ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-10-2021, ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

#ನಿತ್ಯ ನೀತಿ: ಸಂಬಂಧಗಳ ನಡುವಿನ ಮಧುರತೆಯನ್ನು ಉಳಿಸಿ ಕೊಳ್ಳಬೇಕಾದರೆ ಹೃದಯವನ್ನು ಉಪಯೋಗಿಸಿಕೊಳ್ಳಬೇಕು. ಮೆದುಳನ್ನಲ್ಲ.

#ಪಂಚಾಂಗ

ಗುರುವಾರ 14-10-2021

ಪ್ಲವನಾಮ ಸಂವತ್ಸವ
ದಕ್ಷಿಣಾಯನ
ಶರದೃತು
ಆಶ್ವಯುಜ ಮಾಸ
ಶುಕ್ಲ ಪಕ್ಷ
ತಿಥಿ: ನವಮಿ
ನಕ್ಷತ್ರ: ಉತ್ತರಾಷಾಢ
ಮಳೆ ನಕ್ಷತ್ರ: ಚಿತ್ತಾ

ಸೂರ್ಯೋದಯ
ಬೆ.06.10
ಸೂರ್ಯಾಸ್ತ
06.01

ರಾಹುಕಾಲ
1.30-3.00
ಯಮಗಂಡ ಕಾಲ
6.00-7.30
ಗುಳಿಕ ಕಾಲ
9.00-10.30

# ರಾಶಿ ಭವಿಷ್ಯ

ಮೇಷ: ಅಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡು ವುದು ಸರಿಯಿಲ್ಲ. ಅವರ ವಿಶ್ವಾಸಾರ್ಹತೆ ತಿಳಿಯದೆ ಅವರಿಗೆ ತಮ್ಮ ಜೀವನದ ವಿಷಯಗಳನ್ನು ತಿಳಿಸಿ ಸಮಯ ಹಾಳುಮಾಡಿಕೊಳ್ಳದಿರಿ.
ವೃಷಭ: ಕುಟುಂಬದ ಸದಸ್ಯರ ಒಳ್ಳೆಯ ಸಲಹೆ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
ಮಿಥುನ: ನಿಮ್ಮ ಸಮಸ್ಯೆ ಮರೆತು ಕುಟುಂಬದ ಸದಸ್ಯರೊಂದಿಗೆ ಒಳ್ಳೆಯ ಸಮಯ ಕಳೆಯುತ್ತೀರಿ.

ಕಟಕ: ಸಾಮಾಜಿಕ ಜೀವನಕ್ಕಿಂತ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಹಿಂದಿನ ದಿನಗಳ ಶ್ರಮ ಈಗ ಫಲ ನೀಡುತ್ತದೆ
ಸಿಂಹ: ಕೆಲ ಜನರೊಂದಿಗೆ ಬೆರೆಯುವುದು ಸರಿಯಲ್ಲ ಎಂದು ನೀವು ಭಾವಿಸಿದರೆ ಅವರೊಂದಿಗೆ ಇದ್ದು ನಿಮ್ಮ ಸಮಯ ಹಾಳಾಗುತ್ತಿದ್ದರೆ ಅವರ ಸಹವಾಸ ಬಿಡಬೇಕು.
ಕನ್ಯಾ: ಆರ್ಥಿಕವಾಗಿ ಸಾಕಷ್ಟು ಸುಧಾರಣೆ ಕಾಣುವಿರಿ. ಮನರಂಜನೆಗಾಗಿ ಹಣ ಖರ್ಚಾಗಲಿದೆ.

ತುಲಾ: ಕಚೇರಿಯಲ್ಲಿ ಕೆಲಸದ ಒತ್ತಡ ನಿಮ್ಮ ಮನಸ್ಸನ್ನು ಆಕ್ರಮಿಸಿದ್ದರೂ ಸಹ ಪ್ರೀತಿಪಾತ್ರರು ನಿಮಗೆ ಸಂತೋಷ ಉಂಟುಮಾಡುತ್ತಾರೆ.
ವೃಶ್ಚಿಕ: ಮನೆಯ ಸದಸ್ಯರೊಂದಿಗೆ ಮಾತನಾಡುವಾಗ ನಿಮಗೆ ಕೋಪ ಬರುವ ರೀತಿ ಮನೆಯವರು ಮಾತನಾಡಬಹುದು.
ಧನುಸ್ಸು: ಮಕ್ಕಳ ಮೇಲೆ ನಿಮ್ಮ ಅಭಿಪ್ರಾಯ ಹೇರುವುದರಿಂದ ಅವರಿಗೆ ಕೋಪ ಬರಬಹುದು.

ಮಕರ: ಹಣದ ವಿಷಯದಲ್ಲಿ ಕೆಲವು ಸವಾಲು ಗಳನ್ನು ಎದುರಿಸುವ ಸಂದರ್ಭ ಬರಲಿದೆ.
ಕುಂಭ: ಸಹೋದ್ಯೋಗಿಗಳೊಂದಿಗೆ ಜಾಣತನದಿಂದ ವರ್ತಿಸಿ ಕೆಲಸ ಮಾಡಿಸಿಕೊಳ್ಳುವಿರಿ.
ಮೀನ: ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ.

Facebook Comments