ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-12-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಿನ್ನ ಗುರಿ ಭಗವಂತನನ್ನು ಸೇರುವುದೇ ಆಗಿದ್ದರೆ ಹಣ, ಅಧಿಕಾರ, ಕೀರ್ತಿ ಮುಂತಾದವು ನಿನ್ನನ್ನು ಬಾಧಿಸುವುದಿಲ್ಲ.

# ಪಂಚಾಂಗ : ಗುರುವಾರ , 09-12-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ/ ನಕ್ಷತ್ರ: ಧನಿಷ್ಠಾ/ ಮಳೆ ನಕ್ಷತ್ರ: ಜ್ಯೇಷ್ಠ
* ಸೂರ್ಯೋದಯ : ಬೆ.06.30
* ಸೂರ್ಯಾಸ್ತ : 05.54
* ರಾಹುಕಾಲ : 1.30-3.00
* ಯಮಗಂಡ ಕಾಲ : 6.00-7.30
* ಗುಳಿಕ ಕಾಲ : 9.00-10.30

#ಇಂದಿನ ರಾಶಿಭವಿಷ್ಯ
ಮೇಷ: ಯಾವುದು ಸರಿ, ಯಾವುದು ತಪ್ಪು ಎಂಬು ದನ್ನು ತಿಳಿದುಕೊಳ್ಳುವುದೇ ಕಷ್ಟಸಾಧ್ಯವಾಗಲಿದೆ.
ವೃಷಭ: ಸ್ನೇಹಿತರನ್ನು ಉಳಿಸಿಕೊಳ್ಳಿ. ಪ್ರತಿಯೊಂದು ವಿಷಯದಲ್ಲೂ ಅನುಮಾನ ಪಡುವುದನ್ನು ಬಿಡಿ. ಒರಟು ಮಾತುಗಳಂತೂ ಬೇಡವೇ ಬೇಡ.
ಮಿಥುನ: ವಿದೇಶ ಪ್ರಯಾಣ ಮಾಡಬೇಕು ಎಂದಿದ್ದಲ್ಲಿ ಅಲ್ಪಾವಧಿಯ ಪ್ರಯಾಣ ಮಾಡಬಹುದು.

ಕಟಕ: ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಬೇಕು ಎಂದು ಬಯಸುವ ವಿದ್ಯಾರ್ಥಿಗಳಿಗೆ ಸಹಾಯ ಮತ್ತು ಮಾರ್ಗ ದರ್ಶನ ದೊರೆಯಲಿದೆ.
ಸಿಂಹ: ಸಂತಾನ ಅಪೇಕ್ಷಿತ ದಂಪತಿಗೆ ಶುಭ ಸುದ್ದಿ ಕೇಳುವ ಯೋಗವಿದೆ.
ಕನ್ಯಾ: ಕೆಲಸ ಸ್ಥಳದಲ್ಲಿ ಸಕಾರಾತ್ಮಕವಾದ ಬದಲಾವಣೆ ನಿರೀಕ್ಷಿಸಬಹುದು.

ತುಲಾ: ಸೈಟು- ಮನೆ, ಕಾರು ಖರೀದಿಗೆ ಅವಕಾಶವಿದೆ. ಸಣ್ಣ ಪುಟ್ಟ ವಿಚಾರದಲ್ಲಿಯೂ ಕಾನೂನು ಮೀರದಿರಿ.
ವೃಶ್ಚಿಕ: ಅಡ್ಡದಾರಿಯಲ್ಲಿ ಹಣ ಮಾಡುವ ಆಲೋ ಚನೆಯೇನಾದರೂ ನಿಮಗೆ ಬಂದಲ್ಲಿ ಮನಸ್ಸನ್ನು ಹತೋಟಿಯಲ್ಲಿರಿಸಿಕೊಳ್ಳುವುದು ಉತ್ತಮ.
ಧನುಸ್ಸು: ವಿಷ ಜಂತುಗಳಿಂದ ಅಪಾಯವಿದೆ. ಆದ್ದರಿಂದ ಅಂಥ ಪ್ರದೇಶಗಳಲ್ಲಿ ವಾಸಿಸುವವರು, ಪ್ರಯಾಣ ಮಾಡುವವರು ಎಚ್ಚರಿಕೆ ವಹಿಸಬೇಕು.

ಮಕರ: ಹಲವು ಅಡೆತಡೆ ಹಾಗೂ ಸವಾಲುಗಳು ನಿವಾರಣೆಯಾಗುತ್ತವೆ. ಹಣಕಾಸಿನ ಹರಿವು ಉತ್ತಮ ವಾಗಿರುತ್ತದೆ.
ಕುಂಭ: ಉದ್ಯೋಗ ಮಾಡುತ್ತಿರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು. ಸೋದರ- ಸೋದರಿಯರ ನಡುವೆ ಅಸಮಾಧಾನ ಉಂಟಾಗಬಹುದು.
ಮೀನ: ಬರಬೇಕಾದ ಹಳೇ ಬಾಕಿ ಇದ್ದಲ್ಲಿ ಬರುವ ಸಾಧ್ಯತೆ ಇದೆ. ಅದನ್ನು ಆಪತ್ಕಾಲಕ್ಕೆಂದು ಎತ್ತಿಟ್ಟುಕೊಳ್ಳಿ.

Facebook Comments