ಇಂದಿನ ರಾಶಿ ಭವಿಷ್ಯ (02-08-2020 ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

# ಮೇಷ : ಅನಾರೋಗ್ಯ ಕಾಡುವುದು, ಧನಹೀನ ರಾಗುವಿರಿ, ಮಿತವಾಗಿ ಮಾತನಾಡುವಿರಿ, ಉತ್ತಮ ಆರೋಗ್ಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ನಿಮ್ಮನ್ನು ಸಕ್ರಿಯಗೊಳಿಸುತ್ತದೆ. ಅಂದುಕೊಂಡಂತೆ ನಡೆಯುವುದಿಲ್ಲ, ಮಾತಿನಲ್ಲಿ ಹಿಡಿತವಿರಲಿ

# ವೃಷಭ : ವಜ್ರ-ವೈಢೂರ್ಯ ಮನೆಗೆ ತರುವ ಯೋಚನೆ ಮಾಡುವಿರಿ, ಧಾರ್ಮಿಕ ಆಚರಣೆ ಮಾಡಿ, ಅನಿರಿಕ್ಷಿತ ಸುದ್ದಿ ನಿಮ್ಮ ಇಡೀ ದಿನವನ್ನು ಸಂತೋಷಗೊಳಿಸಲಿದೆ.ಆರ್ಥಿಕ ಸಂಕಷ್ಟ ದೂರಾಗಲಿದ್ದು, ಮಕ್ಕಳಿಂದ ಶುಭವಾರ್ತೆ ಕೇಳುವಿರಿ

# ಮಿಥುನ: ಮನೆಯಿಂದ ದೂರವಿರುವಿರಿ, ಹೊರಗಿನ ವಾತಾವರಣ ಚೆನ್ನಾಗಿರುವುದು, ಒತ್ತಡ ನಿವಾರಿಸಲು ಕುಟುಂಬದ ಸದಸ್ಯರ ಬೆಂಬಲ ಪಡೆಯಿರಿ.ಆತುರಪಟ್ಟು ಅವಕಾಶ ವಂಚಿತರಾಗದಿರಿ

# ಕಟಕ : ದಿನಪೂರ್ತಿ ಅನಾ ರೋಗ್ಯದಿಂದ ಬಳಲುವಿರಿ, ತರಾತುರಿಯಲ್ಲಿ ಹೂಡಿಕೆ ಮಾಡಬೇಡಿ, ಕೆಲಸಗಳು ಸುಗಮವಾಗಿ ಆಗುವುದು. ಮನಸ್ಸಿನ ಪ್ರಶಾಂತತೆಗೆ ಸ್ನೇಹಿತರೊಂದಿಗೆ ಬೆರೆಯಿರಿ

# ಸಿಂಹ: ಆಗಾಗ್ಗೆ ಕಣ್ಣು ಕೆಂಪಾಗುವುದು, ಮಾನಸಿಕ ವ್ಯಸನಗಳಿರುವುವು, ಪರಿಸ್ಥಿತಿ ಕೈಮೀರುವ ಮೊದಲು ಮಿತಿಗಳನ್ನು ಅಳವಡಿಸಿಕೊಳ್ಳಿ, ನಿಮ್ಮ ಒರಟು ಸ್ವಭಾವದಿಂದ ಆತ್ಮೀಯರಿಂದ ದೂರಾಗುವಿರಿ

# ಕನ್ಯಾ: ದಾನ-ಧರ್ಮ ಮಾಡು ವುದರಿಂದ ಶುಭ, ಬಂಧು- ಮಿತ್ರರ ಸಹಕಾರ ಸಿಗುವುದು, ಹಳೆಯ ಸಂಬಂಧಿಗಳು ಅವಿವೇಕದ ಬೇಡಿಕೆಗಳನ್ನಿಡುವರು. ಬಾಳಸಂಗಾತಿಯ ಬುದ್ಧಿಮತ್ತೆಯಿಂದ ಸಮಸ್ಯೆ ಗಳಿಗೆ ಪರಿಹಾರ

# ತುಲಾ: ಸ್ತ್ರೀಯರಿಂದ ಕೆಲವು ಅಡಚಣೆಗಳಾಗಲಿವೆ, ಆರೋಗ್ಯದಲ್ಲಿ ಚೇತರಿಕೆ ಸಾಧ್ಯತೆ, ವಾಕ್ಚತುರ್ಯದಿಂದ ಕಾರ್ಯಸಿದ್ಧಿ, ವಿರೋಧಿಗಳಿಂದ ಹೊಗಳಿಕೆ

# ವೃಶ್ಚಿಕ: ಪ್ರಯಾಣ ಮಾಡುವಾಗ ಚಿಂತನೆ ನಡೆಸುವಿರಿ, ದೂರ ಪ್ರಯಾಣ ಮಾಡದಿರಿ, ಉತ್ತಮ ದಿನ, ನೂತನ ಬಂಡವಾಳ ಹೂಡಿಕೆಗೆ ಯೋಜನೆ

# ಧನುಸ್ಸು: ಲೋಹ ಸಂಬಂಧಿ ಕೆಲಸ ಮಾಡುವ ವರಿಗೆ ಆದಾಯ ಕಡಿಮೆ ಇರುವುದು, ನಿಮ್ಮ ಸ್ಪರ್ಧಾ ಮನೋಭಾವನೆ ನಿಮ್ಮನ್ನು ಗೆಲ್ಲಿಸುತ್ತದೆ. ಬೇಡದ ವಿಚಾರಗಳಿಂದ ಮನಸ್ಸಿಗೆ ನೋವು, ತಾಳ್ಮೆ ವಹಿಸಿದರೆ ಒಳಿತು.

# ಮಕರ: ಗುರು, ಮಾತಾ-ಪಿತೃಗಳ ಸೇವೆ ಮಾಡುವಿರಿ, ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ಬಂಧುಗಳ ಆಗಮನ ಸಾಧ್ಯತೆ

# ಕುಂಭ: ಬಂಧುಗಳಿಂದ ರಾಜಕೀಯ ಪ್ರವೇಶ ಮಾಡುವಿರಿ, ಸಂಗಾತಿಯ ಅನಾರೋಗ್ಯ ಕಾರಣ ಒತ್ತಡಕ್ಕೊಳಗಾಗಬಹುದು. ಕಾರ್ಯಗಳಲ್ಲಿ ಜಯ, ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರ

# ಮೀನ: ಶ್ರಮದ ಜೀವನ ಮಾಡುವ ಸ್ಥಿತಿ ಇರುವುದು, ಜನರೊಡನೆ ವ್ಯವಹರಿಸುವಾಗ ಎಚ್ಚರದಿಂದಿರಿ, ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ, ಅನಾರೋಗ್ಯದಿಂದ ಬಳಲಿಕೆ, ಅಧಿಕ ಖರ್ಚು.

Facebook Comments

Sri Raghav

Admin