ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-05-2022)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾರನ್ನಾದರೂ ಕೀಳಾಗಿ ಕಾಣುವ ಮುನ್ನ ಒಮ್ಮೆ ಯೋಚಿಸು. ನಿನ್ನನ್ನು ಅದಕ್ಕಿಂತ ನೂರುಪಟ್ಟು ಕೀಳಾಗಿ ಕಾಣಲು ಮೇಲೊಬ್ಬ ಇರುವನೆಂದು.

# ಪಂಚಾಂಗ : ಭಾನುವಾರ, 15-05-2022
ಶುಭಕೃತ್ ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ /
ಶುಕ್ಲ ಪಕ್ಷ / ತಿಥಿ: ಚತುರ್ದಶಿ/ ನಕ್ಷತ್ರ: ಸ್ವಾತಿ/ಮಳೆ ನಕ್ಷತ್ರ: ಕೃತ್ತಿಕಾ

* ಸೂರ್ಯೋದಯ : ಬೆ.5.54
* ಸೂರ್ಯಾಸ್ತ : 06.38
* ರಾಹುಕಾಲ : 4.30-6.00
* ಯಮಗಂಡ ಕಾಲ : 12.00-1.30
* ಗುಳಿಕ ಕಾಲ : 3.00-4.30

# ಇಂದಿನ ರಾಶಿ ಭವಿಷ್ಯ : 
ಮೇಷ: ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುವುದ ರಿಂದ ನಿಮ್ಮ ಪ್ರತಿಷ್ಠೆ ಮತ್ತು ಗೌರವವನ್ನು ಹೆಚ್ಚಿಸುತ್ತದೆ.
ವೃಷಭ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ತಮ್ಮ ಹಣ ಕಳೆದುಕೊಳ್ಳಬಹುದು.
ಮಿಥುನ: ರಿಯಲ್ ಎಸ್ಟೇಟ್‍ಗೆ ಸಂಬಂಧಿಸಿದ ಯಾವುದೇ ಗೊಂದಲಗಳು ಸೃಷ್ಟಿಯಾಗಬಹುದು.

ಕಟಕ: ದೈಹಿಕ ಒತ್ತಡ ಕಡಿಮೆಯಾಗುವುದರಿಂದ ಮಾನಸಿಕ ಶಕ್ತಿ ಹೆಚ್ಚಾಗಲಿದೆ.
ಸಿಂಹ: ನಿಮ್ಮ ಮಾತುಗಳು ನಿಮ್ಮ ಆಪ್ತರಿಗೆ ಅರ್ಥ ವಾಗುವುದಿಲ್ಲವಾದ್ದರಿಂದ ತೊಂದರೆಗೆ ಸಿಲುಕುವಿರಿ
ಕನ್ಯಾ: ಹಳೆಯ ಸ್ನೇಹಿತರ ಭೇಟಿಯಿಂದ ಗೊಂದಲಗಳಿಗೆ ಪರಿಹಾರ ದೊರೆಯಲಿವೆ.

ತುಲಾ: ವ್ಯವಹಾರದ ವಿಷಯದಲ್ಲಿ ಸ್ನೇಹಿತರ ಸಹಕಾರ ಸಿಗಲಿದೆ.
ವೃಶ್ಚಿಕ: ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ಸಂತೋಷ ಸಿಗಲಿದೆ.
ಧನುಸ್ಸು: ಖರ್ಚು ಕಡಿತ ಮಾಡುವುದು ಮುಖ್ಯ ಎಂಬುದನ್ನು ನೆನಪಿನಲ್ಲಿಡಿ.

ಮಕರ: ಕೆಲಸ ಮಾಡುವ ಮೊದಲೇ ಅದರ ಬಗ್ಗೆ ಒಳ್ಳೆಯದು ಕೆಟ್ಟದ್ದನ್ನು ಯೋಚಿಸಬೇಡಿ.
ಕುಂಭ: ತಾಯಿ-ತಂದೆ ಮತ್ತು ಕುಟುಂಬದವರ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು.
ಮೀನ: ಪ್ರೇಮ ಸಂಬಂಧಗಳು ಬಲವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

Facebook Comments