ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-10-2021, ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

#ನಿತ್ಯ ನೀತಿ: ಸಂಬಂಧಗಳು ಬಟ್ಟೆಯಂತೆ ಒಮ್ಮೆ ಹರಿದರೆ ಮುಗಿಯಿತು. ನೀವೆಷ್ಟೇ ಹೊಲಿಗೆ ಹಾಕಿದರೂ ಹರಿದ ಗುರುತು ಹೋಗುವುದಿಲ್ಲ.

#ಪಂಚಾಂಗ

ಮಂಗಳವಾರ 12-10-2021
ಪ್ಲವನಾಮ ಸಂವತ್ಸವ
ದಕ್ಷಿಣಾಯನ
ಶರದೃತು
ಆಶ್ವಯುಜ ಮಾಸ
ಶುಕ್ಲ ಪಕ್ಷ
ತಿಥಿ: ಸಪ್ತಮಿ
ನಕ್ಷತ್ರ: ಮೂಲಾ
ಮಳೆ ನಕ್ಷತ್ರ: ಚಿತ್ತಾ

ಸೂರ್ಯೋದಯ
ಬೆ.06.10
ಸೂರ್ಯಾಸ್ತ
06.03

ರಾಹುಕಾಲ
3.00-4.30
ಯಮಗಂಡ ಕಾಲ
9.00-10.30
ಗುಳಿಕ ಕಾಲ
12.00-1.30

# ರಾಶಿ ಭವಿಷ್ಯ

ಮೇಷ: ದಿನದ ಆರಂಭ ಚೆನ್ನಾಗಿದ್ದರೂ ಸಂಜೆ ವೇಳೆಗೆ ಯಾವುದೋ ಕಾರಣದಿಂದ ಹಣ ಖರ್ಚಾಗಬಹುದು.
ವೃಷಭ: ನಿಮ್ಮ ಪ್ರೀತಿಪಾತ್ರರಿಗಾಗಿ ವಿಶೇಷವಾದ ಕೆಲಸ ಮಾಡುವುದನ್ನು ಮರೆಯಬೇಡಿ.
ಮಿಥುನ: ನಿಮ್ಮ ಸಮಯ ಮತ್ತು ಶಕ್ತಿಯನ್ನು ಇತರರಿಗೆ ಸಹಾಯ ಮಾಡಲು ಸಮರ್ಪಿಸಿ.

ಕಟಕ: ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಹೇಳಲಾಗುವುದಿಲ್ಲ. ನೋಡಿಕೊಂಡು ಹಣ ಖರ್ಚು ಮಾಡುವುದು ಒಳಿತು.
ಸಿಂಹ: ಜೀವನ ಸಂಗಾತಿಯೊಂದಿಗೆ ಸಮಯ ಕಳೆಯುವಾಗ ಅವರಿಗೆ ಇನ್ನಷ್ಟು ಸಮಯ ಅಂದುಕೊಳ್ಳುವಿರಿ.
ಕನ್ಯಾ: ಹಳೆಯ ಸ್ನೇಹಿತ ವ್ಯಾಪಾರದಲ್ಲಿ ಲಾಭ ಗಳಿಸಲು ನಿಮಗೆ ಸಲಹೆ ನೀಡಬಹುದು.

ತುಲಾ: ನಿಮ್ಮ ಪ್ರೀತಿ ಪಾತ್ರರು ನಿಮ್ಮನ್ನು ಸಂತೋಷವಾಗಿರಿಸಲು ನಿಮಗೆ ಇಷ್ಟವಾಗುವಂತಹ ಕೆಲಸಗಳನ್ನು ಮಾಡುತ್ತಾರೆ.
ವೃಶ್ಚಿಕ: ಹಳೆಯ ಹಣ ಹೂಡಿಕೆಯಿಂದ ಹೆಚ್ಚು ಪ್ರಯೋಜನ ಪಡೆಯುವಿರಿ. ಅತ್ಯುತ್ತಮವಾದ ನಡವಳಿಕೆಯನ್ನು ಹೊಂದಿರಬೇಕು.
ಧನುಸ್ಸು: ನಿಮ್ಮನ್ನು ಸಂತೋಷಗೊಳಿಸಲು ನಿಮ್ಮ ಜೀವನ ಸಂಗಾತಿ ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮಕರ: ಹಣಕಾಸಿನಲ್ಲಿ ಸುಧಾರಣೆಯಾಗುವುದರಿಂದ ದೀರ್ಘಕಾಲದಿಂದ ಬಾಕಿ ಇರುವ ಬಿಲ್ಲುಗಳನ್ನು ಪಾವತಿಸಲು ಹೆಚ್ಚು ಅನುಕೂಲಕರವಾಗುತ್ತದೆ.
ಕುಂಭ: ದೇವಸ್ಥಾನ ಮತ್ತು ಪ್ರಶಾಂತವಾಗಿರುವ ಕಡೆ ಹೆಚ್ಚಿನ ಸಮಯ ಕಳೆಯಲು ಬಯಸುವಿರಿ.
ಮೀನ: ವಿಶ್ರಾಂತಿ ಪಡೆಯುವ ಸಲುವಾಗಿ ಹಳೆಯ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಿರಿ.

Facebook Comments