ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-10-2021)

ಈ ಸುದ್ದಿಯನ್ನು ಶೇರ್ ಮಾಡಿ

# ನಿತ್ಯ ನೀತಿ :
ಎಲ್ಲಿ ಮನುಷ್ಯ ನಂಬಿಕೆಯನ್ನು ಕಳೆದುಕೊಳ್ಳುತ್ತಾನೋ ಅಲ್ಲಿ ಪ್ರೀತಿಯನ್ನೂ ಕಳೆದುಕೊಳ್ಳುತ್ತಾನೆ.

# ಪಂಚಾಂಗ : ಶುಕ್ರವಾರ 22-10-2021
ಪ್ಲವನಾಮ ಸಂವತ್ಸವ / ದಕ್ಷಿಣಾಯನ / ಶರದೃತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ/ ನಕ್ಷತ್ರ: ಭರಣಿ/ ಮಳೆ ನಕ್ಷತ್ರ: ಚಿತ್ತಾ
# ಸೂರ್ಯೋದಯ : ಬೆ.06.11, ಸೂರ್ಯಾಸ್ತ : 05.57
# ರಾಹುಕಾಲ : 10.30-12.00 , ಯಮಗಂಡ ಕಾಲ: 03.00- 04.30, ಗುಳಿಕ ಕಾಲ -07.30-09.00

# ರಾಶಿ ಭವಿಷ್ಯ
ಮೇಷ: ಯಾವುದೇ ಕಾರಣವಿಲ್ಲದೆ ಸಹೋದರ- ಸಹೋದರಿಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ಕೆಲಸದ ಒತ್ತಡ ಹೆಚ್ಚಾಗಲಿದೆ.
ವೃಷಭ: ಸಂಬಂಧಿಕರೊಂದಿಗೆ ವ್ಯವಹರಿಸುವಾಗ ಅತ್ಯಂತ ಜಾಗ್ರತೆಯಿಂದ ಇರುವುದು ಒಳಿತು.
ಮಿಥುನ: ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗುವ ಲಕ್ಷಣಗಳಿವೆ. ಕೌಟುಂಬಿಕ ವಾತಾವರಣವು ಆಹ್ಲಾದ ಕರವಾಗಿರುತ್ತದೆ. ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ ಸಿಗಲಿದೆ.

ಕಟಕ:ಬಂಧು-ಮಿತ್ರರ ಆಗಮದಿಂದ ಮನಸ್ಸಿಗೆ ಸಂತೋಷ ಸಿಕ್ಕರೂ ಖರ್ಚು ಹೆಚ್ಚಾಗಲಿದೆ.
ಸಿಂಹ: ಯಾವುದೇ ಕೆಲಸ ಮಾಡುವಾಗ ತಾಳ್ಮೆಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಒಳಿತು.
ಕನ್ಯಾ: ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ಆದಾಯ ಹೆಚ್ಚಾಗಲಿದೆ. ಉತ್ತಮ ಆರೋಗ್ಯವಿರುತ್ತದೆ.

ತುಲಾ: ಅನಗತ್ಯ ವಿಚಾರಗಳಿಗೆ ಕಿವಿಗೊಡದೆ ನಿಮ್ಮ ಕೆಲಸ-ಕಾರ್ಯಗಳನ್ನು ನಿಷ್ಠೆಯಿಂದ ಮಾಡಿದರೆ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.
ವೃಶ್ಚಿಕ: ಹಠಮಾರಿತನದಿಂದ ತೊಂದರೆಗೆ ಸಿಲುಕಬೇಕಾಗಬಹುದು. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಒಳಿತು.
ಧನುಸ್ಸು: ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ರಾಜಕೀಯ ವ್ಯಕ್ತಿಗಳಿಗೆ ಉತ್ತಮ ದಿನ.

ಮಕರ: ಶತ್ರುಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತೀರಿ.
ಕುಂಭ: ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೀರಿ ಸಂತಸದ ವಾತಾವರಣವಿರುತ್ತದೆ.
ಮೀನ: ಕಿರಿಯ ಸಹೋದರ-ಸಹೋದರಿಯರಿಂದ ಹೆಚ್ಚು ಲಾಭ ಬರಲಿದೆ. ದೂರ ಪ್ರಯಾಣ ಮಾಡುವಿರಿ.

Facebook Comments