ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-10-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಜಗತ್ತಿನ ಅನೇಕ ಸಮಸ್ಯೆಗಳಿಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ, ಆದರೆ ಜಗತ್ತು ಬೆಳೆಯುವುದು ಮಾತ್ರ ನಿಂತಿಲ್ಲ. ಏಕೆಂದರೆ ಕಾಡುವ ಶಕ್ತಿಗಿಂತ ಕಾಪಾಡುವ ಶಕ್ತಿ ಬಲಿಷ್ಠವಾಗಿದೆ.

# ಪಂಚಾಂಗ : ಶುಕ್ರವಾರ , 29-10-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಆಶ್ವಯುಜ ಮಾಸ / ಕೃಷ್ಣ ಪಕ್ಷ
ತಿಥಿ: ಅಷ್ಟಮಿ/ ನಕ್ಷತ್ರ: ಪುಷ್ಯ/ ಮಳೆ ನಕ್ಷತ್ರ: ಸ್ವಾತಿ

# ಸೂರ್ಯೋದಯ ಬೆ.06.13 / ಸೂರ್ಯಾಸ್ತ 05.54
# ರಾಹುಕಾಲ 10.30-12.00 / ಯಮಗಂಡ ಕಾಲ 03.00-04.30 / ಗುಳಿಕ ಕಾಲ 07.30-09.00

# ಇಂದಿನ ಭವಿಷ್ಯ
ಮೇಷ: ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸಬೇಕಾಗಬಹುದು. ಖರ್ಚು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಎಚ್ಚರ ವಹಿಸಿ.
ವೃಷಭ: ಸಹೋದ್ಯೋಗಿಗಳೊಂದಿಗೆ ಪ್ರಾಮಾಣಿಕತೆ ಯಿಂದ ವರ್ತಿಸುವುದು ಒಳಿತು.
ಮಿಥುನ: ವಾದ ಮತ್ತು ಸಂಘರ್ಷಗಳನ್ನು ತಪ್ಪಿಸಿ. ಇದು ನಿಮಗೆ ಹಾನಿಕಾರಕವಾಗುತ್ತದೆ.

ಕಟಕ: ವ್ಯವಹಾರ ಕ್ಷೇತ್ರದಲ್ಲಿ ಮೌನವಾಗಿರುವುದು ಲಾಭದಾಯಕವಾಗಿರುತ್ತದೆ.
ಸಿಂಹ: ಆಪ್ತ ಸ್ನೇಹಿತರ ಸಲಹೆ ಮತ್ತು ಸಹಕಾರದೊಂದಿಗೆ, ನಿಮ್ಮ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡುವಿರಿ.
ಕನ್ಯಾ: ಪ್ರಮುಖ ಯೋಜನೆ ಪೂರ್ಣಗೊಳಿಸಲು ಹಿರಿಯರ ಸಲಹೆ-ಸಹಕಾರ ಪಡೆಯುವುದು ಒಳಿತು.

ತುಲಾ: ನಿಮ್ಮ ಸಮಸ್ಯೆಗಳನ್ನು ನೀವೇ ಪರಿಹರಿಸಲು ಪ್ರಯತ್ನಿಸಿ. ಇದು ನಿಮ್ಮ ಶಾಶ್ವತ ಯಶಸ್ಸಿಗೆ ಕಾರಣವಾಗಲಿದೆ. ಬಿಡುವಿಲ್ಲದ ದಿನವಾಗಿರಲಿದೆ.
ವೃಶ್ಚಿಕ: ನಿಮ್ಮ ಸಂಪತ್ತು ಮತ್ತು ಕೀರ್ತಿ ಹೆಚ್ಚಾಗು ತ್ತದೆ. ಧಾರ್ಮಿಕ ಕೆಲಸದಲ್ಲಿ ಆಸಕ್ತಿ ಹೊಂದಿರುವಿರಿ.
ಧನುಸ್ಸು: ಕುಟುಂಬದ ಸದಸ್ಯರ ಸಹಾಯದಿಂದ ಹಣ ಸಂಪಾದಿಸಬಹುದು. ಹತ್ತಿರದ ಸಂಬಂಧಿಕರ ಮನೆಗೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ.

ಮಕರ: ಸ್ವಲ್ಪ ಸಮಯವನ್ನು ಮನೆಯವರೊಂದಿಗೆ ಕಳೆದರೆ ಒಳ್ಳೆಯದು. ಬದಲಾವಣೆ ಇರುತ್ತದೆ.
ಕುಂಭ: ಕೆಲವು ಮಾನಸಿಕ ಒತ್ತಡಗಳ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ.
ಮೀನ: ಕೆಲಸ-ಕಾರ್ಯಗಳಲ್ಲಿನ ಫಲಿತಾಂಶಗಳು ನಿಮ್ಮ ನಿರೀಕ್ಷೆಗಳಂತೆ ಇರದಿದ್ದಲ್ಲಿ ನಿರಾಶರಾಗಬೇಡಿ.

Facebook Comments