ಇಂದಿನ ರಾಶಿ ಭವಿಷ್ಯ (06-07-2020 ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ಮೇಷ : ಸ್ತ್ರೀಯರಿಂದ ನಿಮಗೆ ಅಗೌರವ ಪ್ರಾಪ್ತಿ ಯಾಗಬಹುದು, ಸಹೋದರಿಯರಿಂದ ಕಲಹ, ಸಂಶೋಧನಾ ಕಾರ್ಯಗಳಲ್ಲಿ ಭಾಗ ವಹಿಸುವಿರಿ, ಹೇಗಾದರೂ ಹೆಸರು ಮಾಡುವಿರಿ, ಔಷಧ ವ್ಯಾಪಾರಿಗಳಿಗೆ ಲಾಭದಾಯಕ, ತುರ್ತು ಕಾರ್ಯ ಬಂದರೂ ಯಾರನ್ನೂ, ಯಾವುದಕ್ಕೂ ಅಡ್ಡಿಪಡಿಸುವುದಿಲ್ಲ

ವೃಷಭ : ಪುಣ್ಯಸ್ಥಳಗಳಲ್ಲಿ ಸ್ನಾನ ಮಾಡುವಿರಿ, ಕೆಲಸಗಳಲ್ಲಿ ತೊಂದರೆ ಅನುಭವಿಸುವಿರಿ, ಶತ್ರುಗಳ ಕಾಟ ಜಾಸ್ತಿಯಾಗುವುದು, ಮಕ್ಕಳ ವಿಷಯದಲ್ಲಿ ಅವರು ಹೇಳಿದಂತೆ ಕೇಳಿಕೊಂಡು ಕೆಲಸ ಮಾಡಿಸಿಕೊಳ್ಳುವಿರಿ

ಮಿಥುನ: ಯಾವುದೇ ರೀತಿಯ ಸ್ಪರ್ಧೆಯನ್ನಾದರೂ ನೀವು ಎದುರಿಸುತ್ತೀರಿ, ವೃಥಾ ಅಲೆದಾಟ, ಮನಸ್ಸಿನ ದುಃಖ ದೂರಾಗುವುದಿಲ್ಲ, ಕಣ್ಣಿನ ತೊಂದರೆ, ರಕ್ತದ ಒತ್ತಡ, ರಕ್ತದೋಷ ಕಂಡುಬರುವ ಸಾಧ್ಯತೆ ಇದೆ, ಎಲ್ಲರನ್ನೂ ಒಂದೇ ರೀತಿ ನೋಡುವಿರಿ

ಕಟಕ : ಮೌನವಾಗಿರುವುದು ಉತ್ತಮ, ಸಾಲದ ಸುಳಿಯಿಂದ ಹೊರಬರುತ್ತೀರಿ, ಪಿತ್ರಾರ್ಜಿತ ಆಸ್ತಿ ಕೈ ಬಿಟ್ಟು ಹೋಗುವುದು, ಬಂಧು-ಮಿತ್ರರಿಂದಲೇ ತೊಂದರೆ ಯಾಗುವುದು, ಹಣ ಸೌಲಭ್ಯ ನಿಲ್ಲುವುದು, ಎಲ್ಲದರಲ್ಲೂ ತೃಪ್ತಿಕರವಾದ ಮನಸ್ಸಿರುವುದು

ಸಿಂಹ: ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ಪ್ರಾಪ್ತಿ, ಶರೀರ ದೌರ್ಬಲ್ಯವಿರುವುದು, ದುಃಖ ಪಡುವಿರಿ, ಕುಟುಂಬಕ್ಕೆ ಹೊಸ ಮುಖ ಪರಿಚಯವಾಗುವುದು, ಅಸೂಯಾಪರರು ನಿಮ್ಮನ್ನು ವಿರೋಧಿಸುವರು

ಕನ್ಯಾ: ಆತುರ, ಅವಸರ ಪಡದೆ ತಾಳ್ಮೆಯಿಂದ ವ್ಯವಹರಿಸಿದಲ್ಲಿ ಎಲ್ಲಾ ಕಾರ್ಯಗಳು ನೆರವೇರುವುವು, ಧನ-ಧಾನ್ಯ, ಆರೋಗ್ಯ ವೃದ್ಧಿಯಾಗುವುದು, ನಿಮ್ಮ ನೆಚ್ಚಿನ ಸ್ನೇಹಿ ತರು ಇಕ್ಕಟ್ಟಿಗೆ ಸಿಲುಕಿಸುವರು.ಬಂಧುಗಳಿಂದ ತೊಂದರೆಯೇ ಹೆಚ್ಚು, ಯಾರನ್ನೂ ಶತ್ರುಗಳೆಂದು ತಿಳಿಯುವುದಿಲ್ಲ

ತುಲಾ: ದೂರದ ಬಂಧುವಿನ ಆಗಮನದಿಂದ ಸಂತಸ ವಾಗುತ್ತದೆ, ಹೊಸ ಹುದ್ದೆ ಸಿಗಲಿದೆ, ಸಂಗೀತಗಾರರಿಗೆ ಪ್ರೋತ್ಸಾಹ ನೀಡುವಿರಿ, ಶುಭ ಹಾಗೂ ಶ್ರೇಷ್ಠ ಕೆಲಸಗಳಿಗೆ ಕೈ ಹಾಕುವಿರಿ, ಎಲ್ಲವನ್ನೂ ಕಲಿಯ ಬೇಕೆಂಬ ಆಸಕ್ತಿ ಇರುವುದು

ವೃಶ್ಚಿಕ: ವಿದ್ಯಾರ್ಥಿಗಳು ಓದಿನಲ್ಲಿ ನಿರಾಸಕ್ತರಾಗುವರು, ನೈತಿಕ ಬಲ ಬರುವುದು, ವಾದ-ವಿವಾದ ಗಳಿಂದಾಗಿ ವಿನಾಕಾರಣ ತಪ್ಪಿಗೆ ಸಿಲುಕಿಕೊಳ್ಳುವಿರಿ,ಹಣಕಾಸು ವಿಷಯ ದಲ್ಲಿ ಮೋಸವಾಗುವ ಸಂದರ್ಭಗಳು ಎದುರಾಗಲಿವೆ, ಕಲಿತದ್ದನ್ನು ಇತರರಿಗೆ ಕಲಿಸುವಿರಿ, ನಿಮಗೆ ಹೆಚ್ಚು ವೈರಿಗಳು ಇರುವುದಿಲ್ಲ

ಧನುಸ್ಸು: ವಿವಿಧ ಮೂಲಗಳಿಂದ ಹಣವ್ಯಯ ವಾಗುತ್ತದೆ, ಧರ್ಮವನ್ನು ನಿಷ್ಠೆಯಿಂದ ಪಾಲಿಸಿ, ವಾಹನಗಳ ಖರೀದಿಸುವ ಯೋಗವಿದೆ, ಹಣದ ವಿಷಯದಲ್ಲಿ ಜಾಗ್ರತೆ, ಶತ್ರುಗಳಿಂದ ಕಾರ್ಯಗಳಿಗೆ ಅಡ್ಡಿ-ಆತಂಕಗಳು ಬರಲಿವೆ. ಯಾರಿಗೇ ಆಗಲಿ ಅವಸರವಾಗಿ ತೊಂದರೆ ಕೊಡುವುದಿಲ್ಲ, ಮನಸ್ಸು ನೋಯಿಸುವುದಿಲ್ಲ

ಮಕರ: ವೈರಿಗಳು ನಿಮ್ಮ ಹತ್ತಿರ ಬರಲು ಹೆದರುತ್ತಾರೆ, ದುಷ್ಟರ ಸಾಂಗತ್ಯ ಬಿಡಿ, ರಾಜನಂತೆ ಕಂಗೊ ಳಿಸುವಿರಿ, ನಿಮ್ಮ ಹೆಸರು ನಾನಾ ಕಡೆ ಇರುವುದು, ಕುಟುಂಬದಲ್ಲಿ ಅಂತಃಕಲಹ ಪ್ರಾರಂಭ ವಾಗುವುದು, ಬಂಧುಗಳೇ ಶತ್ರುಗಳಾಗುವರು, ಕೆಲಸಗಳನ್ನು ಅಧಿಕಾರಿಗಳು ಮೆಚ್ಚುವಂತೆ ಮಾಡುವಿರಿ, ಸಾಮಾನ್ಯವಾಗಿ ಒಳ್ಳೆಯ ಸ್ಥಿತಿಯಲ್ಲಿರುವಿರಿ

ಕುಂಭ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಹಿತಶತ್ರುಗಳು ಹೆಚ್ಚಿನ ತೊಂದರೆ ಕೊಡುವರು, ಅನಾರೋಗ್ಯದಿಂದ ಮನಸ್ಸಿಗೆ ಶಾಂತಿ ಇರುವುದಿಲ್ಲ, ಸಾಧು-ಸಂನ್ಯಾಸಿಗಳ ದರ್ಶನವಾಗು ವುದು, ಮಠಾಧಿಪತಿಗಳು ಮನೆಗೆ ಬರುವರು, ಹೆಚ್ಚು ಹಣ ಸಂಪಾದನೆ ಮಾಡುವಿರಿ

ಮೀನ: ದೂರ ಪ್ರಯಾಣ ಮಾಡದಿರುವುದು ಸೂಕ್ತ, ಬಂಧುಗಳಿಂದ ಕಷ್ಟಕ್ಕೆ ಸಿಲುಕುವಿರಿ, ಶತ್ರುಗಳನ್ನು ಮಣಿಸಿ ಬುದ್ಧಿ ಹೇಳುವಿರಿ, ಧರ್ಮಶಾಸ್ತ್ರಗಳ ಅಭ್ಯಾಸ ಮಾಡುವಿರಿ, ಸಂಕಷ್ಟಗಳಿಂದ ಪಾರಾಗುವಿರಿ

Facebook Comments

Sri Raghav

Admin