ಇಂದಿನ ರಾಶಿ ಭವಿಷ್ಯ (10-07-2020- ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

# ಮೇಷ :
ಮಗನೊಡನೆ ಜಗಳ ಸಂಭವಿಸಬಹುದು, ಧೈರ್ಯವಿದ್ದರೂ ಹಣದ ಕೊರತೆ ಎದುರಿಸುವ ಸಂದರ್ಭಗಳು ಎದುರಾಗಲಿವೆ, ಸರ್ಕಾರಿ ಕೆಲಸದಲ್ಲಿ ಜಯ ಸಿಗಲಿದೆ

# ವೃಷಭ :
ಪತ್ನಿ ಹಾಗೂ ಮಕ್ಕಳು ಅನಾರೋಗ್ಯ ದಿಂದ ನೆಮ್ಮದಿ, ಕಳೆದುಕೊಳ್ಳುವ ಸೂಚನೆಗಳಿವೆ, ಹೃದಯದ ತೊಂದರೆ ಉಂಟಾಗುವ ಸಾಧ್ಯತೆಗಳಿವೆ, ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ, ಹೆಂಡತಿ-ಮಕ್ಕಳ ಆರೋಗ್ಯದ ಕಡೆ ಗಮನವಿ ರಲಿ, ನಿಮ್ಮ ಆರೋಗ್ಯ ಉತ್ತಮವಾಗಿರುವುದು

# ಮಿಥುನ:
ಅಜೀರ್ಣ ವ್ಯಾಧಿ, ಜ್ವರದ ಬಾಧೆ ನಿಮ್ಮನ್ನು ಕಾಡಬಹುದು ಎಚ್ಚರಿಕೆಯಿಂದಿರಿ, ಶುಭ ಕಾರ್ಯಗಳ ಬಗ್ಗೆ ಚಿಂತನೆ ನಡೆಸುವಿರಿ, ಮನೆಯಲ್ಲಿ ದೇವತಾ ಕಾರ್ಯಗಳು ಜರುಗುವುವು

# ಕಟಕ :
ಮನೆಯಲ್ಲಿ ಅಶಾಂತಿ ವಾತಾವರಣ ಮೂಡುವುದು, ಬಂಧುಗಳ ಭೇಟಿ ಯಿಂದ ಕಲಹ ಉಂಟಾಗಲಿದೆ, ಕೆಲಸ-ಕಾರ್ಯ ಗಳನ್ನು ಒತ್ತಡದಿಂದ ಮಾಡ ಬೇಕಾದ ಪರಿಸ್ಥಿತಿ ಬರಲಿದೆ

# ಸಿಂಹ:
ಅಧಿಕಾರಿಗಳಿಂದ ಅತೃಪ್ತಿ ಉಂಟಾಗಲಿದೆ, ಹೆಂಡತಿ ಮನೆಯ ವರ ಕೆಲಸಗಳನ್ನು ಮಾಡುವಿರಿ, ಪಾಲುದಾರಿಕೆಯಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿರಿ

# ಕನ್ಯಾ:
ಮುಖ್ಯ ವಿಷಯ ಗಳಲ್ಲಿ ಪ್ರಗತಿ ಸಾಧಿಸುವಿರಿ,  ಮಕ್ಕಳ ಆರೋಗ್ಯ ದಲ್ಲಿ ಏರುಪೇರಾಗಲಿದೆ, ಖರ್ಚು ಹೆಚ್ಚುವುದು, ಕೆಲವರಿಗೆ ಆಭರಣದಿಂದ ಲಾಭವಿದೆ

# ತುಲಾ:
ದಾಂಪತ್ಯದಲ್ಲಿ ನಿರಾಸೆ ಉಂಂಟಾಗಲಿದೆ, ದುಷ್ಟರ ಸಹವಾಸ ದಿಂದ ದೂರವಿರುವಿರಿ, ಹೆಂಡತಿ-ಮಕ್ಕಳು ಸಂಕಷ್ಟಕ್ಕೆ ಸಿಲುಕುವರು, ದೂರ ಪ್ರಯಾಣ ಮಾಡದಿರಿ

#ವೃಶ್ಚಿಕ:
ಅತಿಯಾದ ಕೋಪ ದಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುವಿರಿ, ಹೆಂಡತಿ-ಮಕ್ಕಳು ಸಂಕಷ್ಟಕ್ಕೆ ಸಿಲುಕುವರು, ದೂರ ಪ್ರಯಾಣ ಮಾಡದಿರಿ, ಅನಿರೀಕ್ಷಿತ ಆಸ್ತಿ ಬರುವ ಸಂಭವವಿದೆ

# ಧನುಸ್ಸು:
ಉನ್ನತ ಅಧಿಕಾರಿಗಳಿಂದ ತೊಂದರೆಯಾಗುವ ಸೂಚನೆಗಳಿವೆ, ದೂರದ ಬಂಧುಗಳನ್ನು ಭೇಟಿ ಮಾಡು ವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ

# ಮಕರ:
ರಾಜಕೀಯ ವ್ಯಕ್ತಿಗಳಿಗೆ, ಸರ್ಕಾರಿ ನೌಕರರಿಗೆ ಈ ದಿನ ಉತ್ತಮವಾಗಿರುವುದಿಲ್ಲ, ಗುರು ದೈವ ಭಕ್ತಿ ಮತ್ತು ಆರಾಧನೆಯಿಂದ ನಿಮಗೆ ಶುಭವಾಗುವುದು

# ಕುಂಭ:
ಬರಹಗಾರರು, ಮುದ್ರಕರು, ಪ್ರಕಾಶಕರಿಗೆ, ಪುಸ್ತಕ ವ್ಯಾಪಾರಿಗಳಿಗೆ ಲಾಭವಿದೆ, ಗೌರವ, ಕೀರ್ತಿ ಲಭಿಸಲಿದೆ, ಕೋರ್ಟ್ ವ್ಯವಹಾರದಲ್ಲಿ ಜಯ ಸಾಧಿಸುವಿರಿ

# ಮೀನ:
ಸ್ನೇಹಿತರಿಂದ ಶುಭ ಸುದ್ದಿ ಕೇಳುವಿರಿ, ಅವಿವಾಹಿತರಿಗೆ ವಿವಾಹ ಯೋಗವಿದೆ, ಹೆಂಡತಿ ಜತೆ ಜಗಳ ಸಂಭವಿಸ ಬಹುದು, ಎಚ್ಚರಿಕೆಯಿಂದಿರುವುದು ಒಳಿತು

Facebook Comments

Sri Raghav

Admin