ಇಂದಿನ ಪಂಚಾಂಗ ಮಾತು ರಾಶಿಭವಿಷ್ಯ(04-05-2021)

ಈ ಸುದ್ದಿಯನ್ನು ಶೇರ್ ಮಾಡಿ

# ನಿತ್ಯ ನೀತಿ :
ಮನುಷ್ಯ ಎಷ್ಟು ಸಾಧ್ಯವೋ ಅಷ್ಟು ದುಡಿಯಬೇಕು. ದುಡಿದುದರಲ್ಲಿ ನಾಲ್ಕು ಜನರ ಚೈತನ್ಯ ಶಕ್ತಿಯನ್ನು ಹೆಚ್ಚಿಸುವುದಕ್ಕೆ ವಿನಿಯೋಗಿಸಬೇಕು. ಹಾಗಾಗಬೇಕಾದರೆ ಮನುಷ್ಯ ಬೌದ್ಧಿಕವಾಗಿ ಬೆಳೆಯಬೇಕು, ಆತನಲ್ಲಿ ಆಧ್ಯಾತ್ಮಿಕ ಪ್ರಜ್ಞೆ ಅರಳಬೇಕು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಮಂಗಳವಾರ, 03.05.2021
ಸೂರ್ಯ ಉದಯ ಬೆ.06.01 / ಸೂರ್ಯ ಅಸ್ತ ಸಂ.06.32
ಪ್ಲವ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ (ಮ.01.10) / ನಕ್ಷತ್ರ: ಶ್ರವಣ (ಬೆ.08.26) / ಯೋಗ: ಶುಕ್ಲ / ಕರಣ: ಕೌಲವ-ತೈತಿಲ / ಮಳೆ ನಕ್ಷತ್ರ: ಭರಣಿ 2ನೇ ಪಾದ / ಮಾಸ: ಮೇಷ / ತೇದಿ: 21

#ರಾಶಿ ಭವಿಷ್ಯ :
ಮೇಷ: ಅನಿರೀಕ್ಷಿತ ಧನಾಗಮನವಾಗಲಿದೆ. ಖರ್ಚು-ವೆಚ್ಚಗಳ ಬಗ್ಗೆ ಹಿಡಿತ ಸಾಧಿಸಿ
ವೃಷಭ: ಬಂಡವಾಳ ಹೂಡಿಕೆಗೆ ಸಕಾಲ
ಮಿಥುನ: ಹಣಕಾಸಿನ ಪರಿಸ್ಥಿತಿ ಉತ್ತಮವಾಗಿ ದ್ದರೂ ಬಂದ ಹಣ ನೀರಿನಂತೆ ಖರ್ಚಾಗುವುದು

ಕಟಕ: ವೃತ್ತಿ ರಂಗದಲ್ಲಿ ಕಾರ್ಯ ಒತ್ತಡಗಳಿರುತ್ತವೆ
ಸಿಂಹ: ನಿರೀಕ್ಷಿತ ಕೆಲಸ- ಕಾರ್ಯಗಳು ವಿಳಂಬಗತಿಯಲ್ಲಿ ನಡೆಯಲಿವೆ. ಎಚ್ಚರಿಕೆಯಿಂದಿರಿ
ಕನ್ಯಾ: ನಿರುದ್ಯೋಗಿಗಳಿಗೆ ಸದ್ಯದಲ್ಲೇ ತಾತ್ಕಾಲಿಕ ಅವಕಾಶಗಳು ಒದಗಿ ಬರಲಿವೆ

ತುಲಾ: ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತಾ ಹೋಗಲಿದೆ
ವೃಶ್ಚಿಕ: ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗಕ್ಕೆ ಒಳ್ಳೆಯ ಅವಕಾಶಗಳಿವೆ
ಧನುಸ್ಸು: ಹಣ ನೀರಿನಂತೆ ಖರ್ಚಾಗಲಿದೆ

ಮಕರ: ಆರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ
ಕುಂಭ: ದಾಂಪತ್ಯದಲ್ಲಿ ಕಲಹಗಳಿದ್ದರೂ ಹೊಂದಾಣಿಕೆಯಿಂದ ಸರಿಯಾಗಲಿದೆ
ಮೀನ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ

Facebook Comments

Sri Raghav

Admin