ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-01-2022)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸ್ವಲ್ಪ ಉಳ್ಳವನು ಬಡವನಲ್ಲ. ಇನ್ನೂ ಬೇಕೆನ್ನುವವನು ಬಡವ.

ಪಂಚಾಂಗ: ಶನಿವಾರ , 15-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಮಾರ್ಗಶಿರ ಮಾಸ | ಶುಕ್ಲ ಪಕ್ಷ | ತಿಥಿ: ತ್ರಯೋದಶಿ| ನಕ್ಷತ್ರ: ಮೃಗಶಿರಾ| ಮಳೆ ನಕ್ಷತ್ರ: ಉತ್ತರಾಷಾಢ

* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.12
* ರಾಹುಕಾಲ : 9.00-10.30
* ಯಮಗಂಡ ಕಾಲ : 1.30-3.00
* ಗುಳಿಕ ಕಾಲ : 6.00-7.30

#ಇಂದಿನ ಭವಿಷ್ಯ :
ಮೇಷ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಕುಟುಂಬದಲ್ಲಿ ಪೋಷಕರ ಬೆಂಬಲ ಸಿಗಲಿದೆ.
ವೃಷಭ: ಮೇಲಧಿಕಾರಿಗಳು ಕಟ್ಟುನಿಟ್ಟಾಗಿ ನಡೆಸಿಕೊಳ್ಳುವರು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸದಿರುವುದು ಒಳ್ಳೆಯದು.
ಮಿಥುನ: ಹಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ವೆಚ್ಚ ಹೆಚ್ಚಾಗಬಹುದು.

ಕಟಕ: ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ತೊಂದರೆ ಎದುರಿಸಬೇಕಾಗಬಹುದು. ಆದರೂ ಸಹಪಾಠಿಗಳ ಬೆಂಬಲ ಸಿಗಲಿದೆ.
ಸಿಂಹ: ಆತ್ಮವಿಶ್ವಾಸದಿಂದ ಹೆಚ್ಚಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಪ್ರತಿಯೊಂದು ಕೆಲಸವನ್ನೂ ತ್ವರಿತವಾಗಿ ಪೂರ್ಣಗೊಳಿಸುವಿರಿ.
ಕನ್ಯಾ: ಹಿರಿಯರೊಡನೆ ಭಿನ್ನಾಭಿಪ್ರಾಯವಿದ್ದರೆ ಪರಿಹರಿಸಿಕೊಳ್ಳಿ.

ತುಲಾ: ನಿಮ್ಮ ಕೆಲಸವು ತಾತ್ಕಾಲಿಕವಾಗಿದ್ದರೆ, ಈ ಸಮಯದಲ್ಲಿ ಕೆಲಸದ ಬಗ್ಗೆ ತುಂಬಾ ಚಿಂತೆ ಮಾಡುವಿರಿ.
ವೃಶ್ಚಿಕ: ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು.
ಧನುಸ್ಸು: ಕೆಲವು ಕಾರಣಗಳಿಂದ ತೊಂದರೆಗೊಳಗಾಗಬಹುದು. ಪೋಷಕರ ಆಶೀರ್ವಾದ ಪಡೆಯಿರಿ.

ಮಕರ: ಆಸ್ತಿಗೆ ಸಂಬಂಧಿಸಿದ ವಿಷಯದಲ್ಲಿ ಯಶಸ್ಸು ಪಡೆಯುವಿರಿ. ಕೆಲಸ-ಕಾರ್ಯಗಳಲ್ಲಿ ಹಿರಿಯ ಅಧಿಕಾರಿಗಳ ಬೆಂಬಲ ದೊರೆಯಲಿದೆ.
ಕುಂಭ: ಹಳೆಯ ಪರಿಚಯಸ್ಥರನ್ನು ಭೇಟಿ ಮಾಡಬಹುದು. ಆರೋಗ್ಯದ ಬಗ್ಗೆ ಗಮನ ಹರಿಸಿ.
ಮೀನ: ಪ್ರೇಮ ಜೀವನದಲ್ಲಿ ಉತ್ತಮ ಬದಲಾವಣೆ ಗಳಾಗುತ್ತವೆ. ಸಮಸ್ಯೆಗಳು ಬಗೆಹರಿಯಲಿವೆ.

Facebook Comments