ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-01-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅಂತಃಕರಣವನ್ನು ಶುದ್ಧಿ ಮಾಡಿಕೊಂಡು ಭಕ್ತಿಯ ಆಳಕ್ಕೆ ಇಳಿದದ್ದೇ ಆದರೆ ಭಗವಂತನ ಕೃಪೆ ದೊರೆಯುತ್ತದೆ. ತನ್ಮೂಲಕ ನಮ್ಮ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ, ಸೋಮವಾರ 11.01.2021
ಸೂರ್ಯ ಉದಯ ಬೆ.06.45 / ಸೂರ್ಯ ಅಸ್ತ ಸಂ.06.10
ಚಂದ್ರ ಉದಯ ಸಂ.05.46 / ಚಂದ್ರ ಅಸ್ತ ಸಂ.04.23
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ತ್ರಯೋದಶಿ (ಮ.02.33) / ನಕ್ಷತ್ರ: ಜ್ಯೇಷ್ಠಾ (ಬೆ.09.09) / ಯೋಗ: ವೃದ್ಧಿ-ಧ್ರವ (ಬೆ.08.40-ರಾ.05.38) / ಕರಣ: ವಣಿಜ್-ಭದ್ರೆ (ಮ.02.33-ರಾ.01.26)
ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಧನುರ್ಮಾಸ / ತೇದಿ: 27

# ರಾಶಿ ಭವಿಷ್ಯ
ಮೇಷ: ಹೆಂಡತಿಯ ಕಡೆಯಿಂದ ಆಸ್ತಿ ಬರುವ ಸಂಭವವಿದೆ. ಆರೋಗ್ಯ ಉತ್ತಮವಾಗಿರುವುದು
ವೃಷಭ: ಮನೆಯವರ ಹಿತಕ್ಕಾಗಿ ಬೇಕಾಗುವ ಕೆಲಸ-ಕಾರ್ಯಗಳನ್ನು ಮಾಡುವಿರಿ
ಮಿಥುನ: ಧೈರ್ಯದಿಂದ ಸಂದರ್ಭಗಳನ್ನು ಎದುರಿಸಿ

ಕಟಕ: ಯಾವುದೇ ಕಾರ್ಯ ಮಾಡು ವಾಗ ಹತ್ತಾರು ಬಾರಿ ವಿಚಾರ ಮಾಡಿ ನಿರ್ಧಾರ ಕೈಗೊಳ್ಳಿ
ಸಿಂಹ: ಜನಮನ್ನಣೆ ಗಳಿಸುವ ಅವಕಾಶಗಳು ಹೆಚ್ಚಾಗಿವೆ. ಧನಲಾಭವಾಗುವುದು
ಕನ್ಯಾ: ಸ್ನೇಹಿತರು ನಿಮ್ಮನ್ನು ಹೀಯಾಳಿಸಬಹುದು. ಶತ್ರುಗಳಿಂದ ದೂರವಿರಿ

ತುಲಾ: ಪತಿ-ಪತ್ನಿಯರ ನಡುವೆ ವಿರಸ ಕಂಡುಬರುತ್ತದೆ. ಅನಾವಶ್ಯಕವಾಗಿ ಧನ ಹಾನಿ ಯಾಗುವುದು. ಆರೋಗ್ಯದ ಬಗ್ಗೆ ಗಮನವಿರಲಿ
ವೃಶ್ಚಿಕ: ಧರ್ಮಕಾರ್ಯಕ್ಕಾಗಿ ಹಣ ಖರ್ಚು ಮಾಡಿ
ಧನುಸ್ಸು: ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ

ಮಕರ: ಹಳೆ ಬಂಧುಗಳ ಭೇಟಿಯಿಂದ ಹಲವಾರು ರೀತಿಯ ಅನುಕೂಲಗಳಾಗುತ್ತದೆ
ಕುಂಭ: ದುರ್ಜನರ ಸಹವಾಸ ಮಾಡದಿರಿ
ಮೀನ: ವಿದೇಶ ಪ್ರಯಾಣದಿಂದ ಶುಭವಾಗಲಿದೆ

Facebook Comments

Sri Raghav

Admin