ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-10-2020, ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

# ನಿತ್ಯ ನೀತಿ :
ಮನುಷ್ಯ ಇಂದ್ರಿಯ ಸುಖಗಳಿಗೆ ಹಾಗೂ ಸ್ವಾರ್ಥ ಲಾಲಸೆಗಳಿಗೆ ದಾಸರಾಗದೆ ಸಾರ್ಥಕ ವಾದ ಸತ್ಕರ್ಮಗಳಲ್ಲಿ ತೊಡಗಿಸಿಕೊಳ್ಳಬೇಕು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಶುಕ್ರವಾರ, 16.10.2020
ಸೂರ್ಯ ಉದಯ ಬೆ.06.10 / ಸೂರ್ಯ ಅಸ್ತ ಸಂ.06.00
ಚಂದ್ರ ಉದಯ ನಾ.ಬೆ.06.30 / ಚಂದ್ರ ಅಸ್ತ ಮ.05.52
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ ಮಾಸ /
ಕೃಷ್ಣ ಪಕ್ಷ / ತಿಥಿ: ಅಮಾವಾಸ್ಯೆ (ರಾ.01.01) / ನಕ್ಷತ್ರ: ಹಸ್ತಾ (ಮ.02.58) / ಯೋಗ: ಇಂದ್ರ-ವೈಧೃತಿ (ಬೆ.06.07-ರಾ.01.45) / ಕರಣ: ಚತುಷ್ಪಾದ-ನಾಗವಾನ್
(ಮ.02.58-ರಾ.01.01) / ಮಳೆ ನಕ್ಷತ್ರ: ಚಿತ್ತಾ / ಮಾಸ: ಕನ್ಯಾ, ತೇದಿ: 30

# ರಾಶಿಭವಿಷ್ಯ : 
ಮೇಷ: ನಿಮ್ಮ ಕೆಲವು ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವಿರಿ
ವೃಷಭ: ಅನೇಕ ಕೆಲಸಗಳು ನಿಮ್ಮಿಂದ ನಡೆಯಲಿವೆ
ಮಿಥುನ: ಮಧ್ಯಸ್ಥಿಕೆಯಲ್ಲಿ ಕೆಲವು ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳುವುದು ಒಳ್ಳೆಯದು
ಕಟಕ: ಆಲಸ್ಯ ತೊರೆದು ಕಾರ್ಯಪ್ರವೃತ್ತದಲ್ಲಿ ಒಳಿತಾಗುವುದು

ಸಿಂಹ: ಕೆಲಸಗಳನ್ನು ಸುಲಭ ವಾಗಿ ಮಾಡಿ ಮುಗಿಸಲು ಹಿರಿಯರ ಸಹಾಯ ಮತ್ತು ಸಹಕಾರ ದೊರೆಯುವುದು ಕನ್ಯಾ: ಶೀಘ್ರವಾಗಿ ಅಭಿಪ್ರಾಯಗಳನ್ನು ಬದಲಾಯಿಸಿಕೊಳ್ಳುವಿರಿ
ತುಲಾ: ಹಣದ ತೊಂದರೆ ಇಲ್ಲದಿದ್ದರೂ ಸಾಲ ಮಾಡುವ ಸಂದರ್ಭ ಬರಲಿದೆ
ವೃಶ್ಚಿಕ: ನಿಮ್ಮ ಶತ್ರುಗಳು ದೂರ ಸರಿಯುವರು

ಧನುಸ್ಸು: ಹೊಸ ವಸ್ತುಗಳ ಖರೀದಿಸುವಿರಿ
ಮಕರ: ಮನೆಯಲ್ಲಿ ಹೊಸಬರ ಪರಿಚಯವಾಗುವುದು
ಕುಂಭ: ಆದಷ್ಟು ಮೌನವಾಗಿದ್ದರೆ ಒಳ್ಳೆಯದು
ಮೀನ: ವಿದೇಶ ಪ್ರವಾಸದ ಕನಸು ಕಾಣುವಿರಿ

Facebook Comments

Sri Raghav

Admin