ಇಂದಿನ ರಾಶಿ ಭವಿಷ್ಯ (23-07-2020, ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ರಾಜಲಕ್ಷ್ಮಿಯು ಕ್ರೂರನಾದವನನ್ನು ಕಂಡು ಬೇಸರಪಡುತ್ತಾಳೆ. ಮೆತ್ತನೆಯವನು ಸೋಲಬಹುದೆಂದು ಹೆದರಿ ಅವನಲ್ಲಿ ಬಹಳ ಕಾಲ ಇರುವುದಿಲ್ಲ. ಮೂರ್ಖನನ್ನು ದ್ವೇಷಿಸುತ್ತಾಳೆ. ಬಹಳ ವಿದ್ವಾಂಸರಲ್ಲಿಯೂ ಪ್ರೀತಿಯನ್ನೂ ತೋರುವುದಿಲ್ಲ. ಪರಾಕ್ರಮಿಗಳನ್ನು ಕಂಡು ಹೆದರುತ್ತಾಳೆ. ಹೇಡಿಗಳನ್ನು ಅಣಕಿಸುತ್ತಾಳೆ.ಪ್ರಚಾರವನ್ನು ಪಡೆದು ಪ್ರಗಲ್ಬೆಯಾದ ವೇಶ್ಯಾಸ್ತ್ರೀಯಂತೆ ರಾಜಲಕ್ಷ್ಮಿಯನ್ನು  ಇಟ್ಟುಕೊಳ್ಳುವುದು ಕಷ್ಟ. -ಮುದ್ರಾರಾಕ್ಷಸ, 3-5

# ಮೇಷ: ಕೋರ್ಟಿನಲ್ಲಿ ಜಯ ಸಾಧಿಸುವಿರಿ, ಕೆಲಸ ನಿಮ್ಮಿತ್ತ ದೂರದ ಪ್ರಯಾಣ, ಗೌರವ, ಕೀರ್ತಿ, ಪ್ರತಿಷ್ಠೆ ಲಭಿಸುತ್ತದೆ, ನಿಮ್ಮ ಮನಸ್ಸಿನಂತೆ ಕಾರ್ಯ ಸಾಧಿಸುವಿರಿ

# ವೃಷಭ: ಪ್ರಯತ್ನಿಸಿದ ಕಾರ್ಯಗಳಿಗೆ ಅಡ್ಡಿ, ಉತ್ತಮ ವಿಚಾರಗಳನ್ನು ಗ್ರಹಿಸಿ,ಎಲ್ಲವನ್ನೂ ನಿರ್ವಹಿಸಲಿದ್ದೀರಿ.ಷೇರು ಮಾರುಕಟ್ಟೆಯಲ್ಲಿ ಹಣ ಹೂಡದಿರಿ

# ಮಿಥುನ: ಆಕಸ್ಮಿಕ ಪ್ರಯಾಣ ಮಾಡಬಹುದು. ಪ್ರೀತಿಪಾತ್ರರ ಜೊತೆ ವಾದ ಸಲ್ಲದು, ಹೊಸ ವೃತ್ತಿ ಪ್ರಾರಂಭಿಸುವಿರಿ

# ಕಟಕ: ನಿಮ್ಮ ಬುದ್ಧಿ ಚಾತುರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಗಲಿದೆ. ಆಕಸ್ಮಿಕ ಧನಲಾಭವಾಗುವುದು , ನಿಮ್ಮ ಪಾಲುದಾರರೊಂದಿಗೆ ಮನಸ್ತಾಪ.ಅನೇಕ ರೀತಿಯ ರೋಗಗಳು ಬಾಧಿಸುತ್ತವೆ

# ಸಿಂಹ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ, ತಪ್ಪು ತಿಳುವಳಿಕೆಯಿಂದ ಉತ್ತಮ ಸ್ನೇಹಿತರನ್ನು ಕಳೆದುಕೊಳ್ಳುವಿರಿ.ಆಕಸ್ಮಿಕವಾಗಿ ಧನಲಾಭವಾಗಲಿದೆ

# ಕನ್ಯಾ: ನೆರೆಹೊರೆಯವರಿಂದ ಹೆಚ್ಚಿನ ಸಹಾಯ ದೊರೆಯುತ್ತದೆ, ನಿಮ್ಮ ಮಾತುಗಳು ಹಿಡಿತ ತಪ್ಪಿ ಕಚೇರಿಯಲ್ಲಿ ಕಿರಿಕಿರಿ.ಅವಕಾಶಗಳು ಹುಡುಕಿಕೊಂಡು ಬರಲಿವೆ

# ತುಲಾ: ಗುರು-ಹಿರಿಯರ ಮಾತನ್ನು ತಿರಸ್ಕರಿಸುವುದರಿಂದ ತೊಂದರೆಯಲ್ಲಿ ಸಿಲುಕುವಿರಿ, ವೈಯಕ್ತಿಕ ಸಮಸ್ಯೆ ಪರಿಹಾರಕ್ಕೆ ಒಬ್ಬ ಹಿರಿಯರಿಂದ ನೆರವು, ಮಕ್ಕಳ ವರ್ತನೆಯಿಂದ ಮನಸ್ಸಿಗೆ ನೋವಾಗುತ್ತದೆ

# ವೃಶ್ಚಿಕ: ತಂದೆ-ತಾಯಿ, ಬಗ್ಗೆ ಅಪಾರ ಗೌರವ ಹೊಂದಿರುತ್ತೀರಿ, ಒಂದು ಪರಿಸ್ಥಿತಿ ಯಿಂದ ಪಲಾಯನ ಮಾಡಿ ದರೆ ಮತ್ತೊಂದು ಕೆಟ್ಟ ಪರಿಸ್ಥಿತಿ ಎದುರಿಸಬೇಕಾದಿತು. ಮಾತಿನಿಂದ ಕಲಹ ವಾಗುತ್ತದೆ. ಖರ್ಚು- ವೆಚ್ಚದಲ್ಲಿ ಹಿಡಿತವಿರಲಿ

# ಧನುಸ್ಸು: ಭಿನ್ನಾಭಿಪ್ರಾಯ ನಿವಾರಣೆಯಾಗುತ್ತದೆ, ಪ್ರಿಯತಮೆಗೆ ಉಡುಗೊರೆ ಕೊಳ್ಳುವರಿ, ರಾಜಕಾರಣಿಗಳಿಂದ ಸಹಾಯ ದೊರೆಯುತ್ತದೆ

# ಮಕರ: ಮನಃಶಾಂತಿಗಾಗಿ ದೇವಾ ಲಯಗಳ ದರ್ಶನ ಮಾಡುವಿರಿ.ಅವಾಸ್ತವಿಕ ಯೋಜನೆ ಹಣದ ಕೊರತೆಗೆ ಕಾರಣವಾಗಲಿದೆ.ಹೆಂಡತಿ, ಮಕ್ಕಳು ತೊಂದರೆಯಲ್ಲಿ ಸಿಲು ಕುವರು, ವೃತ್ತಿಯಲ್ಲಿ ಅಪಕೀರ್ತಿ ಬರಬಹುದು

# ಕುಂಭ: ಅನ್ಯ ಜನರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ, ಕೆಲಸದಲ್ಲಿ , ಮನೆ ಯಲ್ಲಿ ಒತ್ತಡ ನಿಮ್ಮ ಸಹನೆಯನ್ನು ಪರೀಕ್ಷಿಸಲಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ, ನಿಮ್ಮ ಅಭಿಪ್ರಾಯಗಳಿಗೆ ಯಾರೂ ಮಾನ್ಯತೆ ಕೊಡುವುದಿಲ್ಲ

#ಮೀನ: ಕೀರ್ತಿ-ಗೌರವ, ಪ್ರತಿಷ್ಠೆ ದೊರೆಯಲಿದೆ.ನಿಮ್ಮ ಹಠಮಾರಿ ವರ್ತನೆ ಮನೆಯವರಲ್ಲಿ ನೋವುಂಟು ಮಾಡುತ್ತದೆ. ಬಂಧುಗಳ ಸಹಾಯವನ್ನು ವಿನಯವಾಗಿ ತಿರಸ್ಕರಿಸುವಿರಿ, ಐಷಾರಾಮಿ ವಸ್ತು ಖರೀದಿಸುವಿರಿ

Facebook Comments

Sri Raghav

Admin