡ ಕಾಲ 06.00-07.30 / ಗುಳಿಕ ಕಾಲ 07.30-09.00

# ಇಂದಿನ ಭವಿಷ್ಯ
ಮೇಷ: ನಿಮ್ಮ ಕ್ರಿಯಾಶೀಲತೆ ಹಿರಿಯರ ಮೇಲೆ ಉತ್ತಮ ಪ್ರಭಾವ ಬೀರುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ಬಯಸಿದ ಯಶಸ್ಸು ಸಿಗಲಿದೆ.
ವೃಷಭ: ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮತ್ತು ಧ್ಯಾನದ ಮೊರೆ ಹೋಗಬೇಕಾಗುತ್ತದೆ.
ಮಿಥುನ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೋಗಬೇಡಿ. ನಿಮ್ಮ ರಹಸ್ಯವನ್ನು ಯಾರೊಂದಿಗೂ ಹಂಚಿಕೊಳ್ಳದಿರಿ.

ಕಟಕ: ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಕೆಲವು ಒಳ್ಳೆಯ ಸುದ್ದಿಗಳು ಬರಲಿವೆ.
ಸಿಂಹ: ಜೀವನ ಸಂಗಾತಿ ಯೊಂದಿಗೆ ಉತ್ತಮ ಸಮಯ ಕಳೆದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ.
ಕನ್ಯಾ: ತಾಯಿ ಕಡೆಯ ಬಂಧುಗಳನ್ನು ಭೇಟಿ ಮಾಡ ಬಹುದು. ಮನೆಯಲ್ಲಿ ಉತ್ತಮ ಬದಲಾವಣೆಗಳಾಗಲಿವೆ.

ತುಲಾ: ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕರಿದ ಮತ್ತು ಹುರಿದ ಆಹಾರವನ್ನು ಸೇವಿಸದಿರಿ. ನಿಮ್ಮ ಆರೋಗ್ಯಕ್ಕೆ ತೊಂದರೆಯಾಗಬಹುದು.
ವೃಶ್ಚಿಕ: ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುವರು.
ಧನುಸ್ಸು: ಆಸ್ತಿ ಖರೀದಿಸಲು ಯೋಜಿಸುತ್ತಿದ್ದರೆ ಕುಟುಂಬದವರ ಒಪ್ಪಿಗೆ ಪಡೆಯಬಹುದು.

ಮಕರ: ಧನಾತ್ಮಕ ಚಿಂತನೆಗಳೊಂದಿಗೆ ಉತ್ತಮ ಬದಲಾವಣೆ. ಶುಭ ಸುದ್ದಿ ಕೇಳಲಿದ್ದೀರಿ.
ಕುಂಭ: ತಾಯಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವಿರಿ. ಉತ್ತಮ ದಿನ.
ಮೀನ: ವ್ಯವಹಾರಗಳಿಗೆ ಸಂಬಂಸಿದ ವಿಚಾರ ಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು.

Facebook Comments