ಇಂದಿನ ಪಂಚಾಗ ಮತ್ತು ರಾಶಿಫಲ (20-05-2019-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ರಾಜನು ಧರ್ಮಿಷ್ಠನಾದರೆ ಪ್ರಜೆಗಳು ಧರ್ಮಿಷ್ಠರಾಗಿರುತ್ತಾರೆ. ಅವನು ಪಾಪಿಯಾದರೆ ಇವರೂ ಸದಾ ಪಾಪಿಗಳಾಗುತ್ತಾರೆ. ಪ್ರಜೆಗಳು ರಾಜನನ್ನು ಅನುಸರಿಸುತ್ತಾರೆ. ರಾಜನಿದ್ದಂತೆ ಪ್ರಜೆ. -ಭೋಜಪ್ರಬಂಧ
# ಪಂಚಾಂಗ : ಸೋಮವಾರ, 20.05.2019
ಸೂರ್ಯ ಉದಯ ಬೆ.05.54 / ಸೂರ್ಯ ಅಸ್ತ ಸಂ.06.39
ಚಂದ್ರ ಉದಯ ರಾ.08.08 / ಚಂದ್ರ ಅಸ್ತ ಬೆ.07.01
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ (ರಾ.01.22) / ನಕ್ಷತ್ರ: ಜ್ಯೇಷ್ಠಾ (ರಾ.02.29) / ಯೋಗ: ಶಿವ (ಬೆ.11.29) /ಕರಣ: ತೈತಿಲ-ಗರಜೆ (ಮ.01.27-ರಾ.01.22) / ಮಳೆ ನಕ್ಷತ್ರ: ಕೃ ತ್ತಿಕಾ / ಮಾಸ: ವೃಷಭ / ತೇದಿ: 06

# ರಾಶಿ ಭವಿಷ್ಯ
ಮೇಷ: ನೂತನ ವಾಹನ ಬರುವ ಯೋಗವಿರು ವುದು. ಬೇರೆಯವರ ಕೆಲಸಗಳಿಗಾಗಿ ಪ್ರಯಾಣ
ವೃಷಭ: ಮನೆ ಮಂದಿಯೇ ನಿಮ್ಮನ್ನು ಆಡಿ ಕೊಳ್ಳುವುದು ನಿಮಗೆ ನುಂಗಲಾರದ ತುತ್ತಾಗುವುದು
ಮಿಥುನ: ಕಾಗದ ಪತ್ರಗಳಿಗೆ ಸಹಿ ಮಾಡುವಾಗ ಎಚ್ಚರಿಕೆ ಇರಲಿ
ಕಟಕ: ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವುವು
ಸಿಂಹ: ಬಹುವಿಧ ಪ್ರತಿಭೆಯು ಅನಾವರಣಗೊಳ್ಳುವುದು
ಕನ್ಯಾ: ಕೋರ್ಟು-ಕಚೇರಿ ಎಂದು ಹೋದರೆ ನಿಮಗೆ ದಕ್ಕಬೇಕಾದ ಆಸ್ತಿಯೂ ದಕ್ಕದೆ ಹೋಗಬಹುದು
ತುಲಾ: ನಿಮ್ಮ ಪ್ರಯತ್ನದಲ್ಲಿ ಜಯ ಸಿಗಲಿದೆ
ವೃಶ್ಚಿಕ: ಕೆಲವರು ನಿಮ್ಮಿಂದ ಸಹಾಯ ಪಡೆಯುವರು
ಧನುಸ್ಸು: ಅನಿರೀಕ್ಷಿತ ಧನಲಾಭವಾಗಲಿದೆ
ಮಕರ: ವಾದ-ವಿವಾದದಲ್ಲಿ ಭಾಗವಹಿಸಬೇಡಿ
ಕುಂಭ: ಮಕ್ಕಳ ವಿಚಾರ ಚರ್ಚೆಗೆ ಬರುವುದು
ಮೀನ: ಹೆಣ್ಣು ಮಕ್ಕಳಿಗೆ ಉಡುಗೊರೆ ಕೊಡುವಿರಿ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

Sri Raghav

Admin