ಇಂದಿನ ಪಂಚಾಗ ಮತ್ತು ರಾಶಿಫಲ (22-05-2019-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕಗ್ಗತ್ತಲೆಯ ಗುಹೆಯಲ್ಲಿ ಹಾವಾಗಿರುವುದು ಉತ್ತಮ, ಕಲ್ಲಿನ ನಡುವೆ ಹುಳುವಾಗಿರುವುದು ಉತ್ತಮ, ಮರಳ್ಗಾಡಿನಲ್ಲಿ ಕುಂಟುಮೃಗವಾಗಿರುವುದೂ ಉತ್ತಮ. ಆದರೆ ಕೀಳ್ಮಟ್ಟದ ಜನರ ಸಹವಾಸ ಮಾತ್ರ ಉತ್ತಮವಲ್ಲ.  -ಯೋಗವಾಸಿಷ್ಠ

# ಪಂಚಾಂಗ : ಬುಧವಾರ , 22.05.2019 
ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.40
ಚಂದ್ರ ಉದಯ ರಾ.09.56 / ಚಂದ್ರ ಅಸ್ತ ನಾ. ಬೆ.8.43
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ: ಚತುರ್ಥಿ
(ರಾ.2.41) ನಕ್ಷತ್ರ: ಪೂರ್ವಾಷಾಢ (ರಾ.5.13) ಯೋಗ: ಸಾಧ್ಯ (ರಾ.9.50) ಕರಣ: ಭವ-ಬಾಲವ (ಮ.02.06-ರಾ.2.41) ಮಳೆ ನಕ್ಷತ್ರ: ಕೃತ್ತಿಕಾ
ಮಾಸ: ವೃಷಭ ತೇದಿ: 8

#ರಾಶಿ ಭವಿಷ್ಯ

ಮೇಷ : ಅಂದುಕೊಂಡಂತೆ ನಡೆಯುವುದಿಲ್ಲ, ಮಾತಿನಲ್ಲಿ ಹಿಡಿತವಿರಲಿ
ವೃಷಭ : ಆರ್ಥಿಕ ಸಂಕಷ್ಟ ದೂರಾಗಲಿದ್ದು, ಮಕ್ಕಳಿಂದ ಶುಭವಾರ್ತೆ ಕೇಳುವಿರಿ
ಮಿಥುನ: ಆತುರಪಟ್ಟು ಅವಕಾಶ ವಂಚಿತರಾಗದಿರಿ
ಕಟಕ : ಕೆಲಸಗಳು ಸುಗಮವಾಗಿ ಆಗುವುದು
ಸಿಂಹ: ನಿಮ್ಮ ಒರಟು ಸ್ವಭಾವದಿಂದ ಆತ್ಮೀಯರಿಂದ ದೂರಾಗುವಿರಿ
ಕನ್ಯಾ: ಬಾಳಸಂಗಾತಿಯ ಬುದ್ಧಿಮತ್ತೆಯಿಂದ ಸಮಸ್ಯೆ ಗಳಿಗೆ ಪರಿಹಾರ
ತುಲಾ: ವಿರೋಧಿಗಳಿಂದ ಹೊಗಳಿಕೆ
ವೃಶ್ಚಿಕ : ನೂತನ ಬಂಡವಾಳ ಹೂಡಿಕೆಗೆ ಯೋಜನೆ
ಧನುಸ್ಸು: ಬೇಡದ ವಿಚಾರಗಳಿಂದ ಮನಸ್ಸಿಗೆ ನೋವು, ತಾಳ್ಮೆ ವಹಿಸಿದರೆ ಒಳಿತು
ಮಕರ: ಬಂಧುಗಳ ಆಗಮನ ಸಾಧ್ಯತೆ
ಕುಂಭ: ಕಾರ್ಯಗಳಲ್ಲಿ ಜಯ, ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರ
ಮೀನ: ಅನಾರೋಗ್ಯದಿಂದ ಬಳಲಿಕೆ, ಅಧಿಕ ಖರ್ಚು

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ