ಇಂದಿನ ರಾಶಿ ಭವಿಷ್ಯ (05-07-2020 ಭಾನುವಾರ )

ಈ ಸುದ್ದಿಯನ್ನು ಶೇರ್ ಮಾಡಿ

ಮೇಷ : ಆಕಸ್ಮಿಕ ರೀತಿಯಲ್ಲಿ ನಿರೀಕ್ಷಿತ ಕೆಲಸ- ಕಾರ್ಯಗಳು ನಡೆಯಲಿವೆ, ಮಕ್ಕಳಿಂದ ನೆಮ್ಮದಿ ಇರುತ್ತದೆ, ಚೈತನ್ಯಯುತ ಮಾರ್ಗೋಪಾಯದಿಂದ ತಕರಾರುಗಳಿಂದ ವಿಮೋಚನೆಗೊಳ್ಳುವಿರಿ, ನಿಮ್ಮ ಸಂಬಂಧದ ಎಲ್ಲಾ ದೂರುಗಳು ಮತ್ತು ದೋಷಗಳು ದೂರವಾಗಲಿವೆ.ಪ್ರತಿಯೊಂದು ಕೆಲಸ-ಕಾರ್ಯಗಳಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಫಲ ಸಿಗುತ್ತದೆ

ವೃಷಭ : ಗೃಹದಲ್ಲಿ ಮದುವೆ-ಮುಂಜಿ ಮುಂತಾದ ಕಾರ್ಯಗಳು ನಡೆಯಲಿವೆ, ಶುಭವಾರ್ತೆ ಕೇಳುವಿರಿ, ಮನಸ್ಸಿಗೆ ನೋವನ್ನುಂಟುಮಾಡುವ ವಿಷಯಗಳ ಬಗ್ಗೆ ಆಸ್ಪದ ನೀಡುವುದಿಲ್ಲ, ನಿಮ್ಮ ಪ್ರೇಮ ಜೀವನ ಇಂದು ಒಂದು ಸುಂದರ ತಿರುವನ್ನು ತೆಗೆದುಕೊಳ್ಳುತ್ತದೆ.ನಾನಾ ಕಡೆಗಳಿಂದ ಸಹಾಯ ಒದಗಿ ಬರುವ ಸಾಧ್ಯತೆಗಳಿವೆ, ವಕೀಲರಿಗೆ ಉತ್ತಮ ಸಮಯ

ಮಿಥುನ: ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಬೇಕು, ಲಾಭದಾಯಕ ವ್ಯವಹಾರಗಳ ವಿಚಾರದಲ್ಲಿ ನಿಗೂಢ ವಿಷಯ ಬೆಳಕಿಗೆ ಬರುವುದು, ಖರ್ಚಿನ ಮೇಲೆ ಹಿಡಿತವಿಲ್ಲದಿದ್ದರೆ ಸಂಕಷ್ಟಕ್ಕೆ ಸಿಲುಕಿವಿರಿ, ಆದಾಯವು ಉತ್ತಮವಾಗಿರುವುದ ರಿಂದ ಆರ್ಥಿಕ ಬಿಕ್ಕಟ್ಟು ಬಗೆಹರಿಯುತ್ತದೆ

ಕಟಕ : ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ, ಕೆಲವು ಸಮಯದಲ್ಲಿ ಬುದ್ಧಿ ಇಲ್ಲದವರಂತೆ ಮಾತನಾಡುವಿರಿ, ಮಡದಿಯ ಮುನಿಸು ಧನವ್ಯಯಕ್ಕೆ ಕಾರಣವಾಗಲಿದೆ, ಸಂಬಂಧಗಳೊಂದಿಗಿನ ಬಂಧಗಳು ನವೀಕರಣವಾಗುವ ಒಂದು ದಿನ.

ಸಿಂಹ: ವ್ಯಾಪಾರ-ವ್ಯವಹಾರಗಳು ಉತ್ತಮ ರೀತಿಯಲ್ಲಿ ನಡೆಯಲಿವೆ, ಕಲಿತಿರುವುದನ್ನು ಎಲ್ಲರಿಗೂ ತಿಳಿಸಬೇಕೆನ್ನುವ ಕುತೂಹಲವಿರುವುದು, ನಿಮ್ಮಲ್ಲಿ ಯಾವ ರಹಸ್ಯವೂ ಉಳಿಯುವುದಿಲ್ಲ, ಹಿಡಿದ ಕಾರ್ಯ ಮುಗಿಸದೆ ಬಿಡುವುದಿಲ್ಲ

ಕನ್ಯಾ: ಹಿರಿಯ ಅಧಿಕಾರಿಗಳಿಗೆ ಆಕಸ್ಮಿಕ ವರ್ಗಾವಣೆ ಸಾಧ್ಯತೆ, ಸ್ವಾರ್ಥ ಜನರಿಂದ ದೂರ ಇರುವಿರಿ, ದಾಂಪತ್ಯಜೀವನ ಸುಖಕರವಾಗಲಿದೆ.ಇಂದು ನಿಮ್ಮ ವೈವಾಹಿಕ ಜೀವನದಲ್ಲಿನ ಪರಿಸ್ಥಿತಿಗಳು ನಿಯಂತ್ರಣ ಮೀರಬಹುದು. ಹಿರಿಯ ಅಧಿಕಾರಿಗಳ ಸಹಾಯ ದೊರೆಯುತ್ತದೆ

ತುಲಾ: ನೂತನ ಮಾರ್ಗಗಳು ಆದಾಯಕ್ಕೆ ಪೂರಕವಾಗಲಿವೆ, ಬಂಧು-ಮಿತ್ರರಿಗೆ ಒಳ್ಳೆಯದನ್ನು ಮಾಡುವಿರಿ, ಒತ್ತಡದ ಕೆಲಸದದಿಂದ ಅನಿಶ್ಚಿತ ಎದುರಿಸುವಿರಿ.ಒತ್ತಡದಲ್ಲಿರುವವರಿಗೆ ನಿಮ್ಮ ಸಹಾನುಭೂತಿ, ತಿಳುವಳಿಕೆಯ ಅಗತ್ಯವಿದೆ.

ವೃಶ್ಚಿಕ : ನಿರುದ್ಯೋಗಿಗಳಿಗೆ ಹಲ ವಾರು ಅವಕಾಶಗಳು ಬರಲಿವೆ, ಬಲಭುಜದಲ್ಲಿ ನೋವು ಕಾಣಿಸುವುದು, ವೈದ್ಯರ ಸಲಹೆ-ಸೂಚನೆ ಪಡೆಯಿರಿ, ಆರೊಗ್ಯ ಪರಿಪೂರ್ಣ ವಾಗಿರುತ್ತದೆ.

ಧನುಸ್ಸು: ರಾಜಕೀಯ ವರ್ಗದವರಿಗೆ ಸೂಕ್ತ ಸ್ಥಾನಮಾನ, ಗೌರವ ಸಿಗಲಿದೆ, ದೇವತಾ ಕಾರ್ಯಗಳು ನಡೆಯಲಿವೆ, ವಾಹನ ಚಾಲನೆ ಬಗ್ಗೆ ಎಚ್ಚರವಿರಲಿ, ರಜಾದಿನಗಳ ಬಗ್ಗೆ ಯೋಜನೆ ಹಾಕಲಿದ್ದೀರಿ.

ಮಕರ: ಆಕಸ್ಮಿಕ ಧನಲಾಭ, ಭೂ ಸಂಬಂಧ ಶುಭ ವಾರ್ತೆ ಬರುವುದು, ವಿದ್ಯಾರ್ಥಿಗಳಿಗೆ ಉತ್ತಮ ದಿನ, ಯಾವ ಕೆಲಸಗಳಲ್ಲಿಯೂ ಆಸಕ್ತಿ ಇರುವುದಿಲ್ಲ, ನಿಮ್ಮ ಶಕ್ತಿಯನ್ನು ನಾಶಪಡಿಸುವ ಎಲ್ಲವನ್ನೂ ನಾಶಪಡಿಸಲಿದ್ದೀರಿ.

ಕುಂಭ: ಶುಭ ಕಾರ್ಯಗಳಿಗೆ ಹಣ ಖರ್ಚು ಮಾಡುವಿರಿ, ತಂದೆ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಉತ್ತಮ, ಜನರಿಂದ ದೂರವಿರುವುದು ಉತ್ತಮ, ವಿರೋಧಿಗಳ ನಡುವೆಯೂ ಜಯ ದೊರೆಯಲಿದೆ, ಭೋಗವಸ್ತು ವ್ಯಾಪಾರಿಗಳಿಗೆ, ಸಿನಿಮಾ ದವರಿಗೆ, ಕಲಾವಿದರಿಗೆ ಲಾಭದಾಯಕ ದಿನ

ಮೀನ: ಪಾಲು ಬಂಡವಾಳದಲ್ಲಿ ವಂಚನೆ ಸಾಧ್ಯತೆ, ಮನೆಯಲ್ಲಿ ಚೋರ ಬಾಧೆಯ ಭೀತಿ ಕಾಡಲಿದೆ, ಸ್ನೇಹಿತರೊಂದಿ ಗೆ ಔತಣಕೂಟದಲ್ಲಿ ಭಾಗವಹಿಸುವಿರಿ. ಭೂ ಸಂಬಂಧ ಕೆಲಸ-ಕಾರ್ಯಗಳು ಸುಗಮವಾಗಿ ನಡೆಯಲಿವೆ

Facebook Comments

Sri Raghav

Admin