ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-11-2021)

ಈ ಸುದ್ದಿಯನ್ನು ಶೇರ್ ಮಾಡಿ

# ನಿತ್ಯ ನೀತಿ
ನೀವು ಸಂತೋಷದಿಂದಿರುವುದೇ ನೀವು ನಿಮ್ಮ ಶತ್ರುಗಳಿಗೆ ಕೊಡುವ ಅತೀ ದೊಡ್ಡ ಶಿಕ್ಷೆ.

# ಪಂಚಾಂಗ : ಸೋಮವಾರ,01-11-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಆಶ್ವಯುಜ ಮಾಸ / ಕೃಷ್ಣ ಪಕ್ಷ
ತಿಥಿ: ಏಕಾದಶಿ / ನಕ್ಷತ್ರ: ಪೂರ್ವಾಭಾದ್ರ / ಮಳೆ ನಕ್ಷತ್ರ: ಸ್ವಾತಿ

# ಸೂರ್ಯೋದಯಬೆ.06.13 / ಸೂರ್ಯಾಸ್ತ 05.53
# ರಾಹುಕಾಲ 7.30-9.00 / ಯಮಗಂಡ ಕಾಲ 10.30-12.00 / ಗುಳಿಕ ಕಾಲ 1.30-3.00

# ರಾಶಿ ಭವಿಷ್ಯ
ಮೇಷ: ಮನೆಯ ಕೆಲವು ಜನರು ನಿಮ್ಮೊಂದಿಗೆ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು.
ವೃಷಭ: ಶತ್ರುಗಳು ತಮ್ಮ ಪಿತೂರಿ ಕೆಲಸಗಳಿಂದ ಯಶಸ್ಸು ಸಾಸಲು ಸಾಧ್ಯವಾಗುವುದಿಲ್ಲ.
ಮಿಥುನ: ದಾನ ಮಾಡುವ ಮೂಲಕ ಮಾನಸಿಕ ಶಾಂತಿಯನ್ನು ಪಡೆಯಲು ಪ್ರಯತ್ನಿಸುವಿರಿ.

ಕಟಕ: ನಿಮ್ಮ ಕೆಲಸ-ಕಾರ್ಯಗಳನ್ನು ನಿರ್ಭಯವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.
ಸಿಂಹ: ಎಲ್ಲವನ್ನೂ ಸಹಿಸಿ ಕೊಳ್ಳುವ ವ್ಯಕ್ತಿಯಾಗಿ ರುವುದರಿಂದ ನಿಮ್ಮೊಂದಿಗೆ ಸಂಬಂಧ ಹಂಚಿಕೊಳ್ಳಲು ಬಯಸುತ್ತಾರೆ.
ಕನ್ಯಾ: ಹೊಸ ಯೋಜನೆಗಳ ಕೆಲಸ ಆರಂಭವಾಗಲಿದೆ. ದೇಹದಲ್ಲಿ ಯಾವುದೇ ನೋವು ಕಾಣಿಸಿಕೊಂಡರೆ ಅದು ಸುಧಾರಿಸುತ್ತದೆ.

ತುಲಾ: ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗುವ ಲಕ್ಷಣಗಳಿವೆ. ಹಿರಿಯರು ನೀವು ಹಿಂದೆ ಮಾಡಿದ ಒಳ್ಳೆಯ ಕೆಲಸಗಳಿಂದ ಪ್ರಭಾವಿತರಾಗುತ್ತಾರೆ. ಜನರ ಪ್ರಭಾವ ಹೆಚ್ಚಾಗಲಿದೆ.
ವೃಶ್ಚಿಕ: ಶಿಕ್ಷಣದ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ. ಹಳೆಯ ಸ್ನೇಹಿತನನ್ನು ಭೇಟಿಯಾಗುತ್ತೀರಿ.
ಧನುಸ್ಸು: ಸ್ನೇಹಿತರೊಂದಿಗೆ ಸಮಯ ಕಳೆಯಲು ಪ್ರಯತ್ನಿಸುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚು.

ಮಕರ: ಧಾರ್ಮಿಕ ಕೆಲಸ-ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಿರುತ್ತದೆ. ಲಾಭದಾಯಕ ದಿನವಾಗಿದೆ.
ಕುಂಭ: ಶತ್ರುಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತೀರಿ. ಆತ್ಮೀಯರಿಂದ ಮನಸ್ಸಿಗೆ ಸಂತಸವಾಗುತ್ತದೆ.
ಮೀನ: ಮಕ್ಕಳು ಭವಿಷ್ಯದ ಬಗ್ಗೆ ಯೋಚಿಸುತ್ತಾರೆ ಮತ್ತು ಯೋಜನೆಗಳನ್ನು ರೂಪಿಸಿಕೊಳ್ಳುವರು.

Facebook Comments

Sri Raghav

Admin