ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-10-2021)

ಈ ಸುದ್ದಿಯನ್ನು ಶೇರ್ ಮಾಡಿ

# ನಿತ್ಯ ನೀತಿ :
ಸ್ವಾರ್ಥದ ಪರದೆಯನ್ನು ಸರಿಸಿದಾಗ ಮಾತ್ರ ಮನುಷ್ಯ ಭಗವಂತನಿಗೆ ಹತ್ತಿರವಾಗಲು ಸಾಧ್ಯ.

# ಪಂಚಾಂಗ : ಮಂಗಳವಾರ 19-10-2021
ಪ್ಲವನಾಮ ಸಂವತ್ಸವ / ದಕ್ಷಿಣಾಯನ / ಶರದೃತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ/ ನಕ್ಷತ್ರ: ಉತ್ತರಾಭಾದ್ರ/ ಮಳೆ ನಕ್ಷತ್ರ: ಚಿತ್ತಾ
# ಸೂರ್ಯೋದಯ : ಬೆ.06.11, ಸೂರ್ಯಾಸ್ತ : 05.59
# ರಾಹುಕಾಲ : 3.00-4.30 , ಯಮಗಂಡ ಕಾಲ:9.00-10.30, ಗುಳಿಕ ಕಾಲ -12.00-1.30

# ರಾಶಿ ಭವಿಷ್ಯ
ಮೇಷ: ಕೆಲವರ ಮಾತುಗಳಿಂದ ಮನಸ್ಸಿಗೆ ನೋವುಂಟಾಗಬಹುದು. ಇತರರ ಸಲಹೆ ಪಡೆಯಿರಿ.
ವೃಷಭ: ಶುಭಕಾರ್ಯ ಮಾಡುವ ಉದ್ದೇಶವಿದೆ. ಸಹೋದ್ಯೋಗಿಗಳ ಸಹಕಾರವಿಲ್ಲದಿದ್ದರೂ ಒಳ್ಳೆಯ ಕೆಲಸ ಮಾಡುವಿರಿ. ದೂರ ಪ್ರಯಾಣ ಬೇಡ.
ಮಿಥುನ: ಹೊಸ ವಾಹನ ಖರೀದಿಸುವ ಯೋಗ ವಿದೆ. ಕೈಗೊಂಡ ಕೆಲಸ-ಕಾರ್ಯಗಳು ಯಶಸ್ವಿಯಾಗಿ ನೆರವೇರಲಿವೆ. ಆದಾಯ ಹೆಚ್ಚಾಗಲಿದೆ.

ಕಟಕ: ವಿವಿಧ ಮೂಲಗಳಿಂದ ಹಣಕಾಸಿನ ನೆರವು ಸಿಗಲಿದೆ.
ಸಿಂಹ: ನಿಮ್ಮ ನಿರ್ಧಾರ ಸರಿಯಾಗಿದ್ದು, ಒಳ್ಳೆಯ ಪ್ರತಿಫಲ ಸಿಗಲಿದೆ.
ಕನ್ಯಾ: ಆರೋಗ್ಯದಲ್ಲಿನ ಸ್ವಲ್ಪಮಟ್ಟಿನ ತೊಂದರೆಗಳು ನಿವಾರಣೆಯಾಗಲಿವೆ.

ತುಲಾ: ನೀವು ನಿಮ್ಮ ಆಲೋಚನೆಯಲ್ಲೇ ಹೆಚ್ಚು ಮಗ್ನರಾಗುತ್ತೀರಿ. ಅನೇಕ ಜನರು ನಿಮ್ಮಿಂದ ಪ್ರಯೋಜನ ಪಡೆಯುತ್ತಾರೆ
ವೃಶ್ಚಿಕ: ಶತ್ರುಗಳೊಂದಿಗೆ ವಾದಿಸುವುದನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ದೊಡ್ಡ ತೊಂದರೆಗೆ ಸಿಲುಕಬಹುದು. ಬುದ್ಧಿವಂತಿಕೆಯಿಂದ ಹೆಜ್ಜೆ ಇರಿಸಿ
ಧನುಸ್ಸು: ಹೊಸ ಹೂಡಿಕೆಗಳಿಂದ ಲಾಭ ಪಡೆ ಯುವ ಸಾಧ್ಯತೆಯಿದೆ. ಅನಗತ್ಯವಾಗಿ ಬೇರೆಯವರ ಮೇಲೆ ದೂರು ನೀಡುವುದನ್ನು ತಪ್ಪಿಸಿ.

ಮಕರ: ನಿಮ್ಮ ಕೋಪ ಅಥವಾ ಚಡಪಡಿಕೆಯಿಂದ ಕುಟುಂಬದ ವಾತಾವರಣ ಹಾಳು ಮಾಡಬೇಡಿ.
ಕುಂಭ: ಇನ್ನೊಬ್ಬರ ವಿವಾದದಲ್ಲಿ ಮಧ್ಯಸ್ಥಿಕೆ ವಹಿ ಸಲು ಹೋದರೆ ನೀವು ತೊಂದರೆಗೆ ಸಿಲುಕಬಹುದು.
ಮೀನ: ಅಕಾರಿಗಳ ಬೆಂಬಲದೊಂದಿಗೆ ದೊಡ್ಡ ಕೆಲಸಗಳು ಪೂರ್ಣಗೊಳ್ಳುತ್ತವೆ. ಚಾತುರ್ಯದಿಂದ ಮಾತುಕತೆ ನಡೆಸಿ. ಆರೋಗ್ಯದ ಬಗ್ಗೆ ಎಚ್ಚರವಿರಲಿ.

Facebook Comments