ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-10-2021, ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

#ನಿತ್ಯ ನೀತಿ: ಒಬ್ಬರು ಇನ್ನೊಬ್ಬರನ್ನು ಬದಲಾಯಿಸಲಾಗದು. ಆದರೆ, ಒಂದು ಘಟನೆ ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ.

#ಪಂಚಾಂಗ
10-10-2021 ಭಾನುವಾರ
ಪ್ಲವನಾಮ ಸಂವತ್ಸರ
ದಕ್ಷಿಣಾಯಣ
ಶರದೃತು
ಅಶ್ವಯುಜ ಮಾಸ
ಶುಕ್ಲ ಪಕ್ಷ
ತಿಥಿ: ಚತುರ್ಥಿ
ನಕ್ಷತ್ರ: ಅನೂರಾಧ
ಮಳೆ ನಕ್ಷತ್ರ: ಚಿತ್ತಾ

ರಾಹುಕಾಲ: ಬೆಳಗ್ಗೆ 4.30 ರಿಂದ 6 ಗಂಟೆವರೆಗೆ
ಗುಳಿಕ ಕಾಲ: ಮಧ್ಯಾಹ್ನ 3 ರಿಂದ ಸಂಜೆ 4.30ರ ವರೆಗೆ
ಯಮಗಂಡ ಕಾಲ: ಮಧ್ಯಾಹ್ನ 12 ರಿಂದ1.30ರ ವರೆಗೆ

# ರಾಶಿ ಭವಿಷ್ಯ

ಮೇಷ: ಅಣ್ಣ-ತಂಗಿಯರಲ್ಲಿ ಒಬ್ಬರು ನಿಮ್ಮಿಂದ ಹಣದ ಸಹಾಯ ಕೇಳುವರು. ನಿಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಹದಗೆಡಬಹುದು.
ವೃಷಭ: ತಂದೆಯವರ ಕಠಿಣ ನಡವಳಿಕೆ ನಿಮಗೆ ಸಿಟ್ಟು ಬರಿಸುತ್ತದೆ. ನೀವು ಶಾಂತವಾಗಿರುವುದು ಅಗತ್ಯವಾಗಿರುತ್ತದೆ.
ಮಿಥುನ: ನಿಮ್ಮ ಬಿಡುವಿನ ಸಮಯವನ್ನು ಮೊಬೈಲ್ ಅಥವಾ ಟಿವಿ ನೋಡುವುದರಲ್ಲಿ ಕಳೆಯುವಿರಿ. ಇದರಿಂದ ಸಂಗಾತಿಗೆ ನಿಮ್ಮಿಂದ ಅಸಮಾಧಾನವಾಗುತ್ತದೆ.

ಕಟಕ: ಹಲವಾರು ವಿಷಯ ಗಳ ಬಗ್ಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.
ಸಿಂಹ: ನಿಮ್ಮ ಮಾತುಗಳು ನಿಮ್ಮ ಆಪ್ತರಿಗೆ ಅರ್ಥ ವಾಗುವುದಿಲ್ಲವಾದ್ದರಿಂದ ತೊಂದರೆಗೆ ಸಿಲುಕುವಿರಿ
ಕನ್ಯಾ: ನಿಮಗೆ ತಿಳಿದ ಜನರ ಮೂಲಕ ಆದಾಯದ ಹೊಸ ಮೂಲಗಳು ಕಂಡುಬರುತ್ತವೆ.

ತುಲಾ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ತಮ್ಮ ಹಣ ಕಳೆದುಕೊಳ್ಳಬಹುದು.
ವೃಶ್ಚಿಕ: ಶಿಶುವಿನ ಆರೋಗ್ಯ ಸ್ವಲ್ಪ ಚಿಂತೆಗೆ ಕಾರಣವಾಗಬಹುದು. ಎಚ್ಚರಿಕೆಯಿಂದಿರಿ.
ಧನುಸ್ಸು: ಸಂಗಾತಿಯ ಒರಟು ವರ್ತನೆ ನಿಮ್ಮ ಮೇಲೆ ಒತ್ತಡ ಹಾಕಬಹುದು.

ಮಕರ: ಹಳೆಯ ಸ್ನೇಹಿತನಿಗೆ ಸಹಾಯ ಮಾಡುವಿರಿ
ಕುಂಭ: ದೂರ ಪ್ರಯಾಣ ಮಾಡುವುದರಿಂದ ನಷ್ಟವಾಗುವ ಸಾಧ್ಯತೆಯಿದೆ.
ಮೀನಾ: ಆರೋಗ್ಯದಲ್ಲಿ ತುಸು ವ್ಯತ್ಯಯ.

Facebook Comments