ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-10-2021)

ಈ ಸುದ್ದಿಯನ್ನು ಶೇರ್ ಮಾಡಿ

# ನಿತ್ಯ ನೀತಿ :
ಪುರುಷಾರ್ಥಗಳಲ್ಲಿ ಮೋಕ್ಷ ಸಾಧನೆಯು ಪರಮ ಗುರಿ. ಇಹದಲ್ಲಿ ಸುಖವಾಗಿ ಬಾಳುವುದಕ್ಕೂ, ಮೋಕ್ಷವನ್ನು ಪಡೆಯುವುದಕ್ಕೂ ಪರಿಶುದ್ಧ ಕರ್ಮಾಚರಣೆ ಉತ್ತಮ ಸಾಧನ.

# ಪಂಚಾಂಗ : ಗುರುವಾರ 21-10-2021
ಪ್ಲವನಾಮ ಸಂವತ್ಸವ / ದಕ್ಷಿಣಾಯನ / ಶರದೃತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್/ ನಕ್ಷತ್ರ: ಅಶ್ವಿನಿ/ ಮಳೆ ನಕ್ಷತ್ರ: ಚಿತ್ತಾ
# ಸೂರ್ಯೋದಯ : ಬೆ.06.11, ಸೂರ್ಯಾಸ್ತ : 05.58
# ರಾಹುಕಾಲ : 1.30-03.00 , ಯಮಗಂಡ ಕಾಲ: 6.00- 07.30, ಗುಳಿಕ ಕಾಲ -09.00-10.30

# ರಾಶಿ ಭವಿಷ್ಯ
ಮೇಷ: ಹಿಡಿದ ಕೆಲಸದಲ್ಲಿ ಅಂದುಕೊಂಡ ಬೆಳವಣಿಗೆ ನಿರೀಕ್ಷಿಸುವುದು ಕಷ್ಟ. ಅದರಲ್ಲೂ ಉದ್ಯೋಗದಲ್ಲಿ ಪ್ರಗತಿ ಸಾಸುವುದು ಸಾಧ್ಯವಿಲ್ಲ.
ವೃಷಭ: ಸಾಲ ತೀರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು ಒಳ್ಳೆಯದು.
ಮಿಥುನ: ಆಸ್ತಿ ದಾಖಲೆ ಪತ್ರಗಳನ್ನು ದೂರ ಪ್ರದೇಶಗಳಿಗೆ ತೆಗೆದುಕೊಂಡು ಹೋಗದಿರಿ.

ಕಟಕ: ಸುಲಭವಾಗಿ ಹಣ ಬರುತ್ತದೆ ಎಂಬ ಆಸೆ ತೋರಿಸಿ, ಕೆಲವರು ನಿಮಗೆ ಹತ್ತಿರವಾಗುವರು. ಅಂತಹವರೊಂದಿಗೆ ಎಚ್ಚರಿಕೆಯಿಂದಿರಬೇಕು.
ಸಿಂಹ: ಮನೆಯಲ್ಲಿ ಅಜ್ಜ- ಅಜ್ಜಿ ಅಥವಾ ವಯಸ್ಸಾದ ತಂದೆ-ತಾಯಿಯನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗಬೇಡಿ.
ಕನ್ಯಾ: ಹೊಸ ವ್ಯಾಪಾರ- ವ್ಯವಹಾರ, ಭೂಮಿ ಮೇಲಿನ ಹೂಡಿಕೆ, ವಿದೇಶ ಪ್ರಯಾಣಕ್ಕೆ ಅನುಕೂಲ ಒದಗಿ ಬರಲಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸಬಹುದು.

ತುಲಾ: ಉದ್ಯೋಗ ಸ್ಥಳದಲ್ಲಿ ಮುಖ್ಯ ಜವಾಬ್ದಾರಿ ಗಳನ್ನು ನಿರ್ವಹಿಸುವಾಗ ಬೇರೆಯವರಿಗೆ ಅದನ್ನು ವರ್ಗಾಯಿಸಬೇಡಿ. ದೇವರ ಮೇಲೆ ನಂಬಿಕೆ ಇರಲಿ.
ವೃಶ್ಚಿಕ: ತಂದೆಯೊಂದಿಗೆ ವಿನಾಕಾರಣ ಸಣ್ಣ- ಪುಟ್ಟ ವಿಷಯಗಳಿಗೆ ಮನಸ್ತಾಪ ಉಂಟಾಗಬಹುದು.
ಧನುಸ್ಸು: ಹಿಡಿದ ಕೆಲಸವನ್ನು ಒಂದೇ ಬಾರಿಗೆ ಪೂರ್ಣಗೊಳಿಸುವುದು ಕಷ್ಟವಾಗಲಿದೆ.

ಮಕರ: ನಿಮ್ಮ ಸ್ವಭಾವದಲ್ಲಿ ಬದಲಾವಣೆ ಮಾಡಿಕೊಂಡು ತಾಳ್ಮೆ- ಸಂಯಮದಿಂದಿರಿ.
ಕುಂಭ: ನೀವಾಗಿಯೇ ಒಪ್ಪಿಕೊಂಡ ಜವಾಬ್ದಾರಿ ಪೂರ್ಣಗೊಳಿಸುವ ಕಡೆಗೆ ಹೆಚ್ಚಿನ ಗಮನ ನೀಡಿ.
ಮೀನ: ಚಾಡಿ ಮಾತು ಕೇಳದಿರಿ. ಯಾವ ವಿಚಾರ ದಲ್ಲೂ ಅತಿಯಾದ ಆತ್ಮ ವಿಶ್ವಾಸ ಒಳ್ಳೆಯದಲ್ಲ.

Facebook Comments