ಇಂದಿನ ಪಂಚಾಗ ಮತ್ತು ರಾಶಿಫಲ (19-08-2019-ಸೋಮವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಚೆನ್ನಾಗಿ ಜೀರ್ಣವಾದ ಅನ್ನ, ಒಳ್ಳೆಯ ಸಾಮಥ್ರ್ಯವುಳ್ಳ ಮಗ, ಚೆನ್ನಾಗಿ ವಶಪಡಿಸಲ್ಪಟ್ಟ ಹೆಂಗಸು, ಚೆನ್ನಾಗಿ ಸೇವಿಸಲ್ಪಟ್ಟ ರಾಜ, ಚೆನ್ನಾಗಿ ಯೋಚಿಸಿ ಹೇಳಲ್ಪಟ್ಟ ಮಾತು, ಚೆನ್ನಾಗಿ ವಿಚಾರ ಮಾಡಿದ ಕೆಲಸ- ಇವು ಬಹಳ ಕಾಲವಾದ ಮೇಲೂ ಬದಲಾವಣೆ ಹೊಂದುವುದಿಲ್ಲ.-ಹಿತೋಪದೇಶ

# ಪಂಚಾಂಗ : 19.08.2019, ಸೋಮವಾರ
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.39
ಚಂದ್ರ ಉದಯ ರಾ.09.20 / ಚಂದ್ರ ಅಸ್ತ ಬೆ.08.56
ವಿಕಾರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ/ ಕೃಷ್ಣ ಪಕ್ಷ / ತಿಥಿ: ಚತುರ್ಥಿ
(ರಾ.03.30) / ನಕ್ಷತ್ರ: ಉತ್ತರಾಭಾದ್ರ (ರಾ.07.48) / ಯೋಗ: ಧೃತಿ (ಮ.03.43) / ಕರಣ: ಭವ-ಬಾಲವ (ಮ.02.24-ರಾ.03.30) / ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 02

# ರಾಶಿ ಭವಿಷ್ಯ
ಮೇಷ: ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹವಾಗಲಿದೆ. ನಿಮ್ಮ ಕನಸು ನನಸಾಗಲಿದೆ
ವೃಷಭ: ಹಿರಿಯರ ಆಸ್ತಿಪಾಸ್ತಿಗಳಲ್ಲಿ ನಿಮಗೆ ಸಮಪಾಲು ಸಿಗಲಿದೆ. ಸಾಲ ಮರುಪಾವತಿಯಾಗಲಿದೆ
ಮಿಥುನ: ದೃಢ ನಿರ್ಧಾರ ಗಳಿಂದ ಕಾರ್ಯಾನುಕೂಲವಾಗಲಿವೆ
ಕಟಕ:ಹಿರಿಯ ಅಧಿಕಾರಿಗಳಿಗೆ ಮುಂಬಡ್ತಿ ಸಿಗಲಿದೆ
ಸಿಂಹ: ಹಣಕಾಸಿನ ವಿಚಾರ ದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ
ಕನ್ಯಾ: ಗೃಹ ಅಥವಾ ನಿವೇಶನ ಖರೀದಿಗೆ ಮನಸ್ಸು ಮಾಡುವಿರಿ
ತುಲಾ: ಅಂದುಕೊಂಡ ಕಾರ್ಯ ಗಳು ತ್ವರಿತವಾಗಿ ಸಾಗುವುವು
ವೃಶ್ಚಿಕ: ಹಂತ ಹಂತವಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ
ಧನುಸ್ಸು: ವೃತ್ತಿ ರಂಗದಲ್ಲಿ ಮನಸ್ಸಿಗೆ ಸಮಾಧಾನ ಸಿಗದು
ಮಕರ: ಅನಿರೀಕ್ಷಿತವಾಗಿ ಅಧಿಕಾರ ಸಿಗಲಿದೆ
ಕುಂಭ: ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ
ಮೀನ: ಸಾಲಗಾರರಿಂದ ಕಿರುಕುಳ ಉಂಟಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

Sri Raghav

Admin