ಇಂದಿನ ಪಂಚಾಗ ಮತ್ತು ರಾಶಿಫಲ (13-06-2019-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪ್ರಾಣಿಗಳಿಗೆ ಜನ್ಮವೇ ದುಃಖ. ಜೀವನವು ದುಃಖಗಳಿಂದ ತುಂಬಿದೆ. ಅಲ್ಲದೆ ಮೃತ್ಯುವು ಕಾದಿದೆ. ಆದುದರಿಂದ ತತ್ತ್ವಬಲ್ಲವರು ಸಂಸಾರವನ್ನು ಬಿಟ್ಟು ಮುಕ್ತಿಗೋಸ್ಕರ ಯತ್ನ ಮಾಡುತ್ತಾರೆ.  -ಕಿರಾತಾರ್ಜುನೀಯ

# ಪಂಚಾಂಗ : ಗುರುವಾರ, 13.06.2019 
ಸೂರ್ಯ ಉದಯ ಬೆ.05.53/ ಸೂರ್ಯ ಅಸ್ತ ಸಂ.06.46
ಚಂದ್ರ ಉದಯ ಮ.03.13/ ಚಂದ್ರ ಅಸ್ತ ರಾ.03.19
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ: ಏಕಾದಶಿ
(ಸಾ.04.50) ನಕ್ಷತ್ರ: ಚಿತ್ತಾ (ಬೆ.10.55) ಯೋಗ: ಪರಿಘ (ರಾ.01.22)  ಕರಣ: ವಣಿಜ್-ಭದ್ರೆ-ಭವ (ಬೆ.05.36-ಸಾ.04.50-ರಾ.04.07)
ಮಳೆ ನಕ್ಷತ್ರ: ಮೃಗಶಿರಾ ಮಾಸ: ವೃಷಭ ತೇದಿ: 30

#ರಾಶಿ ಭವಿಷ್ಯ

ಮೇಷ: ವಿವಿಧ ಮೂಲಗಳಿಂದ ಹಣಕಾಸು ಬರು ವುದರಿಂದ ಇಚ್ಛಿತ ಕಾರ್ಯಗಳು ಕೈಗೂಡುವುದು
ವೃಷಭ: ವಿಚಾರ ಮಾಡದೆ ಸಾಹಸ ಕೆಲಸ- ಕಾರ್ಯಗಳಿಗೆ ಕೈ ಹಾಕುವುದು ಶುಭಕರವಲ್ಲ
ಮಿಥುನ: ಪತ್ನಿಯ ಕಡೆಯಿಂದ ಕೆಲವು ಅನುಕೂಲಗಳು ಹೇಳದೆ ಕೇಳದೆ ಬರುವುದು
ಕಟಕ: ನಿಮ್ಮ ಬುದ್ಧಿವಂತಿಕೆಯೇ ನಿಮಗೆ ಮುಳುವಾಗುವುದು
ಸಿಂಹ: ಕಾಗದ ಪತ್ರಗಳಿಗೆ ಸಹಿ ಮಾಡುವಾಗ ಎಚ್ಚರಿಕೆ ಇರಲಿ
ಕನ್ಯಾ: ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ
ತುಲಾ: ನಿಮ್ಮ ಹಳೆಯ ಗೆಳೆಯರಿಗೆ ಫೋನ್ ಮಾಡಿ ಮಾತುಕತೆ ನಡೆಸಿ
ವೃಶ್ಚಿಕ: ನಿಮ್ಮ ರಹಸ್ಯವನ್ನು ಯಾರಿಗೂ ತಿಳಿಸಬೇಡಿ
ಧನುಸ್ಸು: ಅಪಘಾತವಾಗುವ ಸೂಚನೆಗಳಿವೆ
ಮಕರ: ಕೆಲವರು ನಿಮ್ಮಿಂದ ಸಹಾಯ ಪಡೆಯುವರು
ಕುಂಭ: ರಾಜಕಾರಣಿಗಳ ಒತ್ತಾಸೆ ಹೆಚ್ಚುವುದು
ಮೀನ: ವಾದ-ವಿವಾದದಲ್ಲಿ ಭಾಗವಹಿಸಬೇಡಿ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ