ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-03-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಮ್ಮೊಳಗಿರುವ ಅಜ್ಞಾನವೆಂಬ ಕಲ್ಮಶವನ್ನು ತೊಳೆಯಲು ಹೊರಗಿನಿಂದ ನೀರನ್ನು ತಂದು ತುಂಬಿಕೊಳ್ಳುವುದಲ್ಲ. ಒಳಗಿರುವ ಮಣ್ಣನ್ನು ಸ್ವಲ್ಪ ಸರಿಸಿದರೆ ಸಾಕು ಒಳಗಿರುವ ಅರಿವೆಂಬ ಅಂತರಗಂಗೆ ಹರಿಯುತ್ತಾಳೆ. ಮನಸ್ಸಿನಲ್ಲಿರುವ ಅಜ್ಞಾನವನ್ನು ತೊಳೆಯುತ್ತಾಳೆ. ಅದಕ್ಕಾಗಿ ತನ್ನನ್ನು ತಾನರಿತ ಸ್ವಯಂ ಜ್ಞಾನದ ಅರಿವಿರಬೇಕು.
– ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ 07.03.2021, ಭಾನುವಾರ
ಸೂರ್ಯ ಉದಯ ಬೆ.06.32 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ರಾ.02.28 / ಚಂದ್ರ ಅಸ್ತ ಮ.01.06
ಶಾರ್ವರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ (ರಾ.04.48) / ನಕ್ಷತ್ರ: ಮೂಲಾ (ರಾ.08.59) / ಯೋಗ: ಸಿದ್ಧಿ (ಮ.03.51) / ಕರಣ: ಗರಜೆ-ವಣಿಜ್ (ಸಾ.04.48-ರಾ.04.14) / ಮಳೆ ನಕ್ಷತ್ರ: ಶತಭಿಷಾ / ಮಾಸ: ಕುಂಭ / ತೇದಿ: 24

# ಇಂದಿನ ಭವಿಷ್ಯ
ಮೇಷ: ವ್ಯಾಪಾರ-ವ್ಯವಹಾರಗಳ ಹೂಡಿಕೆ ಲಾಭಕರ. ವಿದ್ಯಾರ್ಥಿಗಳು ಯಶಸ್ಸು ಸಾಸುವರು
ವೃಷಭ: ಖರ್ಚು-ವೆಚ್ಚಗಳ ಬಗ್ಗೆ ಗಮನ ಹರಿಸ ಬೇಕು. ವೃತ್ತಿ ರಂಗದಲ್ಲಿ ತಾಳ್ಮೆ, ಸಮಾಧಾನ ಅಗತ್ಯ
ಮಿಥುನ: ಬಂಧುಗಳಿಂದ ವಿಶೇಷ ರೀತಿಯಲ್ಲಿ ಸಹಕಾರ ಸಿಗುತ್ತದೆ. ಆರೋಗ್ಯದಲ್ಲಿ ಜಾಗ್ರತೆ

ಕಟಕ: ಅಲಂಕಾರಿಕ ವಸ್ತುಗಳ ಖರೀದಿಗೆ ನಾನಾ ರೀತಿಯಲ್ಲಿ ಧನವ್ಯಯವಾಗಲಿದೆ
ಸಿಂಹ: ದೂರಾಲೋಚನೆಯಿಂದ ಕಾರ್ಯತಂತ್ರ ರೂಪಿಸಿ
ಕನ್ಯಾ: ಕೆಲಸ-ಕಾರ್ಯಗಳು ಅಡಚಣೆಗಳಿಂದಲೇ ಮುಂದುವರಿಯಲಿವೆ
ತುಲಾ: ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ. ದೇಹಾರೋಗ್ಯದಲ್ಲಿ ಏರುಪೇರಾಗಲಿದೆ. ಹತ್ತಿರ ಬಂಧುಗಳ ಬಗ್ಗೆ ಜಾಗ್ರತೆ ವಹಿಸಿ

ವೃಶ್ಚಿಕ: ಉದ್ಯೋಗಿಗಳಿಗೆ ಉದ್ಯೋಗ ಬದಲಾವಣೆ. ಶತ್ರುಗಳೂ ಸಹ ಮಿತ್ರರಾಗುವರು
ಧನುಸ್ಸು: ಹಿರಿಯರ ಕೋಪಕ್ಕೆ ಕಾರಣರಾಗದಿರಿ
ಮಕರ: ಶುಭ ಸಮಾರಂಭದಲ್ಲಿ ಓಡಾಟ ಇರುತ್ತದೆ
ಕುಂಭ: ಅನಾವಶ್ಯಕ ಖರ್ಚು-ವೆಚ್ಚಗಳಿರುತ್ತವೆ
ಮೀನ: ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ

Facebook Comments

Sri Raghav

Admin