ಇಂದಿನ ರಾಶಿ ಭವಿಷ್ಯ (04-07-2020)

ಈ ಸುದ್ದಿಯನ್ನು ಶೇರ್ ಮಾಡಿ

ಮೇಷ : ಸ್ನೇಹಿತರು ನಿಮ್ಮನ್ನು ಹೀಯಾಳಿಸುವರು, ಅನಾವಶ್ಯಕ ತಪ್ಪು ಅಭಿಪ್ರಾಯಗಳು ಮೂಡಲಿವೆ, ಸಾಂಸಾರಿಕವಾಗಿ ದಾಯಾದಿಗಳ ಹಳೇ ಜಗಳದಿಂದ ಕಿರಿಕಿರಿ, ಭೂ ವ್ಯವಹಾರದಲ್ಲಿ ಲಾಭವಿದೆ, ನಿಮ್ಮ ಆರೋಗ್ಯ ಉತ್ತಮವಾಗಿರುವುದು, ನಿಮಗೆ ಬರುವ ಹೆಚ್ಚುವರಿ ಆದಾಯ ವನ್ನು ಸತ್ಕಾರ್ಯಗಳಿಗೆ ವಿನಿಯೋಗ ಮಾಡುವಿರಿ

ವೃಷಭ : ಸಾಲಗಾರರಿಂದ ಮುಕ್ತಿ ದೊರೆಯುತ್ತದೆ, ಗೃಹದಲ್ಲಿ ಸಂತಸದ ವಾತಾವರಣವಿರುತ್ತದೆ, ಮಕ್ಕಳಿಂದ ನಷ್ಟ ಅನುಭವಿಸಬೇಕಾಗುತ್ತದೆ, ವ್ಯವಹಾರ ಸಮತೋಲನದಿಂದ ಹಿರಿಯರಿಗೆ ಹರ್ಷವಾಗುವುದು, ಉತ್ತಮ ದಿನ

ಮಿಥುನ: ಸರ್ಕಾರಿ ಅಧಿಕಾರಿಗಳು ವಿಪತ್ತಿನಲ್ಲಿ ಸಿಲುಕುವ ಸಾಧ್ಯತೆಗಳಿವೆ, ದೂರ ಪ್ರಯಾಣ ಮಾಡದಿರಿ, ಕೈಗಾರಿಕಾ ವಲಯದವರಿಗೆ ಕಾರ್ಮಿಕರ ಸಮಸ್ಯೆ ಎದುರಾಗಲಿದೆ, ಕಾರ್ಯವಿಫಲತೆಯಿಂದ ಬೇಸರ, ಪ್ರಯತ್ನಿಸಿದ ಕಾರ್ಯದಲ್ಲಿ ಜಯ ಲಭಿಸುತ್ತದೆ, ಹಿತಶತ್ರುಗಳಿಂದ ದೂರ ಸರಿಯುವಿರಿ

ಕಟಕ : ಅನಾವಶ್ಯಕವಾಗಿ ಧನ ಹಾನಿಯಾಗುವುದು, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ತಯಾರಿ ಹಾಗೂ ದೂರ ಸಂಚಾರ ಸಾಧ್ಯತೆ, ಸಾಲಗಾರರಿಂದ ಮುಕ್ತಿ ದೊರೆಯಲಿದೆ, ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ

ಸಿಂಹ: ಪುಣ್ಯ ಕ್ಷೇತ್ರ ದರ್ಶನದಿಂದ ಶುಭವಾಗುವುದು, ಸರ್ಕಾರಿ ನೌಕರರಿಗೆ ಹೆಚ್ಚಿನ ಅನುಕೂಲಕರ ವಾತಾವರಣವಿದೆ, ಅನಾವಶ್ಯಕವಾಗಿ ಧನ ಹಾನಿಯಾಗುವುದು, ಹಿರಿಯರ ಸಹಕಾರ ದಿಂದ ಮಾನಸಿಕ ಶಾಂತಿ ಸಿಗಲಿದೆ

ಕನ್ಯಾ: ಮಕ್ಕಳಿಂದ ನಷ್ಟ ಅನುಭವಿಸಬೇಕಾಗುತ್ತದೆ, ರಾಜಕೀಯ ಕ್ಷೇತ್ರದಲ್ಲಿ ವೈರಿಗಳ ಕಾಟದಿಂದ ಅಸಮಾಧಾನ, ಉದ್ಯೋಗದಲ್ಲಿ ಪ್ರಗತಿಯನ್ನು ಸಾಧಿಸುವಿರಿ, ಶುಭ ಕಾರ್ಯಗಳನ್ನು ಕ್ಷಿಪ್ರಗತಿಯಲ್ಲಿ ನೆರವೇರಿಸುವಿರಿ

ತುಲಾ: ಪಾಲುಗಾರಿಕೆಯಲ್ಲಿ ಹಣ ಹೂಡುವುದರಿಂದ ಲಾಭ ಬರುವುದು, ಆಟೋಟ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ, ಸರ್ಕಾರಿ ಅಧಿಕಾರಿ ಗಳು ವಿಪತ್ತಿನಲ್ಲಿ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿವೆ, ಹಲವು ಕಾರ್ಯ ಗಳನ್ನು ಸಮಯಕ್ಕೆ ಸರಿಯಾಗಿಯೇ ಪೂರೈಸುವಿರಿ

ವೃಶ್ಚಿಕ: ನಿಮ್ಮ ಆರೋಗ್ಯ ಉತ್ತಮವಾಗಿರುವುದು, ಅವಿವಾಹಿತರಿಗೆ ಅದೃಷ್ಟ ಬಲ ಹೊಂದಲಿದ್ದಾರೆ, ಪ್ರಯಾಣದಿಂದ ನಷ್ಟ, ಸ್ನೇಹಿತರು ನಿಮ್ಮನ್ನು ಹೀಯಾಳಿಸಬಹುದು, ಅಪರಿಚಿತರ ಆಮಿಷ ಗಳಿಂದ ದೂರ ಉಳಿಯುವಿರಿ, ಸೋಂಬೇರಿತನ ಮಾಡುವುದಿಲ್ಲ

ಧನುಸ್ಸು: ಜೂಜು ಮತ್ತು ಇತರೆ ಕಾರ್ಯಗಳಲ್ಲಿ ನಷ್ಟ ಅನುಭವಿಸಬೇಕಾದೀತು, ನಿರುದ್ಯೋಗಿಗಳಿಗೆ ಹಲವಾರು ಅವಕಾಶಗಳು ಒದಗಿಬರಲಿವೆ, ರಾಜಕೀಯದಲ್ಲಿ ಪದೋನ್ನತಿ, ಪುಣ್ಯಕ್ಷೇತ್ರಗಳ ದರ್ಶನ ಮಾಡುವಿರಿ, ರಾಜಕಾರಣಿಗಳು ನಿಸ್ವಾರ್ಥ ಸೇವೆಗೆ ಆದ್ಯತೆ ನೀಡುವರು, ಇತರರೊಂದಿಗೆ ಬೆರೆಯುವಿರಿ

ಮಕರ: ವೈಭೋಗದ ವಸ್ತುಗಳ ವ್ಯಾಪಾರಿಗಳಿಗೆ ಲಾಭ, ಕಲಾವಿದರಿಗೆ ಲಾಭದಾಯಕ ದಿನ, ಕೌಟುಂಬಿಕವಾಗಿ ಆಗಾಗ ಸಮಸ್ಯೆಗಳು ಕಂಡುಬರಲಿವೆ, ಖರ್ಚುವೆಚ್ಚಗಳು ಅಧಿಕವಾಗಲಿವೆ, ಅನಾವಶ್ಯಕ ವಸ್ತುಗಳ ಖರೀದಿಯಿಂದ ಹಣ ವ್ಯಯವಾಗುವುದು, ಶತ್ರುಗಳಿಂದ ದೂರವಿರಿ, ಸ್ವತ್ತು ವಿವಾದಗಳ ಬಗ್ಗೆ ದೀರ್ಘ ಚರ್ಚಿಸುವಿರಿ, ದೂರ ಪ್ರಯಾಣ ಮಾಡುವಿರಿ

ಕುಂಭ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ಬಂಧುಗಳ ಸಹಾಯ-ಸಹಕಾರ ದೊರೆಯುತ್ತದೆ, ಆರ್ಥಿಕವಾಗಿ ಹೂಡಿಕೆಗಳು ಲಾಭಕರವಾಗಲಿವೆ, ಪಾಲುಗಾರಿಕೆಯಲ್ಲಿ ಹಣ ಹೂಡುವುದ ರಿಂದ ಲಾಭ ಬರುವುದು, ಪ್ರೇಮಿಗಳಿಗೆ ತೊಂದರೆ, ಕ್ಷುಲ್ಲಕ ವಿಚಾರಕ್ಕೆ ಕಲಹಗಳು ನಡೆಯಲಿವೆ.

ಮೀನ: ಅವಶ್ಯಕ ವಸ್ತುಗಳ ಖರೀದಿಯಿಂದ ಹಣ ವ್ಯಯವಾಗುವುದು, ಪತ್ನಿಯ ಆರೋಗ್ಯದಲ್ಲಿ ಏರುಪೇರು, ಕೋರ್ಟ್ ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ, ಗಣ್ಯ ವ್ಯಕ್ತಿಗಳ ಪರಿಚಯವಾಗುತ್ತದೆ, ದೇಶಾದ್ಯಂತ ಸಂಚರಿಸುವ ಯೋಗವಿರುತ್ತದೆ, ದೂರ ಪ್ರಯಾಣ ಮಾಡದಿರುವುದು ಸೂಕ್ತ

Facebook Comments

Sri Raghav

Admin