ಇಂದಿನ ರಾಶಿ ಭವಿಷ್ಯ ( 04-08-2020-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

# ಮೇಷ : ಸಾಂಸಾರಿಕ ಸಮಸ್ಯೆಗಳನ್ನು ವೈಯಕ್ತಿಕವಾಗಿ ಪರಿಹರಿಸಿಕೊಳ್ಳಬೇಕು, ಶುಭಕಾರ್ಯಗಳಿಗಾಗಿ ಓಡಾಟ, ವಿದ್ಯಾರ್ಥಿಗಳಲ್ಲಿ ವಿದ್ಯಾಸಕ್ತಿ ಕಡಿಮೆಯಾದೀತು, ಅವಿವಾಹಿತರ ಪ್ರಯತ್ನಬಲಕ್ಕೆ ಅವಕಾಶಗಳು ಒದಗಿ ಬರಲಿವೆ, ವಾಹನಗಳಿಂದ ನಷ್ಟ, ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಅಪಜಯ, ಬಂಧುಗಳಿಂದ ಕಿರಿಕಿರಿ ಇದೆ

# ವೃಷಭ : ಹಿರಿಯರ ವರ್ತನೆಯಿಂದ ಮನಸ್ಸಿಗೆ ಬೇಸರ, ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿ ವರ್ಗದವರ ಕಿರುಕುಳ, ಕಾರ್ಮಿಕ ವರ್ಗದವರಿಗೆ ಕಾರ್ಯ ಒತ್ತಡ, ಆರೋಗ್ಯ ದಲ್ಲಿ ಜಾಗ್ರತೆ ಇರಲಿ, ರಾಜಕೀಯ ರಂಗದಲ್ಲಿ ಮುನ್ನಡೆ, ವೃತ್ತಿರಂಗದಲ್ಲಿ ನಿಮ್ಮ ಪ್ರತಿಭೆ ಗುರುತಿಸಲ್ಪಡು ತ್ತದೆ, ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ

# ಮಿಥುನ: ಬಂಧು-ಬಳಗದವರೊಂದಿಗೆ ಮನಸ್ತಾಪ, ದಾಂಪತ್ಯದಲ್ಲಿ ಅನ್ಯೋನ್ಯತೆಯಿಂದ ಸಂತಸವಾಗಲಿದೆ, ಧನಾಗಮನ ನಿರಂತರವಾದರೂ ಖರ್ಚು- ವೆಚ್ಚಗಳಲ್ಲಿ ಹೆಚ್ಚು ಜಾಗ್ರತೆ ಇರಲಿ, ಸಾಮಾಜಿಕವಾಗಿ ಸ್ಥಾನ-ಗೌರವ ಪ್ರಾಪ್ತಿ

# ಕಟಕ: ಆಗಾಗ ಕಾರ್ಯವಿಪತ್ತು ಕಾಣಿಸ ಬಹುದು, ಮಾನಸಿಕ ನೆಮ್ಮದಿ ಇರದು, ಮಿತ್ರರ ಆಗಮನದಿಂದ ಸಂತಸ, ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹವಾಗಲಿದೆ, ಸಹೋದರ ವರ್ಗದಲ್ಲಿ ಮಂಗಳಕಾರ್ಯಗಳು ನಡೆಯಲಿವೆ

# ಸಿಂಹ: ಅವಿವಾಹಿತರಿಗೆ ಇಷ್ಟಾರ್ಥ ಸಿದ್ಧಿ ಸೂಚನೆ, ಆತ್ಮವಿಶ್ವಾಸಗಳು ಮುನ್ನಡೆಗೆ ಸಾಧಕವಾಗಲಿವೆ, ಕೋರ್ಟು-ಕಚೇರಿ ಕಾರ್ಯ ಗಳಿಗೆ ಅಧಿಕ ಖರ್ಚು ಸಂಭವಿಸಲಿದೆ, ರಾಜಕೀಯದವರಿಗೆ ಅಸ್ಥಿರತೆ ಕಾಡುತ್ತದೆ, ಧಾರ್ಮಿಕ ಕಾರ್ಯಗಳಿಗಾಗಿ ಹಣ ಸದ್ವಿನಿಯೋಗವಾಗುವುದು

# ತುಲಾ: ಕಿರು ಸಂಚಾರದಿಂದ ಧನವ್ಯಯ, ಕ್ರಿಯಾಶೀಲತೆಯಲ್ಲಿ ಪ್ರಯತ್ನಬಲ, ಪರರ ಸಾಲ ವಸೂಲಿಗಾಗಿ ಒದ್ದಾಟ, ಅತಿಥಿಗಳ ಆಗಮನ, ಪ್ರಾಮಾಣಿಕತೆ, ಶ್ರಮಕ್ಕೆ ಬೆಲೆ ಸಿಗಲಿದೆ, ಮಹತ್ವದ ಕಾರ್ಯಗಳಿ ಗಾಗಿ ಮುನ್ನಡೆ ಸಾಧಿಸುವಿರಿ

# ವೃಶ್ಚಿಕ :ಹಿರಿಯರಿಗೆ ಪುಣ್ಯಕ್ಷೇತ್ರ ಗಳ ದರ್ಶನ ಭಾಗ್ಯವಿದೆ, ಹೊಸ ವಾಹನ ಖರೀದಿ ಯಲ್ಲಿ ಹೆಚ್ಚು ಆಸಕ್ತಿ ತೋರಿಸುವಿರಿ, ವ್ಯಾಪಾರ- ವ್ಯವಹಾರ ಗಳಲ್ಲಿ ಸಮಾಧಾನವಿಲ್ಲ, ಧರ್ಮ ಪತ್ನಿಗೆ ವಾಹನ ಯೋಗವಿದೆ, ಚಿಕ್ಕ ಚಿಕ್ಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯದಿಂದ ಕಲಹ ತಂದೀತು, ವ್ಯಾಪಾರಾವಲಂಬಿತವಾಗಿ ಫಲ ಕೊಟ್ಟೀತು

# ಧನುಸ್ಸು: ಅಧಿಕಾರಿ ವರ್ಗದವರ ಮತಭೇದದಿಂದ ಕಾರ್ಯ ವಿಳಂಬ, ದೂರ ಪ್ರಯಾಣ, ಮಕ್ಕಳಿಗೆ ವಿದ್ಯಾಭಾಗ್ಯ ಲಭಿಸಲಿದೆ, ಅವಿವಾಹಿತರಿಗೆ , ಕಂಕಣಭಾಗ್ಯವಿದೆ, ದೂರ ಸಂಚಾರದಲ್ಲಿ ಅಪಘಾತ ಭೀತಿ

# ಮಕರ: ರಾಜಕೀಯ ವಲಯದವರಿಗೆ ತುಸು ಚೇತರಿಕೆ ಆದರೂ ಒಮ್ಮೊಮ್ಮೆ ಅಧೈರ್ಯದ ಹೆಜ್ಜೆಯಿಂದ ಆತಂಕ, ಮದುವೆ ಯೋಗಕ್ಕೆ ಆಗಾಗ ಅಡೆತಡೆಗಳಿರುತ್ತವೆ, ಸಾಂಸಾರಿಕ ಅಡಚಣೆಗಳು ಕಿರಿಕಿರಿ ತರಲಿವೆ

# ಕುಂಭ: ಹಿರಿಯರ ಮಾರ್ಗದರ್ಶನದಿಂದ ಮುನ್ನಡೆ, ಸಾಲ ವಸೂಲಿಗಾಗಿ ದೂರ ಪ್ರಯಾಣ ಮಾಡುವಿರಿ, ಆಗಾಗ ಆರಕ್ಷಕರ ಭೀತಿ, ಯೋಗ್ಯ ವಯಸ್ಕರ ವೈವಾಹಿಕ ಭಾಗ್ಯಕ್ಕೆ ವಿಳಂಬ, ನಿರುದ್ಯೋಗಿಗಳಿಗೆ ಉದ್ಯೋಗ ಲಾಭ

# ಮೀನ: ಶುಭವಾರ್ತೆಗಳು ಕಾರ್ಯಾನುಕೂಲಕ್ಕೆ ಪೂರಕವಾಗಲಿವೆ, ಮಕ್ಕಳ ವಿಚಾರದಲ್ಲಿ ಜಾಗ್ರತೆಯಿಂದಿರಿ,ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸ-ಕಾರ್ಯಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ, ಆರ್ಥಿಕವಾಗಿ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ

Facebook Comments

Sri Raghav

Admin