ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ (17-10-2020, ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಜ್ಞಾನಿಯಾದ ವ್ಯಕ್ತಿಗೆ ಯಾರೊಡನೆಯೂ,  ಸ್ರ್ಪಸಬೇಕು, ಎದುರಾಳಿಯನ್ನು ಸೋಲಿಸಿ ತಾನು ಗೆಲುವನ್ನು ಸಾಸಬೇಕು ಎಂಬ ಭಾವನೆ ಇರುವುದಿಲ್ಲ. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಶನಿವಾರ,17.10.2020
ಸೂರ್ಯ ಉದಯ ಬೆ.06.10 / ಸೂರ್ಯ ಅಸ್ತ ಸಂ.06.00
ಚಂದ್ರ ಉದಯ ಬೆ.06.30 / ಚಂದ್ರ ಅಸ್ತ ಮ.06.40
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ನಿಜ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪತ್ (ರಾ.09.09) / ನಕ್ಷತ್ರ: ಚಿತ್ತಾ (ರಾ.11.11) / ಯೋಗ: ವಿಷ್ಕಂಭ (ಮ.03.02) / ಕರಣ: ಕಿಂಸ್ತುಘ್ನ-ಭವ (ಬೆ.11.04-ರಾ.09.09) / ಮಳೆ ನಕ್ಷತ್ರ: ತುಲಾ / ಮಾಸ: ಕನ್ಯಾ, ತೇದಿ: 01

ವಿಶೇಷ: ತುಲಾ ಸಂಕ್ರಮಣ, ರವಿ ತುಲಾ ರಾಶಿ ಪ್ರವೇಶ ರಾ.01.03,  ಶರನ್ನವರಾತ್ರಿ ಪ್ರಾರಂಭ, ತಲಕಾವೇರಿಯಲ್ಲಿ ತೀರ್ಥೋದ್ಭವ

ಮೇಷ: ನಿಮ್ಮ ಮನಸ್ಸಿಗೆ ಒಪ್ಪದ ಕೆಲಸಗಳ ಬಗ್ಗೆ ಹೆಚ್ಚು ಚಿಂತಿಸುವುದು ತರವಲ್ಲ
ವೃಷಭ: ನಿಮಗೆ ಸಂಬಂಧಪಡದ ವಿಷಯಗಳಲ್ಲಿ ಮೂಗು ತೂರಿಸದಿರಿ. ಕ್ಲಿಷ್ಟ ಪರಿಸ್ಥಿತಿಗಳು ಎದುರಾಗಲಿವೆ
ಮಿಥುನ: ಆರೋಗ್ಯ ಸದೃಢವಾಗಿರುತ್ತದೆ
ಕಟಕ: ಚಿಕ್ಕ ವಿಷಯವೊಂದು ಭೂತಾ ಕಾರ ತಳೆದು ದೊಡ್ಡ ಸಮಸ್ಯೆಯನ್ನೇ ತರುವ ಸಾಧ್ಯತೆ ಇದೆ

ಸಿಂಹ: ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು
ಕನ್ಯಾ: ತಂದೆಯವರ ಆರೋಗ್ಯ ಬಿಗಡಾಯಿಸುವುದು
ತುಲಾ: ಕಲಹ ಪ್ರಿಯರಿಂದ ನಿಮಗೆ ತೊಂದರೆಯಾಗಲಿದೆ
ವೃಶ್ಚಿಕ: ಪ್ರಯಾಣವನ್ನು ಆದಷ್ಟು ಮುಂದೂಡುವುದು ಒಳಿತು

ಧನುಸ್ಸು: ಬಂಧು-ಮಿತ್ರರೊಂದಿಗೆ ಆದಷ್ಟು ಎಚ್ಚರಿಕೆಯಿಂದ ವ್ಯವಹರಿಸಿ. ಮೋಸ ಹೋಗದಿರಿ
ಮಕರ: ಅನೇಕ ರೀತಿಯಾದ ಕೆಲಸ ಕಾರ್ಯಗಳಿಂದ ಹಣ ಸಂಪಾದನೆ ಮಾಡುವಿರಿ
ಕುಂಭ: ಒಣ ಹರಟೆ ಉಪಯೋಗಕ್ಕೆ ಬಾರದ ಮಾತುಗಳನ್ನಾಡುತ್ತ ಸಮಯ ವ್ಯರ್ಥ ಮಾಡದಿರಿ
ಮೀನ: ಹಳೆಯ ಸ್ನೇಹಿತರು ಸಹಾಯ ಮಾಡುವರು

Facebook Comments

Sri Raghav

Admin